More

    ಆರು ಜನ ಗಾಯಾಳುಗಳ ಆರೋಗ್ಯ ವಿಚಾರಣೆ

    ಬಾಗಲಕೋಟೆ: ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತದಲ್ಲಿ ಗಾಯಗೊಂಡು ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಗಾಯಾಳುಗಳನ್ನು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
    ಸಿದ್ದಪ್ಪ ಪಂಚಗಾಂವಿ, ಬಾಬು ನದಾ-, ಶಿವಪ್ಪ ಚಿಚಖಂಡಿ, ಮುಂದಕಪ್ಪ ಕುಂಬಾಳೆ ರೋಗಿಗಳು ಹಾಗೂ ಅವರ ಕುಟುಂಬಸ್ಥರ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸೂಕ್ತವಾದ ಚಿಕಿತ್ಸೆ ನೀಡಿ ಅಭಿಮಾನಿಗಳ ಜೀವಕಾಪಾಡಬೇಕು. ಆರೋಗ್ಯ ಮೇಲೆ ನಿಗಾವಹಿಸಬೇಕು ಎಂದು ವೈದ್ಯರಿಗೆ ಕೋರಿಸಿದರು. ಅಲ್ಲದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ರೋಗಿಗಳಿಗೆ ತಲಾ 1 ಲಕ್ಷ ರೂ., ಸಾಮಾನ್ಯ ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ಕು ಜನ ಗಾಯಾಳುಗಳಿಗೆ ತಲಾ 50 ಸಾವಿರ ವೈಯಕ್ತಿಕವಾಗಿ ಸಹಾಯಧನ ವಿತರಿಸಿದರು.
    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಾಗ ಕೆರೂರ ಬಳಿ ಅಪಘಾತವಾಗಿ ಪ್ರಕಾಶ ಬಡಿಗೇರ ಮೃತಪಟ್ಟಿದ್ದರು. ಹಲವರಿಗೆ ಗಾಯವಾಗಿತ್ತು. ಉಳಿದವರು ಆರೋಗ್ಯ ಸುಧಾರಣೆಯಾಗುತ್ತಿದೆ. ಓರ್ವ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದರು.
    ಮಾಜಿ ಸಚಿವ ಈಶ್ವರಪ್ಪ ಪೆದ್ದ..
    ನೆಹರು ಬಗ್ಗೆ ಏಕವಚನದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪದಪ್ರಯೋಗ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈಶ್ವರಪ್ಪ ಓರ್ವ ಪೆದ್ದ. ಏನು ಗೊತ್ತಿಲ್ಲ. ಅವರೆ ಇತಿಹಾಸ ಗೊತ್ತಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವದಿಲ್ಲ. ದೇಶದ ಇತಿಹಾಸ ಗೊತ್ತಿಲ್ಲ ಈಶ್ವರಪ್ಪಗೆ. ನೆಹರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 11 ವರ್ಷ ಜೈಲಿಗೆ ಹೋಗಿದ್ದರು. ಇವರು(ಬಿಜೆಪಿ) ನಾಯಕರು ಯಾರು ಜೈಲಿಗೆ ಹೋಗಿಲ್ಲ. ಗೋಲವಾಲಕರ, ಹೆಗ್ಡೆವಾರ್ ಜೈಲಿಗೆ ಹೋಗಿದ್ರಾ? ನೆಹರು ಬಗ್ಗೆ ಸರಿಯಾಗಿ ಗೊತ್ತಿಲ್ಲ. ಲಘುವಾಗಿ ಮಾತನಾಡುವುದು ತರವಲ್ಲ. ಸ್ವಾತಂತ್ರ್ಯ ಯೋಧರ ಬಗ್ಗೆ ಗೌರವ ಇಟ್ಟುಕೊಂಡಿಲ್ಲ. ಅವರ ಹೋರಾಟದಿಂದ ಸ್ವಾತಂತ್ರ್ಯ ಬಂದಿದೆ. ಈಶ್ವರಪ್ಪ ಹೋರಾಟ ಮಾಡಿದ್ರಾ ಅಂತ ಖಾರವಾಗಿ ಪ್ರಶ್ನಿಸಿದರು.
    ಬಿಜೆಪಿಗೆ ಸ್ವಲ್ಪ ಭಯವಾಗಿದೆ:
    ಸಿದ್ದರಾಮೋತ್ಸವ ಕಾರ್ಯಕ್ರಮದ ಜನಸ್ತೋಮ ನೋಡಿ ಬಿಜೆಪಿಯವರಿಗೆ ಸ್ವಲ್ಪ ಭಯವಾಗಿದೆ. ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯ ಕಾಡುತ್ತಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಮುಖಂಡರಾದ ಹೊಳಬಸ್ಸು ಶೆಟ್ಟರ, ನಾಗರಾಜ ಹದ್ಲಿ, ಕಾಶಿನಾಥ ಹುಡೇದ, ಹಾಜಿಸಾಬ ದಂಡಿನ, ಚನ್ನವೀರ ಅಂಗಡಿ, ಸತೀಶ ಬಂಡಿವಡ್ಡರ, ರಾಜೇಶ ದೇಶಪಾಂಡೆ, ಲಕ್ಕಪ್ಪ ಕರೋಲಿ, ಭೀಮಪ್ಪ ಚಿಚಖಂಡಿ ಇದ್ದರು.

    ಕಾರಿನಿಂದ ಕಾಲು ಜಾರಿ ಬಿದ್ದ ಸಿದ್ದರಾಮಯ್ಯ: ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಹೊರಗೆ ಸಿದ್ದರಾಮಯ್ಯ ತಮ್ಮ ಕಾರಿನಲ್ಲಿ ಎದ್ದು ನಿಂತು ಅಭಿಮಾನಿಗಳು, ಕಾರ್ಯಕರ್ತರತ್ತ ಕೈ ಬೀಸಿದರು. ಈ ವೇಳೆ ಕಾರಿನಿಂದ ಕಾಲು ಜಾರಿ ಕುಸಿದು ಬಿದ್ದರು. ತಕ್ಷಣಕ್ಕೆ ಅಂಗ ರಕ್ಷಕರು ಹಿಡಿದು ಸೀಟನಲ್ಲಿ ಕುಡಿಸಿದರು. ಮತ್ತೆ ಚೇತರಿಸಿಕೊಂಡು ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ಸಿಎಂ ಸಿದ್ದರಾಮಯ್ಯ, ಹೌದ ಹುಲಿಯಾ ಘೋಷಣೆ ಮೊಳಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts