More

    ಆರಂಭವಾಗದ ಇಂದಿರಾ ಕ್ಯಾಂಟೀನ್

    ಶಿರಸಿ: ಇಂದಿರಾ ಕ್ಯಾಂಟೀನ್ ನಿರ್ವಿುಸಲು ಭೂಮಿಪೂಜೆ ನಡೆಸಿ ಮೂರು ವರ್ಷಗಳ ಕಾಲ ಸಾರ್ವಜನಿಕರ ಮೂಗಿಗೆ ತುಪ್ಪ ಸವರಿದ್ದ ನಗರಸಭೆ ಇದೀಗ ನಿವೇಶನದ ಸ್ಥಳ ಬದಲಾವಣೆಗೆ ಮುಂದಾಗಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
    ಸಿಛ್ಛಛರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಾರಂಭಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ನಗರದಲ್ಲೂ ಆರಮಭವಾಗುತ್ತದೆಂಬ ಸುದ್ದಿ ಕೇಳಿದಾಗ ಬಡವರು, ಕೂಲಿಕಾರ್ವಿುಕರು, ದಿನಗೂಲಿ ನೌಕರರು ಸಂತಸಪಟ್ಟಿದ್ದರು. ಮಧ್ಯಾಹ್ನದ ಊಟದ ವೆಚ್ಚ ತಗ್ಗಬಹುದೆಂದು ಅವರು ಕನಸು ಕಂಡಿದ್ದರು. ಆದರೆ, ನಗರದಲ್ಲಿ ಈ ಕ್ಯಾಂಟೀನ್​ಗೆ ಸ್ಥಳ ನಿಗದಿಪಡಿಸಿದ್ದು ಹೊರತುಪಡಿಸಿದರೆ, ಮಧ್ಯಾಹ್ನ ಊಟದ ಕಾರ್ಯಕ್ರಮ ಇನ್ನೂ ಅನುಷ್ಠಾನಗೊಂಡಿಲ್ಲ.
    ಈ ನಡುವೆ ಜಾಗದ ಮಾಲಿಕತ್ವದ ಕುರಿತು ಕೆಲ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದದನ್ನೇ ಮಾನದಂಡವಾಗಿಸಿಕೊಂಡ ನಗರಸಭೆ ತಳಪಾಯ ಕಾಮಗಾರಿ ಮುಗಿದ ಜಾಗವನ್ನೇ ಕೈಬಿಡಲು ನಿರ್ಧರಿಸಿದೆ.
    ಲಕ್ಷಾಂತರ ವೆಚ್ಚ: ನಗರದ ಹೃದಯ ಭಾಗದಲ್ಲಿ ಮುಖ್ಯ ಅಂಚೆ ಕಚೇರಿ ಹಿಂಭಾಗದ ಸರ್ವೆಸಂಖ್ಯೆ 1007ರಲ್ಲಿ 2018ರ ಅಕ್ಟೋಬರ್​ನಲ್ಲಿ ಕ್ಯಾಂಟೀನ್ ಕಟ್ಟಡ ನಿರ್ವಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡು, ಸೇವೆ ಆರಂಭಿಸಿದೆ. ಆದರೆ, ಶಿರಸಿಯಲ್ಲಿ ಉದ್ದೇಶಿತ ಇಂದಿರಾ ಕ್ಯಾಂಟೀನ್ ಜಾಗ ವಾಹನ ನಿಲುಗಡೆಯ ಸ್ಥಳವಾಗಿದೆ. ಅಂದಾಜು 4ರಿಂದ 5 ಲಕ್ಷ ರೂ. ಖರ್ಚು ಮಾಡಿ ಪ್ಲಾಟ್ ಫಾರ್ಮ ನಿರ್ವಿುಸಲಾಗಿದೆ. ಇದೀಗ ಆ ಜಾಗವನ್ನೇ ಕೈಬಿಟ್ಟು ಬೇರೆಡೆ ಜಾಗ ಹುಡುಕಲು ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.

    ಬೇರೆಡೆ ಸ್ಥಳ ಹುಡುಕಾಟ ನಡೆದಿದ್ದು, ಈವರೆಗೆ ಯಾವುದೇ ಸ್ಥಳ ಲಭ್ಯವಾಗಿಲ್ಲ. ಯಾವುದೇ ಅಡ್ಡಿ, ಆತಂಕಕ್ಕೆ ಆಸ್ಪದವಿಲ್ಲದಂತೆ ಮೊದಲೇ ದಾಖಲೆಗಳ ಸಮಗ್ರ ಪರಿಶೀಲನೆ ಮಾಡಿ ಇಂದಿರಾ ಕ್ಯಾಂಟೀನ್ ನಿರ್ವಿುಸಲು ಕ್ರಮವಹಿಸಲಾಗುವುದು.
    -ಗಣಪತಿ ನಾಯ್ಕ- ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts