More

    ಆಯುರ್ವೆದ ಔಷಧದಿಂದ ಉತ್ತಮ ಆರೋಗ್ಯ

    ಮುಂಡರಗಿ: ಆಯುರ್ವೆದ ಔಷಧದಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಚವನಪ್ರಾಶ, ಕಷಾಯ, ಹೋಮಿಯೋಪಥಿ ಔಷಧ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಸುಜಾತಾ ಪಾಟೀಲ ಹೇಳಿದರು.

    ಪಟ್ಟಣದ ಪುರಸಭೆ ಗಾಂಧಿ ಭವನದಲ್ಲಿ ಮಂಗಳವಾರ ಆಯುಷ್ ವೈದ್ಯರ ಸಂಘ ಹಾಗೂ ಆಯುಷ್ ಇಲಾಖೆ ಗದಗ ಆಶ್ರಯದಲ್ಲಿ ಏರ್ಪಡಿಸಿದ್ದ ಪುರಸಭೆ ಪೌರ ಕಾರ್ವಿುಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೇಂದ್ರ ಆಯುಷ್ ಸಚಿವಾಲಯದಿಂದ ಅನುಮೋದಿತ ಕಷಾಯ, ಚವನಪ್ರಾಶ ಹಾಗೂ ಹೋಮಿಯೋಪಥಿ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಆಯುರ್ವೆದ ಔಷಧ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಇಂತಹ ಆಯುರ್ವೆದ ಔಷಧವನ್ನು ತಪ್ಪದೆ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಳದಿಂದ ಕರೊನಾ ಸೋಂಕು ನಿಯಂತ್ರಿಸಲು ಸಹಕಾರಿ ಎಂದರು.

    ದಿವಾಣಿ ನ್ಯಾಯಾಧೀಶ ಆರ್.ಎ. ಮಹಾಜನ್ ಮಾತನಾಡಿ, ಆಯುರ್ವೆದ ಔಷಧದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

    ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಬಸವರಾಜ ಕೆ., ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ. ಪಿ.ಬಿ. ಹಿರೇಗೌಡ್ರ, ಡಾ. ವೈ.ಎಸ್. ಮೇಟಿ, ಡಾ. ಬಿ.ಎಸ್. ಮೇಟಿ, ಡಾ. ಐ.ಎಸ್. ಸರ್ವೀ, ಡಾ. ಜಗದೀಶ ಹಂಚಿನಾಳ, ಡಾ. ಅರವಿಂದ ಹಂಚಿನಾಳ, ಡಾ. ವಿಜಯ ಗಿಂಡಿಮಠ, ಡಾ. ನಂದಿತಾ ಹಂಚಿನಾಳ, ಡಾ. ಪೂರ್ಣಿಮಾ ಗಿಂಡಿಮಠ, ಡಾ. ಎಲ್.ಎಲ್. ಇಲ್ಲೂರ, ಡಾ. ಮಂಗಳಾ ಇಟಗಿ, ಡಾ. ಚಂದ್ರಕಾಂತ ಇಟಗಿ, ಡಾ. ಶರತ್ ಮೇಟಿ, ಡಾ. ವಿಶ್ವನಾಥ ಕೋಲೂರಮಠ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts