More

    ಆಯುಕ್ತ-ಡಿಸಿಪಿ ಭಿನ್ನಾಭಿಪ್ರಾಯ 2 ದಿನದಲ್ಲಿ ಇತ್ಯರ್ಥ

    ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ ಹಾಗೂ ಡಿಸಿಪಿ ಕೃಷ್ಣಕಾಂತ ಮಧ್ಯದ ಭಿನ್ನಾಭಿಪ್ರಾಯ ಇನ್ನೆರಡು ದಿನಗಳಲ್ಲಿ ಇತ್ಯರ್ಥಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರೂ ಅಧಿಕಾರಿಗಳಿಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು. ಮಹಾನಗರ ಪಾಲಿಕೆ ಮಳಿಗೆಗಳ ಟೆಂಡರ್ ಕರೆಯುವುದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಚುನಾವಣೆ ನಂತರ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಬಹಳ ವರ್ಷಗಳಿಂದ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿರುವ ಕೆಲವರು ಹೊರಹೋಗಲು ಹಿಂದೇಟು ಹಾಕುತ್ತಿದ್ದು, ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಸ್ವಸ್ಥ ಮನಸ್ಸಿನಿಂದ ಸಾಧನೆ ಸಾಧ್ಯ

    ಧಾರವಾಡ, ಮನೋವೈದ್ಯ, ಡಾ. ಆನಂದ ಪಾಂಡುರಂಗಿ, ಅಭಿಪ್ರಾಯ

    ಧಾರವಾಡ: ಎಲ್ಲದಕ್ಕೂ ಮನಸ್ಸು ಮೂಲ ಕಾರಣ. ಮನಸ್ಸು ಸ್ವಸ್ಥವಾಗಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

    ವಿಶ್ವ ಮಾನಸಿಕ ದಿನದ ಅಂಗವಾಗಿ ನಗರದಲ್ಲಿ ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿಯ ಕರ್ನಾಟಕ ಚಾಪ್ಟರ್ ವತಿಯಿಂದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಮನೋವೈದ್ಯರನ್ನು ಸತ್ಕರಿಸಿ ಅವರು ಮಾತನಾಡಿದರು.

    ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಇಂದಿಗೂ ತಪ್ಪು ತಿಳಿವಳಿಕೆ ಇದೆ. ಮನಸ್ಸಿಗೆ ಕಾಯಿಲೆ ಎಂದರೆ ಅದು ಹುಚ್ಚು ಮಾತ್ರ ಎಂಬ ಕಲ್ಪನೆ ಇಂದಿಗೂ ಇದೆ. ದೈಹಿಕ ಕಾಯಿಲೆಯಲ್ಲಿ ವಿಧಗಳಿರುವಂತೆ ಮಾನಸಿಕ ಕಾಯಿಲೆಗಳಲ್ಲಿಯೂ ವಿಧಗಳಿವೆ. ಕಾಯಿಲೆಯ ಆದಿಯಲ್ಲೇ ಮನೋವೈದ್ಯರಿಂದ ಚಿಕಿತ್ಸೆ ಪಡೆದು, ಸಲಹೆಗಳನ್ನು ಪಾಲಿಸಿದರೆ ಶೇ. 80ರಷ್ಟು ಮಾನಸಿಕ ರೋಗಗಳು ಗುಣವಾಗುತ್ತವೆ ಎಂದರು.

    ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಡಾ. ಸೋಮಶೇಖರ ಬಿಜ್ಜಳ ಮಾತನಾಡಿ, ಮನೋವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಹಿಂದಿಗಿಂತಲೂ ಹೆಚ್ಚು ಪ್ರಸ್ತುತ. ಮನುಷ್ಯನ ಮಾನಸಿಕ ತುಮುಲಗಳ ಆಳವಾದ ಅಧ್ಯಯನ ಮಾಡುವ ಹಾಗೂ ಅರಿಯುವ ಸಾಮರ್ಥ್ಯ ಇರುವ ಮನೋವೈದ್ಯರು ಲಭ್ಯವಿದ್ದಾರೆ ಎಂದರು.

    ಇದೇವೇಳೆ ಹಿರಿಯ ಮನೋವೈದ್ಯರಾದ ಡಾ. ಶಿವಶಂಕರ ಪೋಳ, ಡಾ. ಎಂ.ಎನ್. ಸಿದ್ಧಾಂತಿ, ಡಾ. ಜಡ್.ಆರ್. ತಹಸೀಲ್ದಾರ್ ಅವರನ್ನು ಸನ್ಮಾನಿಸಲಾಯಿತು.

    ಡಾ. ಆದಿತ್ಯ ಪಾಂಡುರಂಗಿ, ಡಾ. ಮಹೇಶ ಮಹದೇವಯ್ಯ, ಡಾ. ಸೋಮಶೇಖರ ಬಿಜ್ಜಳ, ಇತರರಿದ್ದರು.

    ============

    ಫೋಟೊ 10 ಡಿಡಬ್ಲುಡಿ 7

    ಹುಬ್ಬಳ್ಳಿ, ಕ್ರಿಕೆಟ್ ಬೆಟ್ಟಿಂಗ್, 3.79 ಲಕ್ಷ ರೂ., 11 ಮೊಬೈಲ್​ಫೋನ್ ವಶ

    ಕ್ರಿಕೆಟ್ ಬೆಟ್ಟಿಂಗ್, 10 ಜನರ ಬಂಧನ

    ಹುಬ್ಬಳ್ಳಿ/ಧಾರವಾಡ: ಐಪಿಎಲ್ ಟಿ-20 ಕ್ರಿಕೆಟ್ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗಿದೆ. ಇದರ ಸುಳಿವರಿತು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಶುಕ್ರವಾರ ಮತ್ತು ಶನಿವಾರ ಅವಳಿ ನಗರ ಹಾಗೂ ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 10 ಜನರನ್ನು ಬಂಧಿಸಿ 3.79 ಲಕ್ಷ ರೂ. ನಗದು ಹಾಗೂ 11 ಮೊಬೈಲ್​ಫೋನ್ ವಶಪಡಿಸಿಕೊಂಡಿದ್ದಾರೆ.

    ಹುಬ್ಬಳ್ಳಿ ವರದಿ

    ಶಹರ ಠಾಣೆ ವ್ಯಾಪ್ತಿಯ ಕೊಪ್ಪಿಕರ ರಸ್ತೆ ಬದಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಕಮರಿಪೇಟ ಪೊಲೀಸ್ ಠಾಣೆ ಹತ್ತಿರದ ಗಣೇಶ ದತ್ತುಸಾ ಹನುಮಸಾಗರ (23), ನವೀನ ಗಣಪತಸಾ ಜಿತೂರಿ (25) ಹಾಗೂ ಗುರುಸಿದ್ಧೇಶ್ವರ ನಗರ ನಿವಾಸಿ ದತ್ತಾತ್ರೇಯ ಶಿವಾಜಿ ಜಾಧವ (31) ಬಂಧಿತರು. ಅವರಿಂದ 25,150 ರೂ. ನಗದು, ನಾಲ್ಕು ಮೊಬೈಲ್​ಫೋನ್ ವಶಕ್ಕೆ ಪಡೆಯಲಾಗಿದೆ.

    ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಐಬಿ ಇನ್ಸ್​ಪೆಕ್ಟರ್ ಅಲ್ತಾಫ್ ಮುಲ್ಲಾ, ಶಹರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು.

    ಸಿಬ್ಬಂದಿಗಳಾದ ಎಂ.ಎಚ್. ಶಿವರಾಜ, ಎ.ಎಸ್.ಐ, ಪಿ.ಸಿ ಸೋಗಿ, ಎಸ್.ಪಿ. ಲಮಾಣಿ, ಬಸವರಾಜ ಸಣ್ಣಪ್ಪನವರ, ಅನೀಲಕುಮಾರ ಹುಗ್ಗಿ, ಇಮಾಮಸಾಬ ಅತ್ತಾರ ಹಾಗೂ ಶಹರ ಠಾಣೆಯ ಬಿ.ಎ. ಖಂಡಪ್ಪಗೌಡರ, ಎ.ಎಸ್.ಐ, ಐ.ಬಿ. ಮಲ್ಲಶೆಟ್ಟಿ ಕಾರ್ಯಾಚರಣೆ ತಂಡದಲ್ಲಿದ್ದರು. ತಂಡದ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಮಾವನೂರ ದೇವಸ್ಥಾನ ಬಳಿ ಬೆಟ್ಟಿಂಗ್ ನಿರತ ಕೇಶ್ವಾಪುರ ರಾಮನಗರದ ಬಸವರಾಜ ಹನಮಂತಪ್ಪ ಕರಡಿ, ರಾಜು ವಿಠ್ಠಲಸಾ ದೋಂಗಡಿ, ವಿರುಪಾಕ್ಷಯ್ಯ ಪಂಚಯ್ಯಾ ಕೋರಿಯಾನಮಠ ಹಾಗೂ ವೀರಭದ್ರಯ್ಯ ಗುರುಸಿದ್ದಯ್ಯ ಕೋರಿಯಾನಮಠ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4 ಮೊಬೈಲ್​ಫೋನ್, 8000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

    ಧಾರವಾಡ ವರದಿ

    ಬೆಟ್ಟಿಂಗ್​ನಲ್ಲಿ ನಿರತ ಮೂವರನ್ನು ಉಪನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರೀರಾಮನಗರದ ಮಹ್ಮದಯಾಸೀನ್ ಅಬ್ದುಲ್​ರಶೀದ್ ಗಬ್ಬೂರ, ಜಕನಿ ಬಾವಿ ರಸ್ತೆಯ ಕಿಶೋರ ಉಮೇಶ ಪೂಜಾರ ಹಾಗೂ ಅಕ್ಷಯ ಬಂಧಿತ ಆರೋಪಿಗಳು. ಇವರು ನಗರದ ಕರ್ನಾಟಕ ಕಾಲೇಜ್ ಬಳಿ ರಸ್ತೆ ಬದಿ ನಿಂತು ಶುಕ್ರವಾರ ನಡೆದ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 3.46 ಲಕ್ಷ ರೂ. ಹಾಗೂ 3 ಮೊಬೈಲ್​ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಎಸಿಪಿ ಜಿ. ಅನುಷಾ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್ಸ್​ಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಪಿಎಸ್​ಐ ಶ್ರೀಮಂತ ಹುಣಸೀಕಟ್ಟಿ. ಸಿಬ್ಬಂದಿ ಆರ್.ಎಚ್. ನದಾಫ, ಎಸ್.ಪಿ. ದೊಡ್ಡಮನಿ, ಸಿ.ಟಿ. ನಡುವಿನಮನಿ, ಸಿ.ಡಿ ಬಳ್ಳಾರಿ, ಎಸ್.ವಿ. ನೀಲಣ್ಣವರ, ಕೆ.ಎಂ. ಡೊಕ್ಕನವರ, ಆರ್.ಎಚ್. ಬಡ್ನಿ, ಪಿ.ಎಸ್. ಕುಂದಗೋಳ, ಜಿ.ಬಿ. ಭರಮಗೌಡ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು.

    =============

    ಫೋಟೋ ಎಚ್ 10- ರಾಣೆಬೆನ್ನೂರ

    ಕೊಲೆ ಆರೋಪಿಗಳ ಬಂಧನ

    ಹುಬ್ಬಳ್ಳಿ, ಲಾಕ್​ಡೌನ್ ಸಂದರ್ಭ, ಕೌಟುಂಬಿಕ ಕಲಹ, ಕೊಲೆ ಆರೋಪಿಗಳ ಬಂಧನ

    ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭದಲ್ಲಿ ಉಂಟಾದ ಕೌಟುಂಬಿಕ ಕಲಹಗಳು ಹಲವು. ಅದರಲ್ಲೂ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ್ದವು ಹೆಚ್ಚಾಗಿವೆ. ಇಂತಹದೇ ಪ್ರಕರಣ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ನಡೆದಿದ್ದು, ಪತ್ನಿಯೊಬ್ಬಳು ಗಂಡನನ್ನೇ ಬಲಿ ಪಡೆದಿದ್ದಾಳೆ.

    ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಸರಹದ್ದಿನ ರಾಣೆಬೆನ್ನೂರ ರೈಲು ನಿಲ್ದಾಣ ಬಳಿ ಕಳೆದ ಮೇನಲ್ಲಿ ಶ್ರೀನಿವಾಸಪುರ ಗಂಗಾಜಲ ತಾಂಡಾದ ಚಂದ್ರಪ್ಪ ಲಮಾಣಿ ಎಂಬುವವರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ರೈಲ್ವೆ ಪೊಲೀಸರು ಇದೀಗ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

    ಚಂದ್ರಪ್ಪನ ಪತ್ನಿ ಶೋಭಾ ಹಾಗೂ ದಿಳ್ಳೆಪ್ಪ ಅಂತರವಳ್ಳಿ ಎಂಬುವವರೇ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

    ಶೋಭಾ ಹಾಗೂ ದಿಳ್ಳೆಪ್ಪ ಅವರ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ. ಕೂಲಿ ಮಾಡುತ್ತಿದ್ದ ಚಂದ್ರಪ್ಪ 2-3 ತಿಂಗಳು ಕುಟುಂಬದಿಂದ ದೂರ ಇರುತ್ತಿದ್ದ. ಕರೊನಾದಿಂದಾಗಿ ಲಾಕ್​ಡೌನ್ ಘೋಷಣೆಯಾದಾಗ ಚಂದ್ರಪ್ಪ ಮನೆಯಲ್ಲೇ ಇದ್ದ. ತಮ್ಮ ಅನೈತಿಕ ಚಟುವಟಿಕೆಗೆ ಈತ ಅಡ್ಡಿಯಾಗುತ್ತಾನೆಂದು ತಿಳಿದು ಹೊಲದಲ್ಲಿ ಉಸಿರುಗಟ್ಟಿಸಿ ಸಾಯಿಸಿ ನಂತರ ಸಾಕ್ಷಿ ನಾಶ ಪಡಿಸಲು ರೈಲ್ವೆ ಹಳಿ ಮೇಲೆ ತಂದು ಹಾಕಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

    ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ರೈಲ್ವೆ ಎಸ್ಪಿ, ಡಿಎಸ್​ಪಿ ಪುಷ್ಪಲತಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಂ. ಕಾಲಿಮಿರ್ಚಿ ಹಾಗೂ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

    =========

    ಪದವೀಧರರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಹೋರಾಟ

    ಹುಬ್ಬಳ್ಳಿ: ಪಶ್ಚಿಮ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಕಳೆದ ಅವಧಿಯಲ್ಲಿ ವಿಧಾನ ಪರಿಷತ್​ನ ಒಳಗೆ ಹಾಗೂ ಹೊರಗೆ ಪದವೀಧರರ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್​ನಲ್ಲಿಯೂ ಬಿಜೆಪಿ ಬಹುಮತ ಪಡೆಯಬೇಕಾದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ಪರಿಷತ್​ನ ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿದೆ ಎಂದರು.

    ಮುಂದಿನ ಎರಡ್ಮೂರು ತಿಂಗಳಲ್ಲಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧೆಡೆ ಹಲವಾರು ಕೈಗಾರಿಕೆಗಳು ಪ್ರಾರಂಭಗೊಳ್ಳಲಿವೆ. ಧಾರವಾಡದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 3-4 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ ಎಂದರು.

    ಅಭ್ಯರ್ಥಿ ಎಸ್.ವಿ. ಸಂಕನೂರ, ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು. ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಪ್ರಭು ನವಲಗುಂದಮಠ, ಬಸವರಾಜ ಕುಂದಗೋಳಮಠ ಇತರರಿದ್ದರು.

    ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ

    ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎಂದು ಎಂಎಲ್​ಸಿ ಬಸವರಾಜ ಹೊರಟ್ಟಿ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದ ಅಭ್ಯರ್ಥಿಗಳು ನನ್ನನ್ನು ಸಂರ್ಪಸಿ ಬೆಂಬಲಿಸುವಂತೆ ಕೇಳಿದರು. ಆದರೆ, ಪದವೀಧರರನ್ನು ಕೇಳಿ ಎಂದಷ್ಟೇ ಹೇಳಿದೆ. ನಾವು ಯಾರ ಜತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಮ್ಮ ಬೆಂಬಲ ನಮ್ಮ ಪಕ್ಷದ ಅಭ್ಯರ್ಥಿಗೆ ಮಾತ್ರ. ಎಚ್.ಕೆ. ಪಾಟೀಲ ಜತೆಗೆ ಹೊಂದಾಣಿಕೆ ಇತ್ತು. ಅದು ಉತ್ತರ ಕರ್ನಾಟಕದ ಬಗೆಗೆ ಧ್ವನಿ ಎತ್ತುವುದಾಗಿತ್ತು ಎಂದರು.

    ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಮುಖಂಡರಾದ ರಾಜಣ್ಣ ಕೊರವಿ, ಗುರುರಾಜ ಹುಣಸೀಮರದ, ಶಿವಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ರಾಜ್ಯ ಮಟ್ಟದಲ್ಲಿ ಹೋರಾಟದ ಎಚ್ಚರಿಕೆ

    ಧಾರವಾಡ: ಚುನಾವಣೆ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಆಡಳಿತಾರೂಢ ಬಿಜೆಪಿ ನಾಯಕರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರೂ ಅವರ ಮೇಲೆ ಕ್ರಮವಾಗಿಲ್ಲ. ಹೀಗಾಗಿ ಈ ಕುರಿತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಘಟಕದ ಖಜಾಂಚಿ ಅರವಿಂದ ಬಿ.ಕೆ. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ===========

    ಫೋಟೊ 10 ವಿಕ್ರಂ 1

    ಡಾ. ಸುಶೀಲಾ ಬಿ.

    ಜಿಪಂ ಸಿಇಒ ಡಾ. ಸುಶೀಲಾ ಅಧಿಕಾರ ಸ್ವೀಕಾರ

    ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಡಾ. ಸುಶೀಲಾ ಬಿ. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ವರ್ಗಾವಣೆಗೊಂಡ ಸಿಇಒ ಡಾ.ಬಿ.ಸಿ. ಸತೀಶ ಅಧಿಕಾರ ಹಸ್ತಾಂತರಿಸಿದರು.

    ಹೈದರಾಬಾದ್​ನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ. ಸುಶೀಲಾ ಅವರು, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ 2013ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೈಲ್ವೆ ಸಿಬ್ಬಂದಿ ಸೇವೆಗೆ ಅರ್ಹತೆ ಪಡೆದರು. 2015ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಕರ್ನಾಟಕ ಕೇಡರ್​ಗೆ ಆಯ್ಕೆಯಾದರು.

    ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರಗಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಬಡ್ತಿಯೊಂದಿಗೆ ಧಾರವಾಡ ಜಿಪಂ ಹುದ್ದೆ ಸ್ವೀಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts