More

    ಆಯುಕ್ತರ ಕಾರ್ಯವೈಖರಿಗೆ ಸದಸ್ಯರ ಆಕ್ರೋಶ: ನಗರಸಭೆ ತುರ್ತು ಸಭೆಯಲ್ಲಿ ಟೀಕೆ

    ಕೆಜಿಎಫ್: ನಗರಸಭೆ ಆಯುಕ್ತ ನವೀನ್​ಚಂದ್ರ ಕಾರ್ಯವೈಖರಿ ವಿರುದ್ಧ ಬೇಸತ್ತ ನಗರಸಭೆ ಸದಸ್ಯರು ಗುರುವಾರ ತುರ್ತು ಸಭೆಯಲ್ಲಿ ಆಯುಕ್ತರ ವಿರುದ್ಧ ಟೀಕಾಪ್ರಹಾರ ನಡೆಸಿದರು.


    ನಗರಸಭೆ ಆಯುಕ್ತರು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಅವರ ವಿರುದ್ಧ ಸಾಕಷ್ಟು ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಮುಂದಿನ ಸಭೆಯನ್ನು ಜಿಲ್ಲಾಧಿಕಾರಿ, ಶಾಸಕಿ ಮತ್ತು ಸಂಸದರ ಸಮ್ಮುಖದಲ್ಲಿ ಸಭೆ ನಡೆಸಬೇಕು. ಆಯುಕ್ತರ ಕಾರ್ಯಶೈಲಿಯನ್ನು ಅವರೂ ತಿಳಿಯಬೇಕು ಎಂದು ರ್ನಿಣಯ ಅಂಗೀಕರಿಸಲಾಯಿತು.


    ಬಡವರ ಮನೆಗಳಿಗೆ ಉಚಿತ ವಿದ್ಯುತ್​ ದೀಪ ನೀಡುವ ಬಗ್ಗೆ ನಗರಸಭೆ 2214 ರೂಪಾಯಿ ಅನುದಾನ ನೀಡುತ್ತದೆ ಎಂದು ನಗರಸಭೆ ಅಧ್ಯಕ್ಷ ವಳ್ಳಲ್​ಮುನಿಸ್ವಾಮಿ ಹೇಳಿದರು. ಈ ಕುರಿತು ಬಡವರನ್ನು ಗುರುತಿಸುವ ಬಗ್ಗೆ ಚರ್ಚೆ ನಡೆಯಿತು. ರಮೇಶ್​ ಜೈನ್​ ಮತ್ತು ಸದಸ್ಯ, ಮಾಜಿ ಶಾಸಕ ಎಸ್​.ರಾಜೇಂದ್ರನ್​ ಮಾತನಾಡಿ, ನಗರಸಭೆಯು ಎಂ.ಜಿ.ಮಾರುಕಟ್ಟೆಯಲ್ಲಿ ಬರುವ ಹಣವನ್ನು ವಿದ್ಯುತ್​ ದೀಪದ ಕಾರ್ಯಕ್ಕೆ ಬಳಸಬಾರದು ಎಂದು ತಾಕೀತು ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಜಯಪಾಲ್​, ಎರಡು ತಿಂಗಳಿಂದ 7ನೇ ವಾರ್ಡ್​ಗೆ ಕುಡಿಯುವ ನೀರು ಬರುತ್ತಿಲ್ಲ. ಯಾವಾಗ ಕೇಳಿದರೂ ಟೆಂಡರ್​ ಆಗಿದೆ. ಈಗ ಬರುತ್ತೆ, ಆಗ ಬರುತ್ತೆ ಎಂದು ಹೇಳುತ್ತಲೇ ಬಂದಿದ್ದಾರೆ. ಒಂದು ದಿನವಾದರೂ ನನ್ನ ವಾರ್ಡ್​ಗೆ ಆಯುಕ್ತರು ಭೇಟಿ ನೀಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಬೇಕು. ಸಾರ್ವಜನಿಕ ಶೌಚಗೃಹ ನಿಮಾರ್ಣದ ಬಗ್ಗೆ ಅವ್ಯವಹಾರ ನಡೆದಿದೆ. ಬೀದಿದೀಪ ಇಲ್ಲ. ಕಸ ಎತ್ತುತ್ತಿಲ್ಲ. ನಮಗೆ ವಾರ್ಡ್​ನಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ದೂರಿದರು.


    ಅವರ ಮಾತಿಗೆ ಹಲವು ಸದಸ್ಯರುದನಿಗೂಡಿಸಿದರು. ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ ಪ್ರತಿಕ್ರಿಯಿಸಿ, ನಮ್ಮ ಅಧಿಕಾರಿಗಳು ಸರಿಯಿಲ್ಲ. ಆಯುಕ್ತರ ಮೇಲೆ ಎಷ್ಟೋ ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಏನೂ ಉಪಯೋಗವಾಗಿಲ್ಲ. ಅವರು ಮತ್ತು ಸಿಬ್ಬಂದಿ ಟೈಂಪಾಸ್​ ಮಾಡಲು ನಗರಸಭೆಗೆ ಬರುತ್ತಿದ್ದಾರೆ. ಒಂದು ಟೆಂಡರ್​ ಸಹ ಕರೆದಿಲ್ಲ. ನಗರಸಭೆಯಲ್ಲಿ ಕೋಟ್ಯಂತರ ರೂಪಾಯಿ ಇದೆ. ಅದನ್ನು ಖರ್ಚು ಮಾಡಲು ಆಗುತ್ತಿಲ್ಲ. ಇಂತಹವರನ್ನು ಮಾಜಿ ಶಾಸಕ ವೈ.ಸಂಪಂಗಿ ವರ್ಗ ಮಾಡಿಸಿಕೊಂಡು ಬರುತ್ತಾರೆ. ಮುಂದಿನ ಸಭೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ನಡೆಯಬೇಕು ಎಂದು ಹೇಳಿದರು. ಅವರ ಮಾತಿಗೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.
    ನಗರದಲ್ಲಿ ಬೀಫ್​ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಮಾಜಿ ಶಾಸಕ ಎಸ್​.ರಾಜೇಂದ್ರನ್​ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts