More

    ಆಮ್ಲಜನಕ ಪೂರೈಕೆ ಅಬಾಧಿತ

    ಮರಿದೇವ ಹೂಗಾರ ಹುಬ್ಬಳ್ಳಿ

    ಕೋವಿಡ್ ಪ್ರಕರಣಗಳ ಸಂಖ್ಯೆ ಈಗ ಏರುಗತಿಯಲ್ಲಿದ್ದು, ಉಸಿರಾಟದ ತೀವ್ರ ಸಮಸ್ಯೆ ಎದುರಿಸುವವರಿಗೆ ಆಕ್ಸಿಜನ್ (ಆಮ್ಲಜನಕ) ಪೂರೈಕೆ ಅತ್ಯಗತ್ಯವಿರುತ್ತದೆ. ಇಂತಹ ಸಮಸ್ಯೆ ಎದುರಿಸುವ ಕರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಸುವ ಸಾಮರ್ಥ್ಯವನ್ನು ನಗರದ ಕಿಮ್್ಸ ಹೆಚ್ಚಿಸಿಕೊಂಡಿದೆ. ಬರೋಬ್ಬರಿ 2 ಸಾವಿರ ಜನರಿಗೆ ಏಕಕಾಲಕ್ಕೆ ಆಕ್ಸಿಜನ್ ಪೂರೈಕೆ ಮಾಡುವಷ್ಟು ಸಾಮರ್ಥ್ಯವನ್ನು ಕಿಮ್್ಸ ಪಡೆದುಕೊಂಡಿದೆ. ಅದು ಕೂಡ ನೀರಿನಂತೆ ಪೈಪ್​ಲೈನ್ ಮೂಲಕ ಈ ಆಕ್ಸಿಜನ್, ರೋಗಿಗಳ ಬೆಡ್ ಬಳಿಯೇ ತಲುಪುತ್ತದೆ!

    ಕಿಮ್್ಸ ಆವರಣದಲ್ಲಿ ತಲಾ 20 ಕಿಲೋ ಲೀಟರ್ ಸಾಮರ್ಥ್ಯದ 2 ಘಟಕಗಳಿವೆ. ಮೊದಲು 20 ಕೆಎಲ್ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲಾಗಿತ್ತು. ಈಗ ಮತ್ತೊಂದು 20 ಕೆಎಲ್ ಲಿಕ್ವಿಡ್ ಆಕ್ಸಿಜನ್ ಘಟಕಕ್ಕೆ ಚಾಲನೆ ಸಿಕ್ಕಿದೆ. ಗೋಡೆಗಳಿಗೆ ಪೈಪ್​ಲೈನ್ ಅಳವಡಿಸಿದ್ದು, ಅದರ ಮೂಲಕ ರೋಗಿಗಳಿಗೆ ಪೈಪ್​ಲೈನ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದೆ.

    ಮೊದಲು 20 ಕೆಎಲ್ ಲಿಕ್ವಿಡ್ ಆಮ್ಲಜನಕ ಪೂರೈಕೆಯನ್ನು ಪ್ರಾಕ್ಸೇರ್ ಕಂಪನಿಗೆ ನೀಡಲಾಗಿತ್ತು. ಈಗ ಮತ್ತದೆ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಲಿಕ್ವಿಡ್ ಮಾತ್ರ ಪೂರೈಕೆ ಮಾಡಬೇಕೆಂಬ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಘಟಕ ನಿರ್ವಣಕ್ಕೆ ರಾಜ್ಯ ಸರ್ಕಾರದ ಅನುದಾನದಲ್ಲಿ 40 ಲಕ್ಷ ರೂ. ಖರ್ಚು ಮಾಡಲಾಗಿದೆ.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಪರೇಷನ್ ಥಿಯೇಟರ್, ಐಸಿಯು, ತುರ್ತು ಚಿಕಿತ್ಸಾ ಘಟಕ, ಕಾರ್ಡಿಯಾಲಜಿ, ತಾಯಿ ಮತ್ತು ಮಗುವಿನ ಚಿಕಿತ್ಸಾ ಘಟಕ ಸೇರಿ ವಿವಿಧ ವಿಭಾಗಗಳಿಗೆ ಪೈಪ್​ಲೈನ್ ಸಂಪರ್ಕ ಕಲ್ಪಿಸಲಾಗಿದೆ.

    ಲಿಕ್ವಿಡ್ ಆಕ್ಸಿಜನ್ ಅನ್ನು ಪೈಪ್​ಲೈನ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಕಿಮ್ಸ್​ನ ವೆಚ್ಚದಲ್ಲಿ ಉಳಿತಾಯವಾಗುವುದಲ್ಲದೆ, ಮಾನವ ಸಂಪನ್ಮೂಲ ಬಳಕೆಯೂ ಕಡಿಮೆಯಾಗಿದೆ. ಮೊದಲೆಲ್ಲ ಸಿಲಿಂಡರ್ ತರಿಸುವುದು ಮತ್ತು ಅವುಗಳನ್ನು ಹೊತ್ತೊಯ್ದು ಬೇರೆಡೆ ಸಂಗ್ರಹಿಸಿಡುವುದು ಕಷ್ಟವಾಗುತ್ತಿತ್ತು. ಈಗ ಇವೆಲ್ಲ ಗೋಳಾಟ ತಪ್ಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts