More

    ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಿ

    ಕುಮಟಾ: ತಾಲೂಕಿನ ಬೆಟ್ಕುಳಿಯಲ್ಲಿರುವ ಪದ್ಮಾವತಿ ಇಂಡಸ್ಟ್ರೀಯಲ್ ಗ್ಯಾಸ್ ಘಟಕಕ್ಕೆ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಆಮ್ಲಜನಕ ಉತ್ಪಾದನೆ ಸ್ಥಿತಿಗತಿ ಪರಿಶೀಲಿಸಿ ಮಾಹಿತಿ ಪಡೆದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಉತ್ತರ ಕನ್ನಡ ಜಿಲ್ಲೆಗೆ ಸಾಲುವಷ್ಟು ಅಮ್ಲಜನಕ ಇಲ್ಲಿ ತಯಾರಿಸಲಾಗುತ್ತದೆ. ಕಾರವಾರದ ಕ್ರಿಮ್ಸ ಗೆ ಈಗಾಗಲೇ ಒಂದು ಲೋಡ್ ಪೂರೈಕೆಯಾಗಿದೆ. ಕುಮಟಾ ಆಸ್ಪತ್ರೆಗೂ ಕೊಟ್ಟಿದ್ದಾರೆ. ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಇಲ್ಲಿ ಬಂದು ನೋಡಿ ಹೋಗಿದ್ದಾರೆ. ಇಲ್ಲಿನ ನೋಡಲ್ ಅಧಿಕಾರಿಯಾಗಿ ಧನಂಜಯ ಹೆಗಡೆ ಅವರನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ ಎಂದರು.

    ಆಮ್ಲಜನಕ ಘಟಕದಿಂದ ಸಿಲಿಂಡರ್ ಪೂರೈಕೆಯಲ್ಲಿ ಮೊದಲ ಪ್ರಾಶಸ್ತ್ಯ ಕುಮಟಾ ಹಾಗೂ ಹೊನ್ನಾವರಕ್ಕೆ ಸಿಗಬೇಕು. ಏಕೆಂದರೆ ನಮ್ಮ ಕ್ಷೇತ್ರದಲ್ಲೇ ಆಮ್ಲಜನಕ ತಯಾರಾಗುತ್ತಿರುವುದರಿಂದ ನಮಗೆ ಕೊರತೆಯಾಗಬಾರದು. ಇಲ್ಲಿ ಸಾಕಷ್ಟು ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಆಮ್ಲಜನಕದ ಸಮಸ್ಯೆ ಇಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ದೇಶಾದ್ಯಂತ ಕರೊನಾ ಎರಡನೇ ಅಲೆಯ ಪ್ರವಾಹದ ಸಂದರ್ಭದಲ್ಲಿ ನಿಜಕ್ಕೂ ಆಮ್ಲಜನಕ ಘಟಕ ನಮ್ಮಲ್ಲೇ ಇರುವುದು ಜಿಲ್ಲೆಯ ಜನರ ಭಾಗ್ಯ ಎಂದರು.

    ಆಮ್ಲಜನಕ ಪೂರೈಕೆದಾರರಿಗೆ ಕಾಲಕಾಲಕ್ಕೆ ಸರಿಯಾಗಿ ಬಿಲ್ ಪಾವತಿಸಬೇಕು. ಇದರಿಂದ ಯಾವುದೇ ಸಮಸ್ಯೆ ಬಂದರೂ ನಿಭಾಯಿಸಲು ಘಟಕದ ಮಾಲೀಕರಿಗೆ ಅನುಕೂಲವಾಗುತ್ತದೆ ಮತ್ತು ಅವರ ಸಂಪೂರ್ಣ ಸಹಕಾರದಿಂದ ನಾವು ಆಮ್ಲಜನಕ ಸಮಸ್ಯೆ ಎದುರಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡುತ್ತೇನೆ. ಘಟಕಕ್ಕೆ ವಿದ್ಯುತ್ ಪೂರೈಕೆ ವ್ಯತ್ಯವಾಗದಂತೆ ನೋಡಿಕೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಜನರೇಟರ್ ಇಲ್ಲಿದೆ ಎಂದು ತಿಳಿಸಿದರು.

    ಈ ವೇಳೆ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ಬರ್ಗಿ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ, ತಹಸೀಲ್ದಾರ್ ಮೇಘರಾಜ ನಾಯ್ಕ, ನೋಡಲ್ ಅಧಿಕಾರಿ ಧನಂಜಯ ಹೆಗಡೆ, ಸಿಪಿಐ ಶಿವಪ್ರಕಾಶ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts