More

    ಆನ್‌ಲೈನ್ ಕಲಿಕೆಗೆ ಒತ್ತು ನೀಡಲು ಆಟೋ ಪ್ರಚಾರ

    ಶಿಡ್ಲಘಟ್ಟ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ. ಹೀಗಾಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಆನ್‌ಲೈನ್ ಕಲಿಕೆಗೆ ಒತ್ತು ಕೊಡುತ್ತಿರುವ ಅಧಿಕಾರಿಗಳು, ಆನ್ ಲೈನ್ ಮೂಲಕ ಪುನರ್‌ಮನನ ತರಗತಿಗಳನ್ನು ನಡೆಸುವ ವಿನೂತನ ಯೋಜನೆ ರೂಪಿಸುತ್ತಿದ್ದಾರೆ. ಇದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ತಿಳಿಸಿದರು.

    ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿಯಿಂದ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪುನರ್‌ಮನನ ತರಗತಿಗಳ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಉತ್ತಮ ಫಲಿತಾಂಶ ಗಳಿಕೆಯ ಮೂಲಕ ಬದುಕು ರೂಪಿಸಲು ಯೂಟ್ಯೂಬ್, ಚಂದನವಾಹಿನಿಯಲ್ಲಿ ತಜ್ಞರು, ವಿಷಯಪರಿಣಿತರಿಂದ ಪುನರ್ಮನನ ತರಗತಿಗಳನ್ನು ನಡೆಸಲಾಗುತ್ತಿದೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಪಾಲಕರು ಪ್ರೇರೇಪಿಸಬೇಕು. ಅದಕ್ಕಾಗಿ ಮೇಲೂರು ಗ್ರಾಮ ಪಂಚಾಯಿತಿಯಾದ್ಯಂತ ಪ್ರತಿಗ್ರಾಮದಲ್ಲಿ ಆಟೋಪ್ರಚಾರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
    ಮೇಲೂರು, ಭಕ್ತರಹಳ್ಳಿ, ಕಂಬದಹಳ್ಳಿ, ಮಳ್ಳೂರು, ಚೌಡಸಂದ್ರ, ಅಪ್ಪೇಗೌಡನಹಳ್ಳಿ, ಕೇಶವಾರ ಗ್ರಾಮಗಳಲ್ಲಿ ಆಟೋ ಪ್ರಚಾರ ನಡೆಸಿ, ಕರಪತ್ರ ಹಂಚಲಾಯಿತು. ಗ್ರಾಪಂ ಉಪಾಧ್ಯಕ್ಷ ಆಂಜನೇಯರೆಡ್ಡಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಮೇಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಗಂಗಪ್ಪ, ಶಿಕ್ಷಕರಾದ ಸುಜಾತಾ, ಗಾಯಿತ್ರಿ, ವೆಂಕಟಶಿವಾರೆಡ್ಡಿ, ಪಿಡಿಒ ಶಾರದಮ್ಮ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts