More

    ಆಧುನಿಕ, ಪಾರಂಪರಿಕ ಶಿಕ್ಷಣ ರಥದ ಎರಡು ಚಕ್ರಗಳಿದ್ದಂತೆ

    ಗೋಕರ್ಣ: ಆಧುನಿಕ ಮತ್ತು ಪಾರಂಪರಿಕ ಶಿಕ್ಷಣ ಒಂದು ರಥದ ಎರಡು ಚಕ್ರಗಳಿದ್ದಂತೆ. ಪ್ರಾಚೀನ ಯುಕ್ತಿ ಮತ್ತು ಅರ್ವಾಚೀನ ಸಂಶೋಧನಾ ತತ್ವಗಳ ಮೂಲಕ ಉತ್ತಮ ವ್ಯಕ್ತಿತ್ವದ ನಿರ್ಮಾಣ ಸಾಧಿತವಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಇಲ್ಲಿನ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದಲ್ಲಿ ಗುರುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗಾಗಿ ಆನ್​ಲೈನ್ ತರಬೇತಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ಋಷಿಯುಗ ಮತ್ತು ನವಯುಗಗಳ ಸಮ್ಮಿಲವನ್ನು ಯುವ ಜನತೆಗೆ ಪರಿಚಯಿಸುವ ಧ್ಯೇಯದಿಂದ ಗೋಕರ್ಣ ಕ್ಷೇತ್ರದಲ್ಲಿ ಐದು ಗುರುಕುಲಗಳ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಉತ್ತಮ ಸಮಾಜವನ್ನು ಆಧುನಿಕ ವಿಶ್ವಕ್ಕೆ ನೀಡುವ ಗುರಿ ಹೊಂದಲಾಗಿದೆ. ಉತ್ತಮ ಜೀವನ ಶ್ರೇಷ್ಠವಾದ ನೈತಿಕ ಸಂಸ್ಕಾರಗಳಿಂದ ಉದಿತವಾಗುತ್ತದೆ. ಉತ್ತಮವಾದ ಸಂಸ್ಕಾರಯುತ ಜೀವನ ಮಾತ್ರ ಉತ್ತಮವಾದ ಸಮಾಜವನ್ನು ನಿರ್ವಿುಸುತ್ತದೆ. ಯುವ ಜನತೆ ಜೀವನದಲ್ಲಿ ಎಂದಿಗೂ ಸೋಲಬಾರದು ಎನ್ನುವ ಮೂಲ ಕಾರಣದೊಂದಿಗೆ ಈ ಗುರುಕುಲದಲ್ಲಿ ಜೀವನ ಶಿಕ್ಷಣ ಬೋಧಿಸಲಾಗುತ್ತದೆ. ವಿದ್ಯೆ ಮತ್ತು ಉದ್ಯೋಗದಿಂದ ಭೌತಿಕ ಬದುಕಿನ ಮೂಲ ಅಗತ್ಯಗಳನ್ನು ಪಡೆದ ಬಳಿಕ ನಾವು ಸಮಾಜದಲ್ಲಿ ಹೇಗೆ ಬಾಳ್ವೆ ನಡೆಸಬೇಕು ಎನ್ನುವುದು ಮುಖ್ಯ. ಇವುಗಳನ್ನು ಗುರುಕುಲ ತಿಳಿಸಿಕೊಟ್ಟು ಭವ್ಯ ರಾಷ್ಟ್ರ ನಿರ್ವಣದ ಪ್ರಯತ್ನ ಕೈಗೊಳ್ಳಲಿದೆ. ಋಷಿಯುಗದ ಸಾಕ್ಷಾತ್ಕಾರ ಮತ್ತು ಕಲಿಯುಗದ ಆವಿಷ್ಕಾರಗಳ ಸಮನ್ವಯದಿಂದ ಸರ್ವ ಶ್ರೇಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದರು.

    ಎಂ.ಆರ್.ಹೆಗಡೆ ಇತರರಿದ್ದರು. ವಿದ್ಯಾ ಪರಿಷತ್ ಉಪಾಧ್ಯಕ್ಷ ಡಾ.ಮರುವಳ ನಾರಾಯಣ ಭಟ್ಟ ಸ್ವಾಗತಿಸಿದರು. ಶ್ರೀಶ ಬೈಪಡವು ಪ್ರಸ್ತಾಪಿಸಿದರು. ಡಾ.ಸುಬ್ರಾಯ ಹೆಗಡೆ ಶುಭಾಶಂಸನೆಗೈದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts