More

    ಆಧುನಿಕ ಜೀವನಶೈಲಿಯಿಂದ ಅನಾರೋಗ್ಯ, ರೋಟರಿ ಸಂಸ್ಥೆ ಅಧ್ಯಕ್ಷ ಸ್ವಾಮಿ ಅಭಿಮತ, ಉತ್ತಮ ಆಹಾರ ಪದ್ಧತಿ ಅನುಸರಣೆಗೆ ಸಲಹೆ

    ನೆಲಮಂಗಲ: ಸ್ವಯಂ ಸೇವಾ ಸಂಸ್ಥೆಗಳು ಆಯೋಜಿಸುವ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರಗಳ ಪ್ರಯೋಜನ ಪಡೆದು ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ವಿ.ಆರ್.ಸ್ವಾಮಿ ತಿಳಿಸಿದರು.

    ನಗರದ ಚನ್ನಪ್ಪ ಬಡಾವಣೆಯ ಎಂಇಎಸ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ಪ್ರಕ್ರಿಯಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

    ಆಧುನಿಕತೆಯ ದಿನಗಳಲ್ಲಿ ಜೀವನಶೈಲಿ, ಆಹಾರ ಪದ್ಧತಿ ಒಂದೆಡೆಯಾದರೆ ದುಶ್ಚಟ, ಹವಮಾನ ವೈಪರೀತ್ಯಗಳಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಸಕ್ಕರೆಕಾಯಿಲೆ, ರಕ್ತದೊತ್ತಡ, ಹೃದಯ ರೋಗಗಳು ಸಾಮಾನ್ಯ ಎಂಬಂತಾದೆ. ದುಡಿದ ಬಹತೇಕ ಹಣವನ್ನು ಚಿಕಿತ್ಸೆ, ಔಷಧೊಪಚಾರಕ್ಕಾಗಿ ವೆಚ್ಚಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

    ಸಾರ್ವಜನಿಕರು ಉತ್ತಮ ಜೀವನಶೈಲಿ, ಒಳ್ಳೆಯ ಆಹಾರ ಪದ್ಧತಿ ಅನುಸರಣೆ ಮಾಡಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಬೇಕು. ವ್ಯಾಯಾಮ ಧ್ಯಾನ ಯೋಗದಂತಹ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

    ಆರ್ಥಿಕ ಸಮಸ್ಯೆ ಒಂದೆಡೆಯಾದರೆ, ಆರೋಗ್ಯ ಕುರಿತಾದ ನಿರ್ಲಕ್ಷ್ಯದಿಂದ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದನ್ನು ಮನಗಂಡ ರೋಟರಿ ಸಂಸ್ಥೆ ಉಚಿತ ಶಿಬಿರ ಆಯೋಜಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರೋಟರಿ ಸಂಸ್ಥೆ ಕಾರ್ಯದರ್ಶಿ ಕೆಂಪೇಗೌಡ ತಿಳಿಸಿದರು.

    ಮಂಡಿನೋವು, ಸೊಂಟನೋವು, ಕುತ್ತಿಗೆ, ತಲೆನೋವು, ಕೆಮ್ಮು, ದಮ್ಮು, ಅಜೀರ್ಣ, ಸ್ಥೂಲಕಾಯ, ಸಕ್ಕರೆ ಕಾಯಿಲೆ, ಬಿಪಿ, ಪೈಲ್ಸ್, ಕಣ್ಣಿನ ಪರೀಕ್ಷೆ, ಚರ್ಮರೋಗ, ಮುಂತಾದ ಕಾಯಿಲೆಗಳ ತಪಾಸಣೆ ಮಾಡಿ ಅಗತ್ಯವಿರುವವರಿಗೆ ಉಚಿತವಾಗಿ ಆಯುರ್ವೇದ ಔಷಧ ವಿತರಣೆ ಮಾಡಲಾಯಿತು. 350 ಜನ ಶಿಬಿರದ ಅನುಕೂಲ ಪಡೆದುಕೊಂಡರು. ಜತೆಗೆ 150ಮಂದಿ ಕೋವಿಡ್ ಲಸಿಕೆ ಪಡೆದುಕೊಂಡರು.

    ನಗರಸಭೆ ಸದಸ್ಯ ಎನ್.ಗಣೇಶ್, ನಾಮ ನಿರ್ದೇಶಿತ ಸದಸ್ಯ ವಸಂತ್‌ಕುಮಾರ್, ರೋಟರಿ ಆರೋಗ್ಯ ಘಟಕ ನಿರ್ದೇಶಕ ಚಂದ್ರಕುಮಾರ್, ಉಪಾಧ್ಯಕ್ಷ ಸುರೆಂದ್ರನಾಥ್, ಖಜಾಂಚಿ ಎಂ.ಟಿ.ನವೀನ್‌ಕುಮಾರ್, ಮಾಜಿ ಅಧ್ಯಕ್ಷ ಟಿ.ನಾಗರಾಜು, ವಕೀಲ ಮಂಜುನಾಥ್, ಸಿ.ಜಿ.ಮಂಜುನಾಥ್‌ಗೌಡ, ಕೆ.ಮಂಜುನಾಥ್, ನಿಯೋಜಿತ ಅಧ್ಯಕ್ಷ ಎನ್.ಜಿ.ನಾಗರಾಜು, ನಿರ್ದೇಶಕರಾದ ಎಸ್.ಗಂಗರಾಜು, ರವಿಕುಮಾರ್, ಬಸವರಾಜು, ಶಿವಶಂಕರ್‌ಪ್ರಸಾದ್, ಚಂದ್ರಕುಮಾರ್, ರಂಜಿತ್, ಚನ್ನಕೇಶವ್, ಮುರಳಿ, ಇನ್ನರ್ ವೀಲ್ ಅಧ್ಯಕ್ಷೆ ದಿವ್ಯಾ, ಮಾಜಿ ಅಧ್ಯಕ್ಷ ಶಾರದಾ ಸುಂದರೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಹೇಮಮೂರ್ತಿ, ಮುನಿರಾಜು, ಶಿಬಿರ ವ್ಯವಸ್ಥಾಪಕ ಡಾ.ಮಂಜುನಾಥ್, ವೈದ್ಯರಾದ ಡಾ.ಅಜಯ್‌ಕುಮಾರ್, ಡಾ. ಕುಶಾಲ್, ಸ್ನೇಹಾ ಮತ್ತಿತರರು ಉಪಸ್ಥಿತರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts