More

    ಆಧಾರ್ ತಿದ್ದುಪಡಿ ಕೇಂದ್ರ ಪುನರಾರಂಭಿಸಿ

    ಹಳಿಯಾಳ: ತಾಲೂಕಿನಲ್ಲಿ ಸ್ಥಗಿತಗೊಳಿಸಿದ ಆಧಾರ್ ತಿದ್ದುಪಡಿ ಕಾರ್ಯವನ್ನು ಮರು ಆರಂಭಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಆಡಳಿತವನ್ನು ಆಗ್ರಹಿಸಿದೆ.

    ಬುಧವಾರ ಜಯ ಕರ್ನಾಟಕ ಸಂಘದ ಪದಾಧಿಕಾರಿಗಳ ನಿಯೋಗವು ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.

    ಸರ್ಕಾರದ ಹಾಗೂ ಸರ್ಕಾರೆತರ ಪ್ರತಿಯೊಂದು ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕಾರ್ಡ್​ನಲ್ಲಿ ಜನ್ಮದಿನಾಂಕ ಮೊಬೈಲ್ ಸಂಖ್ಯೆ, ವಿಳಾಸ ಇತ್ಯಾದಿ ಲಿಂಕ್ ಮಾಡುವುದು ಅವಶ್ಯಕವಾಗಿದೆ. ಹೀಗಿರುವಾಗ ಹಳಿಯಾಳ ತಾಲೂಕಿನಲ್ಲಿ ಆಧಾರ್ ತಿದ್ದುಪಡಿ ಕಾರ್ಯ ಸ್ಥಗಿತಗೊಳಿಸಿದ್ದರಿಂದ ಇಲ್ಲಿಯ ಜನರು ದಾಂಡೇಲಿ, ಆಳ್ನಾವರ, ಧಾರವಾಡ ತಾಲೂಕುಗಳಿಗೆ ಹೋಗಿ ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಹಳಿಯಾಳದಲ್ಲೇ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕು ಅಧ್ಯಕ್ಷ ಶಿರಾಜ್ ಮುನವಳ್ಳಿ, ವಿನೋದ ಗಿಂಡೆ, ಸುಭಾಸ ಕೊಲಕರ್, ಮಹೇಶ ಹುಲಕೊಪ್ಪಕರ, ಕಿರಣ ಕಮ್ಮಾರ, ಸತೀಶ ಚಲವಾದಿ, ಅನಿಸ್ ಪೀರಜಾದೆ, ದುರ್ಗಪ್ಪ ಚಲವಾದಿ, ಗಣೇಶ ಗೊಸಪ್ಪನವರ, ಅಮರ ಪಳಣಿಸ್ವಾಮಿ, ಪರಶುರಾಮ ಬಗರಿಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts