More

    ಆದಾಯದ ಮೂಲ ಹೈನುಗಾರಿಕೆ

    ತಿ.ನರಸೀಪುರ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ಆದಾಯದ ಮೂಲವಾಗಿದ್ದು, ಯುವಜನತೆ ಹೆಚ್ಚಿನ ಒತ್ತು ನೀಡುವಂತೆ ಶಾಸಕ ಎಂ.ಅಶ್ವಿನ್‌ಕುಮಾರ್ ಸಲಹೆ ನೀಡಿದರು.
    ತಾಲೂಕಿನ ಮೇಗಳಕೊಪ್ಪಲು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.


    ಹೈನುಗಾರಿಕೆ ಪ್ರಸ್ತುತ ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದ್ದು, ಯುವ ಜನತೆ ಆದಾಯ ಮೂಲವನ್ನು ಉತ್ತಮಪಡಿಸಿಕೊಳ್ಳಬಹುದು. ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಹೈನುಗಾರಿಕೆ ನೆರವಾಗಲಿದೆ. ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ಸರ್ಕಾರ ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


    2021-22ನೇ ಸಾಲಿನಲ್ಲಿ ಹೆಚ್ಚು ಹಾಲು ಉತ್ಪಾದಕರಿಗೆ ಬಹುಮಾನ ವಿತರಿಸಲಾಯಿತು. ಮೈಮುಲ್ ನಿರ್ದೇಶಕ ಆರ್.ಚೆಲುವರಾಜು, ಮಾಜಿ ಅಧ್ಯಕ್ಷ ಓಂಪ್ರಕಾಶ್, ಜಿಲ್ಲಾ ವ್ಯವಸ್ಥಾಪಕ ದಿವಾಕರ್, ಗ್ರಾಮದ ಡೇರಿ ಅಧ್ಯಕ್ಷ ಪುರುಷೋತ್ತಮ, ಉಪಾಧ್ಯಕ್ಷೆ ಜ್ಯೋತಿ, ಮಾರ್ಗ ವಿಸ್ತರಣಾಧಿಕಾರಿ ಪ್ರಮೋದ್, ತಾಪಂ ಮಾಜಿ ಅಧ್ಯಕ್ಷ ಕುಮಾರ್, ಗ್ರಾಪಂ ಸದಸ್ಯ ಸಿದ್ದೇಗೌಡ, ಸಂಘದ ನಿರ್ದೇಶಕರಾದ ಯತಿರಾಜ್, ಜಯರಾಮೇಗೌಡ, ಸಿದ್ದೇಗೌಡ, ಮಂಜುನಾಥ ಸ್ವಾಮಿ, ಚಿಕ್ಕರಾಚೇಗೌಡ, ಸಿದ್ದೇಗೌಡ, ಕೃಷ್ಣೇಗೌಡ, ರಾಜೇಶ್ವರಿ, ಪುಷ್ಪಾ, ಯಜಮಾನರಾದ ರಂಗಸ್ವಾಮಿ, ಬಸವಣ್ಣ, ನಾಗೇಗೌಡ, ರಾಮಕೃಷ್ಣೇಗೌಡ, ಮುಖಂಡರಾದ ದಿನೇಶ್, ಮಹದೇವಸ್ವಾಮಿ, ಸಂಘದ ಕಾರ್ಯದರ್ಶಿ ಕೆ.ಮಧು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts