More

    ಆತಂಕದಲ್ಲಿ ವಾಣಿಜ್ಯ ನಗರಿ ಜನತೆ

    ರಾಣೆಬೆನ್ನೂರ: ಇಲ್ಲಿಯ ಮಾರುತಿ ನಗರದ ಬಟ್ಟೆ ವ್ಯಾಪಾರಿಯೊಬ್ಬರಿಗೆ ಮಂಗಳವಾರ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಜನತೆಯಲ್ಲಿ ಆತಂಕ ಶುರುವಾಗಿದೆ.

    ದೊಡ್ಡಪೇಟೆ ಮುಖ್ಯ ರಸ್ತೆಯಲ್ಲಿ ಬಟ್ಟೆ ವ್ಯಾಪಾರಿಯ ಅಂಗಡಿ ಇದೆ. ಈ ಅಂಗಡಿಗೆ ಹಲವಾರು ಜನರು ಬಂದು ಹೋಗಿದ್ದಾರೆ. ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವ್ಯಾಪಾರಿ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಆತನಿಗೆ ಚಿಕಿತ್ಸೆ ಸಹ ನೀಡಿದ್ದಾರೆ. ಹೀಗಾಗಿ ಸೋಂಕು ಇನ್ನಷ್ಟು ಜನರಿಗೆ ಹರಡುವ ಭೀತಿ ಎದುರಾಗಿದೆ.

    ಮೂರು ಸ್ಥಳ ಸೀಲ್​ಡೌನ್

    ಕರೊನಾ ಪಾಸಿಟಿವ್ ರೋಗಿ ವಾಸವಾಗಿದ್ದ ಮಾರುತಿ ನಗರ, ಆತನ ಬಟ್ಟೆ ಅಂಗಡಿಯಿರುವ ದೊಡ್ಡಪೇಟೆ ರಸ್ತೆ ಹಾಗೂ ಚಿಕಿತ್ಸೆ ಪಡೆದ ಅಶೋಕ ನಗರದ ಖಾಸಗಿ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ದಿಲೀಪ್ ಶಸಿ, ಡಿವೈಎಸ್ಪಿ ಟಿ.ವಿ. ಸುರೇಶ, ತಹಸೀಲ್ದಾರ್ ಬಸನಗೌಡ ಕೋಟೂರು ಭೇಟಿ ನೀಡಿ ಪರಿಶೀಲಿಸಿದರು.

    ರೋಗಿಯ ಪ್ರಥಮ ಸಂಪರ್ಕದಲ್ಲಿದ್ದ 10 ಜನ, ದ್ವಿತೀಯ ಸಂಪರ್ಕದಲ್ಲಿದ್ದ 10 ಹಾಗೂ ಆತನಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.

    ಸ್ವಯಂ ಪ್ರೇರಣೆಯಿಂದ ಪರೀಕ್ಷಿಸಿಕೊಳ್ಳಿ

    ಬಟ್ಟೆ ವ್ಯಾಪಾರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮೇ 18ರಿಂದ ಈವರೆಗೆ ದೊಡ್ಡಪೇಟೆಯ ಸಾನ್ವಿ ಕಲೆಕ್ಷನ್ ಹಾಗೂ ಸುಜನ್ ಆಸ್ಪತ್ರೆಗೆ ಭೇಟಿ ನೀಡಿದವರು ಮುಂಜಾಗ್ರತ ಕ್ರಮವಾಗಿ ತಾಲೂಕು ಆಸ್ಪತ್ರೆಯ ಫೀವರ್ ಕ್ಲಿನಿಕ್​ಗೆ ಭೇಟಿ ನೀಡಿ ಸ್ವ್ಯಾಬ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ದಿಲೀಪ್ ಶಸಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts