More

    ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪ್ರಕಟ

    ಚಿತ್ರದುರ್ಗ:ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಶನಿವಾರ ಬಿಡುಗಡೆ ಮಾಡಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಪಟ್ಟಿ ಪ್ರಕಟಿಸಿದರು.
    ಕಳೆದ ನವೆಂಬರ್‌ನಲ್ಲಿ ಕ್ಷೇತ್ರದ ಕರಡು ಮತದಾರರ ಪಟ್ಟಿ ಬಿಡುಗಡೆ ಆಗಿತ್ತು. ಅಂತಿಮ ಪಟ್ಟಿ ಬಳಿಕವೂ ಅರ್ಹರ ಸೇರ್ಪಡೆಗೆ, ತಿದ್ದುಪಡಿಗೆ ಅವಕಾಶವಿದೆ. ಬಳಿಕ ಹೆಚ್ಚುವರಿ ಪಟ್ಟಿ ಸಿದ್ದಪಡಿಸಲಾಗುವುದು. ಅಂತಿಮ ಪಟ್ಟಿ, ಜಿಲ್ಲಾಧಿಕಾರಿ,ಎಸಿ ಹಾಗೂ ತಾಲೂಕು ಕಚೇರಿಗಳಲ್ಲಿ ಪರಿಶೀಲನೆಗೆ ದೊರೆಯಲಿದೆ ಎಂದರು.
    ಅಂತಿಮ ಪಟ್ಟಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 3238 ಪುರುಷರು, 1377 ಮಹಿಳೆಯರು ಸೇರಿ 4615 ಶಿಕ್ಷಕ ಮತದಾರರಿದ್ದಾರೆ. ಕರಡು ಪಟ್ಟಿಯಂತೆ ಈ ಸಂಖ್ಯೆ 4271 ಇತ್ತು ಎಂದು ಮಾಹಿತಿ ನೀಡಿದರು.
    ಅಂತಿಮ ಮತದಾರರ ಪಟ್ಟಿ ಅನ್ವಯ ಮೊಳಕಾಲ್ಮೂರು ತಾಲೂಕಿನಲ್ಲಿ 253, ಚಳ್ಳ ಕರೆ 903, ಚಿತ್ರದುರ್ಗ 1519, ಹಿರಿಯೂರು 822, ಹೊಸದುರ್ಗ 665 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 453 ಮತದಾರರಿದ್ದಾರೆ.ಕರಡು ಪಟ್ಟಿಗೆ ಹೋಲಿಸಿದರೆ ಹೊಸದಾಗಿ 344 ಮತದಾರರ ಸೇರ್ಪಡೆಯಾಗಿದೆ ಎಂದು ವಿವರಿಸಿದರು.
    ಲೋಕಸಭಾ ಚುನಾವಣೆಯಲ್ಲಿ 80ವರ್ಷ ಮೀರಿದ ಹಾಗೂ ಶೇ.40 ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಈ ಹಿನ್ನಲೆಯಲ್ಲಿ ಶೇ.95ರಷ್ಟು ಮ್ಯಾಪಿಂಗ್ ಕೂಡ ಆಗಿದೆ ಎಂದರು.
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಪಿಂಗ್ ಆಗದ ಕಾರಣ ಅಂಗ ವಿಕಲರು, 80 ವರ್ಷ ವಯಸ್ಸು ಮೀರಿದ ವೃದ್ಧರು ಅರ್ಹರಿದ್ದರೂ ಮನೆಯಿಂದ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
    ಎಲ್‌ಒಗಳು ಮನೆ, ಮನೆ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ಗಮನಹರಿಸಲು ತಿಳಿಸಲಾಗಿದೆ. ಇದಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮಾಹಿತಿಗೆ ವೆಬ್‌ಸೈಟ್ ಡಿಡಿಡಿ.ಚ್ಞ್ಞಟ್ಠಠಿಟ್ಟಜಿ ಚ್ಟ.್ಚಟಞ ವೀಕ್ಷಿಸಲು ತಿಳಿಸಿದರು.
    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಸಿಪಿಐಎಂ ಡಿಒಸಿ ಸಿ.ಕೆ.ಗೌಸ್‌ಪೀರ್, ಚುನಾವಣಾ ತಹಸೀಲ್ದಾರ್ ಸಂತೋಷ್‌ಕುಮಾರ್, ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts