More

    ಆಂಧ್ರದ 11 ಜನರ ತಪಾಸಣೆ

    ಸಂಶಿ: ಮೆಣಸಿನಕಾಯಿ ವ್ಯಾಪಾರಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ 11 ವ್ಯಾಪಾರಸ್ಥರನ್ನು ಡಾ. ಎಸ್.ಬಿ. ತುಕ್ಕಣ್ಣವರ ಶನಿವಾರ ತಪಾಸಣೆ ನಡೆಸಿದರು. ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿ, ನಿಮ್ಮೂರಿಗೆ ಮರಳá-ವಂತೆ ವ್ಯಾಪಾರಿಗಳಿಗೆ ಸೂಚಿಸಿದರು.

    ಆಂಧ್ರಪ್ರದೇಶದ ಅಮೃತಾಪುರ, ಕೋಹಿನತೋಟ, ಬಸರಕೋಡ್, ಹಡ್ಲಿಗಿ ಗ್ರಾಮಗಳ ಈ ವ್ಯಾಪಾರಿಗಳು ಸಂಶಿಯ ಹೋಟೆಲ್​ವೊಂದರಲ್ಲಿ ಬೆಳಗ್ಗೆ ಉಪಾಹಾರ ಸೇವಿಸಿದ್ದರು. ಈ ವಿಷಯವನ್ನು ಪ್ರತ್ಯಕ್ಷರ್ದಗಳು ಗ್ರಾಪಂಗೆ ತಿಳಿಸಿದ್ದರು. ಗ್ರಾಪಂ ಸದಸ್ಯರು, ಸಿಬ್ಬಂದಿ ವ್ಯಾಪಾರಸ್ಥರನ್ನು ಒಂದೆಡೆ ಸೇರಿಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ತಪಾಸಣೆ ಮಾಡಿಸಿದರು.

    ‘ನೀವು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ತೆರಳಿ. ಕರೊನಾ ಹರಡá-ವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರೂ ಹೊರ ರಾಜ್ಯದಿಂದ ಇಲ್ಲಿಗೆ ಬರುವುದು ಸೂಕ್ತವಲ್ಲ. ನೀವು, ನಿಮ್ಮ ಕುಟುಂಬ, ಬೇರೆಯವರ ಆರೋಗ್ಯದ ಹಿತದೃಷ್ಟಿಯಿಂದ ನಿಮ್ಮೂರಿಗೆ ಮರಳಿ ಹೋಗಿ’ ಎಂದು ಡಾ. ಎಸ್.ಬಿ. ತುಕ್ಕಣ್ಣವರ ವ್ಯಾಪಾರಸ್ಥರಿಗೆ ತಿಳಿಹೇಳಿದರು.

    ಗ್ರಾಪಂ ಅಧ್ಯಕ್ಷ ಶೇಖರಪ್ಪ ಹರಕುಣಿ, ಸದಸ್ಯ ಪ್ರಕಾಶಗೌಡ ಪಾಟೀಲ ಮಾತನಾಡಿ, ಕರೊನಾ ಸೋಂಕು ತಡೆಗಟ್ಟಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಇಂಥದ್ದರಲ್ಲಿ ಹೊರರಾಜ್ಯದಿಂದ ಇಲ್ಲಿಗೆ ಬಂದಿರುವುದು ಎಲ್ಲರಲ್ಲೂ ಅನಗತ್ಯ ಆರೋಗ್ಯ ಭೀತಿ ಉಂಟಾಗಿದೆ. ಗ್ರಾಮದ ವ್ಯಾಪಾರಸ್ಥರು ಹೊರಗಡೆ ಭಾಗದ ವ್ಯಾಪಾರಸ್ಥರನ್ನು ಕರೆತರದೇ ಸಾಮಾಜಿಕ ಕಾಳಜಿ ವಹಿಸಬೇಕು ಎಂದರು.

    ತಾಪಂ ಮಾಜಿ ಸದಸ್ಯ ಜೆ.ಬಿ. ಉಪ್ಪಿನ, ಗ್ರಾಪಂ ಮಾಜಿ ಅಧ್ಯಕ್ಷರಾದ ಯಲ್ಲಪ್ಪಗೌಡ ಪಾಟೀಲ, ಬಸವರಾಜ ಗುಡಗೇರಿ, ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts