More

    ಆಂಜನೇಯ, ನರಸಿಂಹಸ್ವಾಮಿ ಪ್ರತಿಷ್ಠಾಪನೆ ಇಂದು

    ಚಿತ್ರದುರ್ಗ: ತಾಲೂಕಿನ ಅನ್ನೇಹಾಳ್ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

    ಶನಿವಾರ ಅಷ್ಟಬಂಧ ಪ್ರತಿಷ್ಠಾಪನೆ, ಕಲಶಾರೋಹಣ, ಮಹಾಕುಂಭಾಭಿಷೇಕ, ಸಂಪ್ರೋಕ್ಷಣಾ ಪೂಜೆ, ಬೆಳಗ್ಗೆ 9ರಿಂದ 9.35ಕ್ಕೆ ಭಗವದ್ ಧ್ವಜಾರೋಹಣ ನಡೆಯಿತು. ದೇವರನರಸೀಪುರದ ಜಗನ್ನಾಥ್ ಭಟ್ ತಂಡದವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

    ಸಂಜೆ 5.30ಕ್ಕೆ ಗಂಗಾಪೂಜೆ, ಯಾಗಶಾಲಾ ಪ್ರವೇಶ, ಸ್ವಸ್ತಿವಾಚನ, ಪುಣ್ಯಾಹವಾಚನ, ಶ್ರೀವಾಸುದೇವ ಪುಣ್ಯಾಹ, ರಕ್ಷಾಬಂಧನ, ಪಂಚಗವ್ಯ ಆರಾಧನ, ಋತ್ವಿಕ್ ವರ್ಣ, ವಾಸ್ತು ರಾಕ್ಷೋಜ್ಞಾ, ದಿಕ್‌ದೇವತಾ ಹೋಮ, ಕಲಶ ಸ್ಥಾಪನ ಬಿಂಬಶುದ್ಧಿ, ಮಹಾಗಣಪತಿ ಹೋಮ, ನವಗ್ರಹ ಆರಾಧನೆ, ನಿದ್ರಾಕಲಶ ಸ್ಥಾಪನೆ, ಶಯನಾನಿವಾಸ, ವಸ್ತ್ರಾಧಿವಾಸ, ಫಲಾಧಿವಾಸ, ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    3ರಂದು ಬೆಳಗ್ಗೆ 9.50ರಿಂದ 10.25ಕ್ಕೆ ಕಲಶಾರೋಹಣ, ಮಹಾಕುಂಭಾಭಿಷೇಕ, ಮಹಾಪೂರ್ಣಾಹುತಿ, ಬಲಿಪ್ರಧಾನ, ಅಷ್ಟಾವದನ ಸೇವೆ, ಆಲಯ ಪ್ರದಕ್ಷಿಣೆ ಜರುಗಲಿದೆ.

    ಆಂಜನೇಯಸ್ವಾಮಿ, ಅಹೋಬಲ ನರಸಿಂಹಸ್ವಾಮಿ ದೇವರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಿರಿಗೆರೆಯ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಸಾನಿಧ್ಯ ವಹಿಸುವರು.

    ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಐಎಎಸ್ ಅಧಿಕಾರಿ ಬಸವರಾಜ್ ಸಿದ್ದಪ್ಪ, ಕೆಎಎಸ್ ಅಧಿಕಾರಿ ನಾಗರಾಜ್ ಸಿದ್ದಪ್ಪ ಅತಿಥಿಗಳಾಗಿ ಭಾಗವಹಿಸುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆಂಜನೇಯಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಎಚ್.ನಿರಂಜನಮೂರ್ತಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts