More

    ಅವ್ಯವಸ್ಥೆ ಆಗರ ಅಳ್ನಾವರ ಬಸ್ ನಿಲ್ದಾಣ

    ಮಂಜುನಾಥ ನಂದಿಹಳ್ಳಿ ಅಳ್ನಾವರ

    ಪಟ್ಟಣದ ಬಸ್ ನಿಲ್ದಾಣದ ಮೇಲ್ಛಾವಣಿ ಕಾಮಗಾರಿ 5 ತಿಂಗಳಾದರೂ ಮುಗಿಯದ ಕಾರಣ ಪ್ರಯಾಣಿಕರಿಗೆ ನಿಲ್ಲಲು, ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ.

    ಕಳೆದ ಜನವರಿಯಲ್ಲಿ ಇಲ್ಲಿನ ಬಸ್ ನಿಲ್ದಾಣದ ಮೇಲ್ಛಾವಣಿ ಕಾಮಗಾರಿ ಆರಂಭಗೊಂಡಿತ್ತು. ಕರೊನಾ ತಡೆಗೆ ಸರ್ಕಾರ ಮಾರ್ಚ್​ನಲ್ಲಿ ಲಾಕ್​ಡೌನ್ ಘೊಷಿಸಿದ್ದರಿಂದ ಈ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಲಾಕ್​ಡೌನ್ ಸಡಿಲಿಕೆಗೊಂಡ ಪರಿಣಾಮ ಬಸ್ ಸಂಚಾರ ಆರಂಭಿಸಲಾಯಿತು. ಆದರೆ, ಬಸ್ ನಿಲ್ದಾಣ ಮೇಲ್ಛಾವಣಿಯ ಅರ್ಧಂಬರ್ಧ ಕಾಮಗಾರಿಯಿಂದ ಪ್ರಯಾಣಿಕರು ಕುಳಿತುಕೊಳ್ಳಲು, ನಿಲ್ಲಲು ಸ್ಥಳವಿಲ್ಲದಂತಾಗಿದೆ.

    ಮಳೆ ನೀರು ಹರಿದು ಹೋಗದೆ ನಿಲ್ದಾಣದ ಆವರಣದಲ್ಲಿ ನಿಂತು ಕ್ರಿಮಿ-ಕೀಟಗಳು ಹೆಚ್ಚಾಗುತ್ತಿವೆ. ಸುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ರಾತ್ರಿ ಸಮಯದಲ್ಲಿ ಮದ್ಯ ಹಾಗೂ ಧೂಮಪಾನ ಚಟುವಟಿಕೆ ನಡೆಯುತ್ತಿದ್ದು, ನಿಲ್ದಾಣದಲ್ಲಿ ಮದ್ಯದ ಬಾಟಲ್​ಗಳು ಬಿದ್ದಿವೆ. ಇಲ್ಲಿಯ ಅವ್ಯವಸ್ಥೆಯಿಂದ ಮಹಿಳಾ ಪ್ರಯಾಣಿಕರು ಮುಜುಗರ ಪಡುವಂತಾಗಿದೆ.

    ಕೋವಿಡ್ ತಡೆಗಟ್ಟಲು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು, ಬಸ್ ನಿಲ್ದಾಣದ ಮೇಲ್ಛಾವಣಿ ಕಾಮಗಾರಿಯನ್ನು ಬೇಗನೆ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ವಚ್ಛತೆ ಹಾಗೂ ಕಾಮಗಾರಿ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಆದರೂ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

    | ಮಾರುತಿ ಶೆಟ್ಟಿ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ, ಅಳ್ನಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts