More

    ಅವೈಜ್ಞಾನಿಕ ರಸ್ತೆ ವಿಭಜಕ ತೆರವುಗೊಳಿಸಿ

    ಚಿತ್ರದುರ್ಗ: ಕೋಟೆನಗರಿಯ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿರುವ ವಿಭಜಕಗಳು ಅವೈಜ್ಞಾನಿಕವಾಗಿದ್ದು, ತೆರವಿಗೆ ಕ್ರಮವಹಿಸಬೇಕು ಎಂದು ಬೆಳಗಾವಿಯಲ್ಲಿ ಮಂಗಳವಾರ ನಡೆದ ಅಧಿವೇಶನದಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸರ್ಕಾರಕ್ಕೆ ಒತ್ತಾಯಿಸಿದರು.

    ಐತಿಹಾಸಿಕ ನಗರದಲ್ಲಿ ಮೊದಲಿನಿಂದಲೂ ಚಿಕ್ಕ ರಸ್ತೆಗಳಿವೆ. ಮುಖ್ಯ ಮಾರ್ಗಗಳು ಕೇವಲ 40 ಅಡಿ ಅಗಲವಿದೆ. ಇದರ ಮಧ್ಯಭಾಗದಲ್ಲಿ 5ಅಡಿ ಎತ್ತರ, 4 ಅಡಿ ಅಗಲದ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಇದರಿಂದಾಗಿ ವಾಹನ ಸವಾರರು, ಪಾದಚರಿಗಳು, ವ್ಯಾಪಾರಸ್ಥರು ನಿತ್ಯ ಒಂದಿಲ್ಲೊಂದು ತೊಂದರೆ ಅನುಭವಿಸುವಂತಾಗಿದೆ. ಅಪಘಾತಗಳು ಹೆಚ್ಚುತ್ತಿವೆ ಎಂದು ಪ್ರಶ್ನಾವಳಿ ವೇಳೆ ಗಮನ ಸೆಳೆಯಲು ಮುಂದಾದರು.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತ ಸಂಪರ್ಕಿಸುವ ಮಾರ್ಗವೂ 35 ವರ್ಷಗಳಿಂದ ಏಕಮುಖ ಸಂಚಾರದ ರಸ್ತೆಯಾಗಿದೆ. ತುಂಬಾ ಕಿರಿದಾಗಿದ್ದು, ಇಲ್ಲಿಯೂ ವಿಭಜಕ ನಿರ್ಮಿಸಿರುವುದರಿಂದ ಕೇವಲ ಎಂಟತ್ತು ಅಡಿ ರಸ್ತೆಯಲ್ಲಿ ಬಸ್ ಸೇರಿ ಇತರೆ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಪಾದಚರಿಗಳ ಸ್ಥಿತಿ ಹೇಳತೀರದಾಗಿದೆ. ಅನೇಕ ಸಾರ್ವಜನಿಕರು ತೆರವಿಗೆ ಆಗ್ರಹಿಸುತ್ತಿದ್ದಾರೆ. ಈ ಕುರಿತು ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿ ಮಾತನಾಡಿ, ಅವೈಜ್ಞಾನಿಕ ರಸೆ ವಿಭಜಕ ನಿರ್ಮಿಸಿದ ಗುತ್ತಿಗೆದಾರರ ಬಿಲ್‌ಗಳನ್ನು ಸರ್ಕಾರ ಈಗಾಗಲೇ ತಡೆಹಿಡಿದಿದೆ. ತೆರವಿನ ಕುರಿತು ಸಿಎಂ, ಲೋಕೋಪಯೋಗಿ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts