More

    ಅವಿಭಕ್ತ ಕುಟುಂಬದಿಂದ ನೆಮ್ಮದಿ ಜೀವನ

    ಗದಗ: ಆಧುನಿಕತೆಯ ಭರಾಟೆಯಲ್ಲಿ ಅವಿಭಕ್ತ ಕುಟುಂಬಗಳು ಬೇರ್ಪಡುತ್ತಿರುವುದು ಒಳ್ಳೆಯ ಲಕ್ಷಣ ಅಲ್ಲ. ಕುಟುಂಬದ ಸಂಬಂಧಗಳು ಒಗ್ಗಟ್ಟಾಗಿ ಗಟ್ಟಿಯಾಗಿದ್ದರೆ ಆದರ್ಶ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಹುಬ್ಬಳ್ಳಿ ನವನಗರದ ಕಾಶಿ ಖಾಸಾ ಶಾಖಾಮಠದ ಶ್ರೀ ರಾಜಶೇಖರ ಶಿವಾಚಾರ್ಯರು ಹೇಳಿದರು.
    ಇಲ್ಲಿನ ವಿವೇಕಾನಂದ ನಗರದಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೀವನ ದರ್ಶನ-20 ಮಾಸಿಕ ಕಾರ್ಯಕ್ರಮ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಅಜ್ಜ-ಅಜ್ಜಿ, ಅತ್ತೆ-ಮಾವ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಅಣ್ಣ-ತಮ್ಮ, ನಾದನಿ-ಮೈದುನ ಹೀಗೆ ಎಲ್ಲರೂ ಒಂದೇ ಕುಟುಂಬದಲ್ಲಿ ವಾಸವಾಗಿದ್ದು ಒಟ್ಟಾಗಿದ್ದರೆ ಸಮಸ್ಯೆಗಳು ಶಮನಗೊಂಡು ಆ ಕುಟುಂಬಕ್ಕೆ ಬಲ ಬರುತ್ತದೆ. ಇದರಿಂದಾಗಿ ಎಲ್ಲರಿಗೂ ಸಾಮೂಹಿಕ ಜವಾಬ್ದಾರಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ನಡೆ-ನುಡಿ ಮೂಡಿ ಬರಲು ಸಾಧ್ಯವಿದೆ. ಅತ್ತೆ-ಸೊಸೆ ಇಬ್ಬರಲ್ಲೂ ಸದ್ಭಾವನೆಗಳಿರಬೇಕು, ಪರಸ್ಪರ ಗೌರವಿಸಬೇಕು. ಅತ್ತೆಯಲ್ಲಿ ತಾಯಿಯ ಸ್ವರೂಪವನ್ನು ಕಾಣುವ, ಸೊಸೆಯಲ್ಲಿ ಮಗಳ ಸ್ವರೂಪವನ್ನು ಕಾಣುವ ಸದ್ಭಾವನೆಯುಳ್ಳ ಮನೆ ಆದರ್ಶ ಮತ್ತು ಸಂಸ್ಕಾರಯುತ ಕುಟುಂಬವಾಗಲಿದೆ ಎಂದರು.
    ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಹೈಸ್ಕೂಲ್ ಸಮಿತಿಯ ಅಧ್ಯಕ್ಷ ಮಹಾಂತೇಶ ನಲವಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಕೊಣ್ಣೂರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಜಗದೀಶ ಯಾಳಗಿ ಅವರನ್ನು ಸನ್ಮಾನಿಸಲಾಯಿತು.
    ಎಸ್.ಎಸ್.ಎಲ್.ಸಿ (ಸಿಬಿಎಸ್​ಇ) ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹರ್ಷ ಮಡಿವಾಳರ, ಸೃಷ್ಟಿ ಹಿರೇಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts