More

    ಅವಳಿ ನಗರದಲ್ಲಿ ವೈಜ್ಞಾನಿಕ ಹಂಪ್ಸ್

    ಹುಬ್ಬಳ್ಳಿ: ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್​ಸಿ) ಸೂಚಿಸಿರುವ ಮಾನದಂಡದಂತೆ ಅವಳಿ ನಗರದಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ. ಮೊದಲ ಹಂತದಲ್ಲಿ 1.32 ಕೋಟಿ ರೂ. ವೆಚ್ಚದಲ್ಲಿ 228 ರಸ್ತೆ ಉಬ್ಬುಗಳು ನಿರ್ವಣವಾಗಲಿದೆ.

    ಈ ಸಂಬಂಧ ಪಾಲಿಕೆ ವ್ಯಾಪ್ತಿಯ 3 ವಿಭಾಗಗಳು (ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ ಹಾಗೂ ಧಾರವಾಡ) ಪ್ರತ್ಯೇಕವಾಗಿ ಟೆಂಡರ್ ಕರೆದಿವೆ. ಧಾರವಾಡ ವಿಭಾಗದ 1 ವಲಯ ಕಚೇರಿ ವ್ಯಾಪ್ತಿ ಬಿಟ್ಟು ಉಳಿದೆಡೆ ಪೂರ್ಣ ಪ್ರಮಾಣದಲ್ಲಿ ಹಂಪ್ಸ್ ನಿರ್ವಿುಸಲಾಗುತ್ತಿದೆ. ಹುಬ್ಬಳ್ಳಿ ಉತ್ತರ ಹಾಗೂ ದಕ್ಷಿಣ ವಿಭಾಗಗಳ ವ್ಯಾಪ್ತಿಯ ಭಾಗಶಃ ಪ್ರದೇಶಗಳಲ್ಲಿ ಹಂಪ್ಸ್ ನಿರ್ವಣವಾಗಲಿದೆ. ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಈ ರೀತಿ ಮಾಡಲಾಗಿದೆ. 2ನೇ ಹಂತದಲ್ಲಿ ಅವಳಿ ನಗರ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ಹಂಪ್ಸ್​ಗಳನ್ನು ಕಾಣಬಹುದು.

    ‘ಅವಳಿ ನಗರದಲ್ಲಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ವಾಹನಗಳಿಗೆ ಹಾಗೂ ಸವಾರರಿಗೆ ತೊಂದರೆದಾಯಕವಾಗಿದೆ. ವೈಜ್ಞಾನಿಕವಾಗಿ ಹಂಪ್​ಗಳನ್ನು ನಿರ್ವಿುಸುವಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು’ ಎಂದು 2016ರಲ್ಲಿ ಸ್ಥಳೀಯರಾದ ಡಾ. ಕೆ.ಎಚ್. ಜಿತೂರಿ ಎಂಬುವವರು ಹುಬ್ಬಳ್ಳಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 2017ರಲ್ಲಿ ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರೆವುಗೊಳಿಸುವಂತೆ ಹಾಗೂ ವೈಜ್ಞಾನಿಕವಾಗಿ ಹಂಪ್ಸ್ ಹಾಕುವಂತೆ ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಹು-ಧಾ ಮಹಾನಗರ ಪಾಲಿಕೆ ಜೆಸಿಬಿ ಬಳಸಿ 192 ಅವೈಜ್ಞಾನಿಕ ವೇಗತಡೆಗಳನ್ನು ಕಿತ್ತು ಹಾಕಿತ್ತು. ಆದರೆ, ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಇದೀಗ ಕಾಲ ಕೂಡಿ ಬಂದಿದೆ.

    ಯಾವ ರಸ್ತೆಯಲ್ಲಿ ಹಂಪ್ಸ್ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಪಾಲಿಕೆ ಅಂದಾಜು ಮಾಡಿದೆ. ಆದರೆ, ನಿಗದಿತ ಯಾವ ಸ್ಥಳದಲ್ಲಿ ಹಂಪ್ಸ್ ಹಾಕಿದರೆ ಸೂಕ್ತ ಎಂಬುದರ ಕುರಿತು ಹು-ಧಾ ಪೊಲೀಸ್ ಕಮಿಷನರೇಟ್ ಸಲಹೆ ಪಡೆಯಬೇಕು. ಸಂಚಾರ ನಿಯಮಗಳ ಪಾಲನೆಗೆ ಅನುಗುಣವಾಗಿ ಹಂಪ್ಸ್ ಇರಬೇಕು ಎಂಬುದು ಪೊಲೀಸರ ವಾದವಾಗಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಎರಡು ಇಲಾಖೆಗಳು ಸಮನ್ವಯ ಸಾಧಿಸಿ ತ್ವರಿತವಾಗಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ವಿುಸಲು ಮುಂದಾಗಬೇಕಿದೆ.

    ವೈಜ್ಞಾನಿಕ ಹಂಪ್ಸ್ ಹೇಗೆ?: ಅವಳಿ ನಗರದಲ್ಲಿ ಹುಡುಕಿದರೂ ಒಂದೇ ಒಂದು ವೈಜ್ಞಾನಿಕ ಹಂಪ್ ಸಿಗುವುದಿಲ್ಲ. ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆಯ ಮೇಲೆ ಅಡ್ಡ ಪಟ್ಟಿ ಇಟ್ಟಂತೆ ಕಾಣುವ ರೋಡ್ ಹಂಪ್​ಗಳೇ ಇಲ್ಲಿ ಕಾಣಸಿಗುತ್ತವೆ. ಇದರಿಂದ ಎಷ್ಟೋ ಜನ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡವರಿದ್ದಾರೆ. ಜತೆಗೆ ಅವೈಜ್ಞಾನಿಕ ಹಂಪ್ಸ್ ವಾಹನಗಳಿಗೂ ಹಾನಿಕಾರಕ.

    ಹಾಗಾದರೆ, ವೈಜ್ಞಾನಿಕ ಹಂಪ್ಸ್ ಹೇಗಿರುತ್ತವೆ? ಹಂಪ್ಸ್ ಹೀಗೆ ಇರಬೇಕೆಂದು ಇಂಡಿಯನ್ ರೋಡ್ ಕಾಂಗ್ರೆಸ್ ನಿರ್ದಿಷ್ಟ ಮಾರ್ಗಸೂಚಿ ಇದೆ. ಅದರಂತೆ ಹು-ಧಾ ದಲ್ಲಿ ಹಂಪ್ಸ್ ನಿರ್ವಣವಾಗಲಿವೆ. ಹಂಪ್ಸ್​ನ ಅಗಲ ರಸ್ತೆಯ ಅಗಲದಷ್ಟು ಇರಲಿದೆ. ಉದ್ದ 3 ಮೀಟರ್ ಇರಲಿದೆ. ಮಧ್ಯದಲ್ಲಿ 10 ಸೇಂಟಿ ಮೀಟರ್ ಎತ್ತರವಾಗಿ ಎಡ ಬಲಕ್ಕೆ ಇಳಿಜಾರಾಗಿ ತಲಾ 1.5 ಮೀಟರ್​ವರೆಗೆ ಹಂಪ್ಸ್ ವಿಸ್ತರಿಸಿಕೊಳ್ಳಲಿದೆ. ಇದರಿಂದ ವಾಹನಗಳ ಇಂಜಿನ್, ಬಿಡಿ ಭಾಗಗಳಿಗೆ ಧಕ್ಕೆ ಆಗಲಾರದು. ವಾಹನಗಳ ವೇಗವು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಲಾಗಿದೆ.

    ಪ್ರಸ್ತಾವಿತ ವೈಜ್ಞಾನಿಕ ಹಂಪ್ಸ್​ಗಳ ವಿವರ

    ವಿಭಾಗವಾರು—-ವೆಚ್ಚ (ಲಕ್ಷ ರೂ.ಗಳಲ್ಲಿ)—-ಹಂಪ್ಸ್​ಗಳ ಸಂಖ್ಯೆ

    ಹುಬ್ಬಳ್ಳಿ ದಕ್ಷಿಣ—21—- 40

    ಹುಬ್ಬಳ್ಳಿ ಉತ್ತರ — 49—- 52

    ಧಾರವಾಡ 61.8– 136

    ಒಟ್ಟು 131.8–228

    ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್​ಸಿ) ಮಾನದಂಡದಂತೆ ಅವಳಿ ನಗರದಲ್ಲಿ ರಸ್ತೆ ಉಬ್ಬುಗಳನ್ನು (ಹಂಪ್ಸ್)ನಿರ್ವಿುಸಲಾಗುವುದು. ಯಾವ ಸ್ಥಳದಲ್ಲಿ ಹಂಪ್ಸ್ ನಿರ್ವಿುಸಬೇಕೆಂಬುದರ ಕುರಿತು ಪೊಲೀಸ್ ಕಮಿಷನರೇಟ್​ನ ಸಲಹೆ ಪಡೆಯಲಾಗುವುದು.
    –ಇ. ತಿಮ್ಮಪ್ಪ, ಅಧೀಕ್ಷಕ ಇಂಜಿನಿಯರ್ ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts