More

    ಅವಳಿನಗರದಲ್ಲಿ ವರುಣನ ಆರ್ಭಟ

    ಧಾರವಾಡ: ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದ ಪರಿಣಾಮ ನಗರದ ಅನೇಕ ಬಡಾವಣೆಗಳು ಜಲಾವೃತವಾಗಿ ಜನರು ಪರದಾಡುವಂತಾಗಿತ್ತು.

    ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣ ನಿರ್ವಣವಾಗಿತ್ತು. ಸಂಜೆ 4 ಗಂಟೆ ಹೊತ್ತಿಗೆ ಗುಡುಗು ಸಹಿತ ಸುರಿಯಲು ಆರಂಭಿಸಿದ ಮಳೆ, 2 ಗಂಟೆ ಕಾಲ ಸುರಿಯಿತು. ಮಳೆರಾಯನ ಆಗಮನದಿಂದ ವಾತಾವರಣ ತಂಪಾಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಅವಾಂತರ ಸೃಷ್ಟಿಗೂ ಕಾರಣವಾಗಿದೆ.

    ಸತತ 2 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಪರಿಣಾಮ ಸಾಧನಕೇರಿ, ಬ್ರಹ್ಮಚೈತನ್ಯ ಪಾರ್ಕ್, ಸಿ.ಬಿ.ನಗರ, ಜನ್ನತ್​ನಗರ, ಟೋಲ್​ನಾಕಾ ರಸ್ತೆ ಸೇರಿ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದವು. ಈ ಬಡಾವಣೆ ನಿವಾಸಿಗಳು ಮನೆಯಿಂದ ಹೊರ ಬರದಂತೆ ಹಾಗೂ ಮನೆಗೆ ತೆರಳದ ಸ್ಥಿತಿ ಎದುರಾಗಿತ್ತು.

    ಪ್ರತಿ ಬಾರಿ ಮಳೆ ಸುರಿದ ಸಂದರ್ಭದಲ್ಲಿ ಈ ಬಡಾವಣೆಗಳು ಜಲಾವೃತವಾಗಿ ಸಮಸ್ಯೆಗೆ ಸಿಲುಕುವುದು ಸಹಜ. ಕಳೆದ ಬಾರಿ ಎದುರಾಗಿದ್ದ ಅತಿವೃಷ್ಟಿ ಸಂದರ್ಭದಲ್ಲಿ ಈ ಬಡಾವಣೆಗಳ ಸ್ಥಿತಿ ಹೇಳತೀರದಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಕ್ರಮವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.

    ಮಳೆಯಾದಾಗ ನೀರು ಮನೆಗಳಿಗೆ ನುಗ್ಗುವುದನ್ನು ತಡೆಯುವಂತೆ ಕ್ರಮ ಕೈಗೊಳ್ಳಲು ಸಿ.ಬಿ. ನಗರದ ಜನರು ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಳ್ಳದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸಿ.ಬಿ.ನಗರ ಹಾಗೂ ಯುಸಿಬಿ ನಗರ ಅಭಿವೃದ್ಧಿ ಸಮಿತಿ ನಾಗರಿಕರು ಆಗ್ರಹಿಸಿದ್ದಾರೆ.

    ಹುಬ್ಬಳ್ಳಿ ವರದಿ: ಶುಕ್ರವಾರ ಸಂಜೆ ಅತಿ ಕಡಿಮೆ ಅವಧಿಯಲ್ಲಿ ಕಾಮೋಡ ಕವಿದು ಸುರಿದ ಮಳೆಯಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯ ಉಂಟಾಯಿತು. 2-3 ದಿನದಿಂದ ಬಿಸಿಲಿನ ವಾತಾವರಣ ಇತ್ತು. ದಿಢೀರ್ ವರುಣ ಕಾಣಿಸಿಕೊಂಡಿದ್ದು ಇನ್ನೂ ಮಳೆಗಾಲ ಮುಗಿದಿಲ್ಲ ಎಂಬ ಸಂದೇಶ ನೀಡಿದಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts