More

    ಅಲೆಮಾರಿಗಳಿಗೆ ನಿವೇಶನ ನೀಡಲು ಸಚಿವರಿಂದ ಅಡ್ಡಿ

    ಔರಾದ್: ಪಟ್ಟಣದಲ್ಲಿ ದಶಕದಿಂದ ವಾಸವಾಗಿರುವ 200ಕ್ಕೂ ಹೆಚ್ಚು ಅಲೆಮಾರಿ ಮತ್ತು ಅರೆ ಅಲೆಮಾರಿ ಜನರಿಗೆ ಸಕರ್ಾರದಿಂದ ನಿವೇಶನ ಮಂಜೂರಾದರೂ ಸ್ಥಳೀಯ ಸಚಿವರು ಅಡ್ಡಿಪಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆರೋಪಿಸಿದರು.

    ಈ ಕುಟುಂಬಗಳಿಗೆ ವಾಸಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪಟ್ಟಣದ ಹೊರವಲಯದ ಸವರ್ೇ ನಂ. 183ರಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ನಿವೇಶನ ಹಂಚಿಕೆಗೆ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಕೂಡಲೇ ಸಂಬಂಧಿತರು ಎಚ್ಚೆತ್ತುಕೊಂಡು ಮಂಜೂರಾದ ಜಮೀನಿನಲ್ಲೇ ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ನಿವೇಶನ ನೀಡಬೇಕು. ಎರಡು ತಿಂಗಳೊಳಗೆ ಈ ಕೆಲಸ ಆಗದಿದ್ದರೆ ತಹಸಿಲ್ ಕಚೇರಿ ಮುಂದೆ ನಾನೇ ಧರಣಿ ಮಾಡುತ್ತೇನೆ ಎಂದು ಎಚ್ಚರಿಸಿದರು.

    ನಂತರ ಪಟ್ಟಣದಲ್ಲಿ ಅಲೆಮಾರಿ, ಅರೆಅಲೆಮಾರಿ ಜನಾಂಗದವರ ಗುಡಿಸಲುಗಳಿಗೆ ತೆರಳಿ ಮಾಹಿತಿ ಪಡೆದರು. ರಾಮಣ್ಣ ವಡೆಯರ್, ಮಲ್ಲಿಕಾಜರ್ುನ ಮೇತ್ರೆ, ಅಂಜಾರೆಡ್ಡಿ, ಬಾಬುರಾವ ತಾರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts