More

    ಅರ್ಥಶಾಸ್ತ್ರ ಮನುಷ್ಯನ ದೈನಂದಿನ ಜೀವನಕ್ಕೆ ಅತ್ಯವಶ್ಯಕ: ಕೆ.ಎಸ್ ಚಂದ್ರಕಲಾ

    ಹಾಸನ: ಅರ್ಥಶಾಸ್ತ್ರ ಎಂಬುವುದು ಮನುಷ್ಯನ ದೈನಂದಿನ ಜೀವನಕ್ಕೆ ಅತ್ಯವಶ್ಯಕವಾದದ್ದು, ಹಾಗಾಗಿ ಆರ್ಥಿಕತೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅನಿವಾರ್ಯ ಎಂದು ಹೊಳೆನರಸೀಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಕೆ.ಎಸ್ ಚಂದ್ರಕಲಾ ಹೇಳಿದರು.
    ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅರ್ಥಶಾಸ್ತ್ರದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದ ಪಾತ್ರ ಎಂಬ ವಿಷಯದ ಕುರಿತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರ್ಥಶಾಸ್ತ್ರ ಎಂಬುದು ದೈನಂದಿನ ಜೀವನದಲ್ಲಿ ಅತಿ ವ್ಯಪಕವಾಗಿ ಬಳಕೆಯಾಗುತ್ತಿದೆ ಎಂಬುವುದರಲ್ಲಿ ಸಂಶಯವೇ ಇಲ್ಲ. ಅರ್ಥಶಾಸ್ತ್ರವನ್ನ ಕ್ವೀನ್ ಆಫ್ ಸೋಶಿಯಲ್ ಸೈನ್ಸ್ ಎಂದು ಕರೆಯಲಾಗುತ್ತದೆ. ಯಾವುದೇ ವಿಷವನ್ನೂ ಸಹ ಕಠಿಣ ಎಂದು ಭಾವಿಸದೇ ಸರಳವೆಂದು ಭಾವಿಸಿದರೆ ಕ್ಲಿಷ್ಟವೂ ಸಹ ಸರಳ ಎಂದೆನಿಸುತ್ತದೆ ಎಂದರು.
    ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡ ವಿಧ್ಯಾರ್ಥಿಗಳು ಸಾಮಾನ್ಯವಾಗಿ ಗಣಿತದ ವಿಷವನ್ನು ಅಭ್ಯಾಸ ಮಾಡುವುದಿಲ್ಲ. ಆದರೇ ಅರ್ಥಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡ ವಿಧ್ಯಾರ್ಥಿಗಳಿಗೆ ಮಾತ್ರ ಗಣಿತ ವಿಷಯವನ್ನೂ ಅಭ್ಯಾಸ ಮಾಡುವ ಸದಾವಕಾಶ ಸಿಗುತ್ತದೆ. ಅರ್ಥಶಾಸ್ತ್ರವನ್ನು ಸರಳವೆಂದು ಭಾವಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು, ಕಲಿಯಬೇಕು, ಪ್ರೋತ್ಸಾಹಿಸಬೇಕು. ಅರ್ಥಶಾಸ್ತ್ರ ವಿಷಯದಲ್ಲಿ ಉದ್ಯೋಗವಕಾಶಗಳು ವ್ಯಾಪಕವಾಗಿದ್ದು, ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕಾದಲ್ಲಿ, ಕಠಿಣ ಪ್ರಯತ್ನ, ವಿನಯ-ವಿನಮೃತೆ, ಶಿಸ್ತು ಎಲ್ಲವೂ ಅವಶ್ಯಕವಾಗಿರುತ್ತದೆ. ಎಲ್ಲರೂ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತೊಡಗಿಸಿಕೊಂಡು, ಕಾಲ್ಪನಿಕ ಸುಖಕ್ಕಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿಧ್ಯಾರ್ಥಿಗಳು ಅರ್ಥಶಾಸ್ತ್ರ ವಿಷಯವನ್ನು ಕ್ಲೀಷ್ಟವಾಗಿರುತ್ತದೆ ಎಂದುಕೊಂಡು ಅದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ಇಂತಹ ತಪ್ಪು ಗ್ರಹಿಕೆಗಳಿಂದ ಯುವಕರು ಹೊರಬರಬೇಕು. ಮಾನವರ ಜೀವನದಲ್ಲಿ ಅರ್ಥಶಾಸ್ತ್ರವು ಮುಖ್ಯ ಪಾತ್ರವನ್ನು ವಹಿಸಿದೆ, ಒಂದು ಉತ್ತಮ ಬದುಕು ಸಾಗಿಸಲು ಅರ್ಥಶಾಸ್ತ್ರವು ತುಂಬ ಮುಖ್ಯವಾಗಿರುತ್ತದೆ. ಅರ್ಥಶಾಸ್ತ್ರ ವಿಭಾಗದ ವಿಧ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದು ತಿಳಿಸಿದರು.
    ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ವಿ. ಹೇಮಾವತಿ, ಐ.ಕ್ಯೂ.ಎ.ಸಿ. ಸಂಚಾಲಕ ಡಿ.ಜೆ. ರಮ್ಯಾ, ಉಪನ್ಯಾಸಕ ಎ.ಕೆ. ಮಂಜುನಾಥ್ ಹಾಗೂ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts