More

    ಅರಿವಿನ ಕೊರತೆಯೇ ದೌರ್ಜನ್ಯಕ್ಕೆ ಕಾರಣ!: ಸಿವಿಲ್ ಹಿರಿಯ ನ್ಯಾಯಾಧೀಶ ಅರ್ಜುನ ಮಲ್ಲೂರ್ ಬೇಸರ

    ಬಳ್ಳಾರಿ: ವ್ಯವಸ್ಥೆ ಎಷ್ಟೆ ಬಲಿಷ್ಠವಾಗಿದ್ದರೂ ಅರಿವಿನ ಕೊರತೆಯಿಂದ ಹೆಣ್ಣು ಮಕ್ಕಳ ಮೇಲೆ ವ್ಯಾಪಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಸಿವಿಲ್ ಹಿರಿಯ ನ್ಯಾಯಾಧೀಶ ಅರ್ಜನ ಮಲ್ಲೂರ್ ಹೇಳಿದರು.

    ನಗರದ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಗಳು ದಿನದಿಂದ ಹೆಚ್ಚಾಗುತ್ತಿವೆ ವಿನಹ ಇಳಿಮುಖ ಕಾಣುತ್ತಿಲ್ಲ. ಸಮಾಜದಲ್ಲಿ ಅರಿವಿನ ಕೊರತೆ ಉಂಟಾಗುತ್ತಿರುವುದರಿಂದ
    ಮಾನಸಿಕವಾಗಿಯೂ ಶೋಷಣೆ ಮಾಡಲಾಗುತ್ತಿದೆ. ಮಗುವಿನ ಉಳಿವಿನ ಪ್ರವೃತಿ ಗುರುತಿಸುವಂತೆ ಮಾಡಬೇಕಿದೆ.ಮುಕ್ತವಾಗಿ ಮಕ್ಕಳನ್ನು ಬೆಳೆಸಬೇಕು.ಅಂದಾಗ ಶೋಷಣೆ ಪ್ರಕರಣಗಳಿಗೆ ಕಡಿವಾಣ ಬಿಳಬಹುದು ಎಂದರು.

    ವಿದ್ಯಾರ್ಥಿನಿಯರು ಅವಕಾಶಗಳನ್ನು ಬಳಸಿಕೊಳ್ಳಿ, ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಡಿ.ನಿಮ್ಮಲ್ಲಿರುವ ಶಕ್ತಿ ಅರಿತುಕೊಂಡು ಏನಾದರೂ ಸಾಧಿಸುವ ಛಲದೊಂದಿಗೆ ಜೀವನದಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ ಪ್ರಕರಣ ಗಣನೀಯವಾಗಿ ಕಡಿಮೆಯಾಗಬೇಕಿದೆ.ಇಲಾಖೆಯಿಂದ ನಾನಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗದಿರುವುದು ದುರಂತದ ಸಂಗತಿ.ಇನ್ನಾದರೂ ನಾಗರೀಕರು ಹೆಣ್ಣು ಮಗುವಿನ ಮೇಲಿರುವ ತಾತ್ಸಾರ ಮನೋಭಾವ ಹೊಗಲಾಡಿಸಿ ಗೌರವದಿಂದ ನೋಡಬೇಕು ಎಂದರು.

    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಾಂದಪಾಷಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಬಾಲ ಕಾರ್ಮಿಕ ಯೋಜನೆಯ ನಿರ್ದೇಶಕ ಮೌನೇಶ, ಬಳ್ಳಾರಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ, ಆರೋಗ್ಯ ಇಲಾಖೆಯ ವಿಜಯಲಕ್ಷ್ಮಿ,  ಪೊಲೀಸ್ ವಿಭಾಗದಿಂದ ಲಲಿತಾ ಸೇರಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

    ಬಳ್ಳಾರಿ ನಗರದ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಿವಿಲ್ ಹಿರಿಯ ನ್ಯಾಯಾಧೀಶ ಅರ್ಜುನ ಮಲ್ಲೂರ್ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಾಂದಪಾಷಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಬಾಲ ಕಾರ್ಮಿಕ ಯೋಜನೆಯ ನಿರ್ದೇಶಕ ಮೌನೇಶ, ಬಳ್ಳಾರಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts