More

    ಅರಿಕೆರೆ ಗೋಮಾಳ ಅತಿಕ್ರಮಣ ತೆರವಿಗೆ ಹಿಂದುಪರ ಸಂಘಟನೆಗಳ ಪಟ್ಟು

    ಚಿಂತಾಮಣಿ: ಚಿಕ್ಕಬಳ್ಳಾಪುರ ತಾಲೂಕಿನ ಅರಿಕೆರೆಯ ಸರ್ವೆ ನಂ.0್101 ಎಕರೆ ಗೋಮಾಳ ಅತಿಕ್ರಮಣ ತೆರವು ಮಾಡುವಂತೆ ಅಗ್ರಹಿಸಿ ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಚಿಂತಾಮಣಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಶೋಭಾ ಅವರಿಗೆ ಮನವಿ ಸಲ್ಲಿಸಿದರು.

    ಅರಿಕೆರೆಯ 131 ಎಕರೆ ಗೋಮಾಳದಲ್ಲಿ 12 ಎಕರೆಯನ್ನು ದಿನ್ನೇಹೊಸಹಳ್ಳಿ ಹಾಗೂ ಹನುಮಂತಪುರ ಗ್ರಾಮಗಳಿಗೆ ಆಶ್ರಯ ಯೋಜನೆಯಡಿ ವಸತಿಗಾಗಿ ಕಾಯ್ದಿರಿಸಿದೆ,ಉಳಿದ ಜಾಗವನ್ನು ಕ್ರೈಸ್ತ ಸಮುದಾಯ ಅತಿಕ್ರಮಣ ಮಾಡಿ ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಭಜರಂಗದಳದ ಜಿಲ್ಲಾ ಸಂಯೋಜಕ ಅರುಣ್ ಕುಮಾರ್ ಆರೋಪಿಸಿದರು.

    ಸ್ಥಳ ಪರಿಶೀಲನೆಗೆ ಹೋಗಿದ್ದ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನೂರಾರು ಮಂದಿ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ,ಜಿಲ್ಲಾಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ಗೋಮಾಳವನ್ನು ಗೋವಿನ ಪಾಲನೆಗೆ ನೀಡಬೇಕು ಹಾಗೂ ಜತೆಗೆ ಜೀವ ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಸುನಿಲ್ ಕುಮಾರ್,ವಿಶ್ವ ಹಿಂದು ಪರಿಷತ್‌ನ ಮಂಜುನಾಥ್,ಜಿ.ಬಾಲಾಜಿ,ಸಿ.ಕೃಷ್ಣ ಯಾದವ್,ಕಾರ್ತಿಕ್,ದಿನೇಶ್,ಎಸ್. ವೆಂಕಟೇಶ್,ಚಂದ್ರಶೇಖರ್,ಮಂಜುನಾಥ್,ಎನ್.್ಕೃಷ್ಣಮುರ್ತಿ,ಜಿ.ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts