More

    ಅರಸು ಸಮಾಜ ಅಭಿವೃದ್ಧಿಗೆ ಸಹಕರಿಸಿ

    ಚಿಕ್ಕಮಗಳೂರು: ಅರಸು ಜನಾಂಗದವರು ಸಂಘಟಿತರಾಗಿ ಸಲಹೆ, ಸಹಕಾರ ನೀಡಿದಾಗ ಅಭಿವೃದ್ಧಿ ಹೊಂದಿ ಸಮಾಜ ಸೇವೆ ಮಾಡಬಹುದು ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ತಿಳಿಸಿದರು. ನಗರದ ತೇಗೂರು ರಸ್ತೆಯ ಅರಸು ಭವನದಲ್ಲಿ ಭಾನುವಾರ ಜಿಲ್ಲಾ ಅರಸು ಸಂಘದ ಸದಸ್ಯರ ಸಭೆ ಮತ್ತು ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

    ಜನಾಂಗದ ಹಿರಿಯರ ಮಾರ್ಗದರ್ಶನದಿಂದ ಅರಸು ಸಮುದಾಯ ಭವನ ನಿರ್ವಣಗೊಂಡಿದೆ. ಪ್ರತಿ ವರ್ಷ ನಮ್ಮ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಮತ್ತಷ್ಟು ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ಜನಾಂಗದ ಅಭಿವೃದ್ಧಿಗೂ ಸಹಕಾರ ನೀಡಬೇಕೆಂದು ತಿಳಿಸಿದರು.

    ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಅರಸು ಸಮುದಾಯ ಭವನ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಯೋಜನೆ ಹಾಕಿಕೊಳ್ಳಲಾಯಿತು. ಸಮುದಾಯ ಭವನ ನಿರ್ಮಾಣ ಮಾಡಲು ಜನಾಂಗದ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನಾಂಗದ ಅಭಿವೃದ್ಧಿಗಾಗಿ ಸಹಕಾರ ಸಂಘ, ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ನಿಲಯಗಳನ್ನು ಪ್ರಾರಂಭಿಸಲು ರ್ಚಚಿಸಲಾಗಿದೆ. ಇದಕ್ಕೂ ಹೆಚ್ಚಿನ ಸಹಕಾರ ನೀಡಿ ರಾಜ್ಯದಲ್ಲಿಯೇ ಜಿಲ್ಲಾ ಅರಸು ಸಂಘ ಮಾದರಿಯಾಗಿಸಬೇಕು ಎಂದು ಹೇಳಿದರು.

    ಸೈನಿಕ ಯೋಗೀಶ್ ರಾಜ್ ಅರಸ್, ಅರಸು ಭವನ ನಿರ್ವಿುಸಲು ಸಹಕಾರ ನೀಡಿದ ಎಲ್ಲರನ್ನೂ ಅವರನ್ನು ಗೌರವಿಸಲಾಯಿತು. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts