More

    ಅರಸು ಭವನ ಉದ್ಘಾಟನೆ ಯಾವಾಗ?

    ಶಿರಹಟ್ಟಿ: ಸರ್ಕಾರ ಅನೇಕ ಯೋಜನೆಗಳ ಮೂಲಕ ಕೋಟ್ಯಂತರ ರೂ. ವ್ಯಯಿಸಿ ಆಯಾ ಸಮುದಾಯದ ಮಹನೀಯರ ಹೆಸರಲ್ಲಿ ಭವನಗಳ ನಿರ್ವಣಕ್ಕೆ ಮುಂದಾಗಿದೆ. ಆದರೆ, ಅಧಿಕಾರಿಗಳ ಉದಾಸೀನ ಧೋರಣೆಯಿಂದ ಅನೇಕ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಇದಕ್ಕೆ ಪಟ್ಟಣದ ಬೆಳ್ಳಟ್ಟಿ ರಸ್ತೆಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ದಿ. ಡಿ.ದೇವರಾಜ ಅರಸು ಭವನ ಸಾಕ್ಷಿಯಾಗಿದೆ.

    ಭವನ ನಿರ್ವಣಕ್ಕೆ ಮಂಜೂರಾತಿ ಹಾಗೂ ಒಂದು ಕೋಟಿ ರೂ. ಅನುದಾನ ದೊರೆತಿದ್ದರಿಂದ 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಸಾಂಕೇತಿಕ ಚಾಲನೆ ನೀಡಿದ್ದರು. ಸಭಾಭವನದ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಆಡಳಿತಕ್ಕೂ ಅನುಕೂಲವಾಗುವಂತೆ ವಿನೂತನ ಮಾದರಿಯ ಭವನ ನಿರ್ವಣಕ್ಕೆ ಅದ್ಯತೆ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯವನ್ನು ಜಿಲ್ಲಾ ನಿರ್ವಿುತಿ ಕೇಂದ್ರ ವರ್ಷದೊಳಗೆ ಪೂರ್ಣಗೊಳಿಸಿದ್ದರಿಂದ ಸುಣ್ಣ, ಬಣ್ಣದಿಂದ ಅಲಂಕೃತಗೊಂಡು ಸಕಲ ವ್ಯವಸ್ಥೆಯೊಂದಿಗೆ ಉದ್ಘಾಟನೆಗೆ ಕಾದು ನಿಂತು ಐದಾರು ತಿಂಗಳು ಕಳೆದಿದ್ದರೂ ಮುಹೂರ್ತ ಕೂಡಿ ಬಂದಿಲ್ಲ.

    ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ

    ಈ ಮೊದಲು ಹಳೆಯ ತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಕೆಲ ಕಾರಣಾಂತರದಿಂದ ಪಟ್ಟಣದ ಖಾಸಗಿ ಒಡೆತನದ ಕಟ್ಟಡದಲ್ಲಿ ಸ್ಥಳಾಂತರಗೊಂಡಿದ್ದರಿಂದ ಪ್ರತಿ ತಿಂಗಳು 12 ಸಾವಿರ ರೂ. ಬಾಡಿಗೆ ತೆತ್ತುವ ಪ್ರಸಂಗ ಎದುರಾಗಿದೆ.

    ಸುಸಜ್ಜಿತ ಕಟ್ಟಡ ನಿರ್ವಣವಾಗಿದ್ದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ ಎಂಬ ಸಬೂಬು ನೀಡುತ್ತ ಅನಗತ್ಯವಾಗಿ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಇಲಾಖೆ ಅಧಿಕಾರಿಗಳ ಉದಾಸೀನ ಧೋರಣೆ ಪಟ್ಟಣದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.

    ಸಾರ್ವಜನಿಕರು ಹಾಗೂ ಇಲಾಖೆಯ ಕಾರ್ಯ ನಿರ್ವಹಣೆಗೆ ಅನುಕೂಲವಾಗಲೆಂದು ತ್ವರಿತಗತಿಯಲ್ಲಿ ಕಟ್ಟಡ ನಿರ್ವಿುಸಿ ಸಕಲ ವ್ಯವಸ್ಥೆ ಕಲ್ಪಿಸಿ ನಮ್ಮ ಕರ್ತವ್ಯ ಮುಗಿಸಿದ್ದೇವೆ. ಆದರೆ, ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ಇಲಾಖೆ ಅಧಿಕಾರಿಗಳದ್ದು.

    ವಿಜಯಕುಮಾರ ಜೆಇ, ಜಿಲ್ಲಾ ನಿರ್ವಿುತಿ ಕೇಂದ್ರ

    ಅಧಿಕಾರ ವಹಿಸಿಕೊಂಡ ಬಳಿಕ ಭವನ ಉದ್ಘಾಟನೆ ಕುರಿತು ಶಾಸಕರೊಂದಿಗೆ ಮಾತನಾಡಿದ್ದು, ಅಧಿವೇಶನದ ಬಳಿಕ ಉದ್ಘಾಟಿಸೋಣ ಎಂದಿದ್ದಾರೆ. ಮತ್ತೊಂದೆಡೆ ನಮ್ಮ ಇಲಾಖೆಯ ಜಿಲ್ಲಾ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಬಹುದು.

    | ಎಸ್.ವಿ. ಕಲ್ಮಠ. ವಿಸ್ತರಣಾಧಿಕಾರಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts