More

    ‘ಅರಮನೆ’ ಸ್ವೀಟ್ಸ್ ಶುಭಾರಂಭ


    ಚಿತ್ರದುರ್ಗ: ಕೋಟೆ ನಗರಿ ಚಿತ್ರದುರ್ಗದಲ್ಲಿ ‘ಅರಮನೆ’ ದಿ ಪ್ಯಾಲೇಸ್ ಆಫ್ ಸ್ವೀಟ್ಸ್ ಗುರುವಾರ ಶುಭಾರಂಭ ಗೊಂಡಿದೆ.
    ನಗರದ ಅಂಬೇಡ್ಕರ್ ವೃತ್ತದ ಬಳಿ, ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಅರಮನೆ ಪ್ಯಾಲೇಸ್ ಆಫ್ ಸ್ವೀಟ್ಸ್‌ನ 2ನೇ ಮಳಿಗೆಗೆ ನಟ ಅಭಿಷೇಕ್ ಅಂಬರೀಶ್, ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜು ಅವರು ಚಾಲನೆ ನೀಡಿದರು.
    ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಬಾಲಕೃಷ್ಣ, ಮಾಲೀಕರಾದ ಲಿಖಿತಾ ಅಮೋಘ್, ಶ್ರೇಯಾ ಬಾಲಕೃಷ್ಣ ಮತ್ತಿತರರು ಇದ್ದರು. ಹಲವು ಪ್ರಮುಖರು ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.
    80ಕ್ಕೂ ಹೆಚ್ಚು ವೈವಿಧ್ಯಮಯ, ತುಪ್ಪ, ಗೋಡಂಬಿ, ಕೋವಾ ಹಾಗೂ ಬೆಂಗಾಲಿ ರುಚಿಕರ ಸಿಹಿ ತಿನಿಸುಗಳು ಆಕರ್ಷಕ ದರದಲ್ಲಿ ಲಭ್ಯವಾಗಲಿವೆ. ಮೋತಿಚೂರು ಲಡ್ಡು ಇಲ್ಲಿಯ ವಿಶೇಷ ತಿನಿಸೆಂದು ಗುರುತಿಸಿಕೊಂಡಿದ್ದು, ಗ್ರಾಹಕರನ್ನು ವಿಶೇಷವಾಗಿ ಅರಮನೆ ಆಕರ್ಷಿ ಸತೊಡಗಿದೆ.
    ಕಾರದ ತಿನಿಸು, ಕೇಕ್, ಬ್ರೆಡ್ ಮೊದಲಾದ ಬೇಕರಿ ಐಟಂಗಳು, ಬಿಸ್ಕಟ್ಸ್, ಸ್ನಾೃಕ್ಸ್, ಚಾಟ್ಸ್ ಐಟಂ, ಐಸ್‌ಕ್ರೀಂ ಇಲ್ಲಿ ಲಭ್ಯ. ಜನ್ಮ ದಿನಾಚರಣೆ ಮೊದಲಾದ ಶುಭ ಸಂದರ್ಭಗಳಿಗಾಗಿ ಸ್ಪರ್ಧಾತ್ಮಕ ದರದಲ್ಲಿ ಸಗಟಾಗಿ ಖರೀದಿಸಬಹುದಾಗಿದೆ. ದಸರಾ, ದೀಪಾವಳಿ ಮತ್ತಿತರ ಹಬ್ಬಗಳಲ್ಲಿ ಕಂಪನಿ ಹೆಸರಿನಲ್ಲೇ ಸ್ವೀಟ್‌ಪ್ಯಾಕ್‌ಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ.
    ಮೊದಲ ಮಳಿಗೆ ದಾವಣಗೆರೆಯ ರಾಮ್ ಆ್ಯಂಡ್ ಕೋ ಸರ್ಕಲ್‌ನಲ್ಲಿ ಈಚೆಗೆ ಪ್ರಾರಂಭವಾಗಿದೆ. ಹೊಸಪೇಟೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮತ್ತಿತರ ರಾಜ್ಯದ ಪ್ರಮುಖ ನಗರಗಳಲ್ಲಿ ಹಂತ, ಹಂತವಾಗಿ ಅರಮನೆ ಸ್ವೀಟ್ಸ್ ಪ್ರಾರಂಭವಾಗಲಿವೆ.

    (ಸಿಟಿಡಿ 22 ಅರಮನೆ)
    ಚಿತ್ರದುರ್ಗದಲ್ಲಿ ಗುರುವಾರ ‘ಅರಮನೆ’ದಿ ಪ್ಯಾಲೇಸ್ ಆಫ್ ಸ್ವೀಟ್ಸ್‌ಗೆ ನಟ ಅಭಿಷೇಕ್ ಅಂಬರೀಶ್,ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜು ಚಾಲನೆ ನೀಡಿದರು. ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್, ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಬಾಲಕೃಷ್ಣ, ಮಾಲೀಕರಾದ ಶ್ರೇಯಾ ಬಾಲಕೃಷ್ಣ, ಲಿಖಿತಾ ಅಮೋಘ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts