More

    ಅರಬ್ಬಿ ಸಮುದ್ರದಲ್ಲಿ ಮಾಘ ಮಜ್ಜನ

    ವಿಜಯವಾಣಿ ಸುದ್ದಿಜಾಲ ಕಾರವಾರ: ಮಾಘ ಕೃಷ್ಣ ಅಮಾವಾಸ್ಯೆಯ ಅಂಗವಾಗಿ ಅರಬ್ಬಿ ಸಮುದ್ರದಲ್ಲಿ ಭಾನುವಾರ ಸಾವಿರಾರು ಜನ ಸ್ನಾನ ಮಾಡಿ ಪುನೀತರಾದರು.

    ಮಾಘ ಅಮಾವಾಸ್ಯೆಯ ದಿನ ಸಮುದ್ರ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹಾಗಾಗಿ ಕಾರವಾರದ ಟ್ಯಾಗೋರ್ ಕಡಲ ತೀರ, ಕೋಡಿಬಾಗ, ದೇವಬಾಗ, ಮಾಜಾಳಿ ಸೇರಿ ವಿವಿಧೆಡೆ ಭಕ್ತರು ಸಮುದ್ರ ಸ್ನಾನ ಮಾಡಿ, ನಂತರ ದೀನರಿಗೆ ಅಕ್ಕಿಯ ಪಡಿ ನೀಡಿದರು.

    ಮಾಜಾಳಿಯಲ್ಲಿ ಜಾತ್ರೆ: ಮಾಜಾಳಿ ಕಡಲ ತೀರದಲ್ಲಿ ಭಾನುವಾರ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಅಲ್ಲಿನ ರಾಮನಾಥ ದೇವರು ಹಾಗೂ ಮುಡಗೇರಿ, ಹೊಸಾಳಿ, ಅಸ್ನೋಟಿ,ಅಂಗಡಿ, ಸದಾಶಿವಗಡ ಸೇರಿ ಸುತ್ತಲಿನ ಏಳು ಹಳ್ಳಿಗಳ ದೇವರನ್ನು ವಾದ್ಯ, ಛತ್ರ, ಚಾಮರಗಳೊಂದಿಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ತಂದು ಸಮುದ್ರ ಸ್ನಾನ ಮಾಡಿಸಲಾಯಿತು.

    ಕಾರವಾರ ಹಾಗೂ ಗೋವಾದ ವಿವಿಧ ಊರುಗಳಿಂದ ಆಗಮಿಸಿದ ಮಹಿಳೆಯರು, ಮಕ್ಕಳು, ವೃದ್ಧರು, ಯುವಕರು ಸಮುದ್ರ ಸ್ನಾನ ಮಾಡಿದರು. ಯುವಕರು ಮರಳಿನಲ್ಲಿ ಈಶ್ವರ ಲಿಂಗ ಮಾಡಿ ಪೂಜಿಸಿದರು. ಸಮುದ್ರದಲ್ಲಿ ಮಾನವ ಫಿರಮಿಡ್ ಮಾಡಿ ಖುಷಿಟ್ಟರು. ಪಲ್ಲಕ್ಕಿಯಲ್ಲಿ ಬಂದ ದೇವರಿಗೆ ಹಣ್ಣು ಕಾಯಿ ಒಡೆಸಿ ಪೂಜೆ ಸಲ್ಲಿಸಿದರು. ಕೆಲವರು ಪಿತೃ ಸಂತೃಪ್ತಿಗಾಗಿ ತರ್ಪಣ ಬಿಟ್ಟರು. ವಾಪಸಾಗುವಾಗ ದಾರಿಯಲ್ಲಿ ಅಕ್ಕಿ ಕಾಳು ಬೀರಿ ದೀನರಿಗೆ ಪಡಿ ಅರ್ಪಿಸಿದರು.

    ಕಾರವಾರದ ಬಾಡ ಮಹಾದೇವ ದೇವಸ್ಥಾನದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೋಡಿಬಾಗಕ್ಕೆ ಕೊಂಡೊಯ್ದು ಸಮುದ್ರ ಸ್ನಾನ ಮಾಡಿಸಲಾಯಿತು. ವಾಪಸ್ ಬರುವ ಸಂದರ್ಭದಲ್ಲಿ ಭಕ್ತರು ದಾರಿಯಲ್ಲಿ ರಂಗೋಲಿ ಹಾಕಿ ಪಲ್ಲಕ್ಕಿ ಸ್ವಾಗತಿಸಿದರು. ಕರ್ಪರದಾರತಿ ಮಾಡಿ, ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷರು, ಸದಸ್ಯರ ಜತೆ ಕಳಸ, ಚಿಪ್ಕರ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts