More

    ಅರಣ್ಯ ಸಂಪತ್ತು ರಕ್ಷಿಸುವ ಹೊಣೆ ಎಲ್ಲರದ್ದು

    ಅಂಕೋಲಾ: ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಮಾತ್ರ ಸಿಮೀತವಾಗಿರದೇ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ತೋರ್ಪಡಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಟ್ಟಣದ ಹುಲಿದೇವರವಾಡದಲ್ಲಿ ಅರಣ್ಯ ಇಲಾಖೆಯವರು 1.18 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಸಾಲು ಮರದ ತಿಮ್ಮಕ್ಕ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಸಂಪದ್ಭರಿತ ಅರಣ್ಯ ನಾನಾ ಕಾರಣಗಳಿಂದ ಕಡಿಮೆಯಾಗುತ್ತಿದೆ. ಅರಣ್ಯ ಸಂಪತ್ತು ತೆರೆದ ಖಜಾನೆಯಂತಿದ್ದು, ಇಲಾಖೆ ಮತ್ತು ಸಾರ್ವಜನಿಕರ ಕೈಯಲ್ಲಿ ಅದನ್ನು ರಕ್ಷಿಸುವ ಕೀಲಿ ಕೈ ಇದೆ ಎಂದು ಹೇಳಿದರು.

    ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಿಸಿ ಜನ-ಮನ ಸೂರೆಗೊಳ್ಳುವಂತೆ ಮಾಡಿ ಎಂದು ಸೂಚಿಸಿದರು. ಉದ್ಯಾನಕ್ಕೆ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ಹೆಸರಿಡುವಂತೆ ಕೆಲವರು ಸೂಚಿಸಿದ್ದರು. ಆದರೆ, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಇದೇ ರೀತಿ ಸಾಲು ಮರದ ತಿಮ್ಮಕ್ಕ ಉದ್ಯಾನ ಸ್ಥಾಪನೆಗೆ ಆದೇಶವಾಗಿರುವುದರಿಂದ ಸದ್ಯ ಅದು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

    ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಉಪಾಧ್ಯಕ್ಷೆ ತುಳಸಿ ಎಸ್.ಗೌಡ, ಪುರಸಭೆ ಅಧ್ಯಕ್ಷೆ ಶಾಂತಾಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ, ಸದಸ್ಯ ಜಗದೀಶ ಮಾಸ್ತರ, ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ ಉಪಸ್ಥಿತರಿದ್ದರು.

    ಡಿಎಫ್​ಒ ವಸಂತರೆಡ್ಡಿ ಸ್ವಾಗತಿಸಿದರು. ಸಿಸಿಎಫ್ ಯತೀಶಕುಮಾರ ಡಿ., ಪ್ರಾಸ್ತವಿಕವಾಗಿ ಮಾತನಾಡಿದರು. ಮಹಾದೇವಿ ಸಂಗಡಿಗರು ಪ್ರಾರ್ಥಿಸಿದರು. ವಕೀಲೆ ಸಂಪದಾ ಗುನಗಾ ನಾಡಗೀತೆ ಹಾಡಿದರು. ಸುಭಾಷ ಕಾರೇಬೈಲ್ ನಿರ್ವಹಿಸಿದರು. ಎಸಿಎಫ್ ಮಂಜುನಾಥ ನಾವಿ ವಂದಿಸಿದರು.

    ವಿವಿಧ ಕಾಮಗಾರಿಗೆ ಚಾಲನೆ:
    ಅಂದಾಜು 1ಕೋಟಿ 86 ಲಕ್ಷ ರೂ.ಗಳ ಸಾಮಾಜ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡ, 50 ಲಕ್ಷ ರೂ.ಗಳ ತೋಟಗಾರಿಕೆ ಇಲಾಖೆ ಕಟ್ಟಡ ನಿರ್ವಣಕ್ಕೆ ಸಚಿವ ಹೆಬ್ಬಾರ ಭೂಮಿ ಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts