More

    ಅರಣ್ಯ ಕೃಷಿಯತ್ತ ರೈತರು ಹರಿಸಲಿ ಚಿತ್ತ

    ಬಸವಕಲ್ಯಾಣ: ಕೃಷಿ ಬೆಳೆ ಜತೆಗೆ ಅರಣ್ಯ ಕೃಷಿಗೆ ರೈತರು ಆಸಕ್ತಿ ವಹಿಸಬೇಕು. ಒಂದು ಎಕರೆಯಲ್ಲಿ ಕನಿಷ್ಠ 25 ಗಿಡ ಬೆಳೆಸಿದರೆ ರೈತರಿಗೆ ಬಡತನವೇ ಬರುವುದಿಲ್ಲ ಎಂದು ಬೀದರ್ನ ಬಸವಕಲ್ಯಾಣ ಪ್ರಾದೇಶಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್ ಹೇಳಿದರು.
    ಗೋಕುಳ ಗ್ರಾಮದ ಪ್ರಗತಿಪರ ರೈತ ದಿಲೀಪಗೀರ ಗೋಸಾವಿ ಅವರ ಶ್ರೀಗಂಧದ ಪ್ಲಾಂಟೇಷನ್ಗೆ ಭೇಟಿ ನೀಡಿ ಶ್ರೀಗಂಧದ ಜತೆಗೆ ಅರಣ್ಯ ಮತ್ತು ತೋಟಗಾರಿಗೆ ಬೆಳೆ ಬೆಳೆಯುತ್ತಿರುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರು ತಮ್ಮ ಜಮೀನಿನಲ್ಲಿ ಅರಣ್ಯ ಕೃಷಿ ಮತ್ತು ತೋಟಗಾರಿಕೆ ಕೃಷಿ ಮಾಡಿದರೆ ಆರ್ಥಿಕ ಪ್ರಗತಿ ಸಾಧ್ಯ. ಇದಕ್ಕೆ ಇಲಾಖೆಯಿಂದ ಅಗತ್ಯ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.
    ಹೊಲದಲ್ಲಿ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿಯಾದರೂ ರೈತರು ಗಿಡಗಳು ಬೆಳೆಯುವುದು ಅವಶ್ಯ. ಇದರಿಂದ ಪರಿಸರ ಸಮತೋಲನೆ ಕಾಪಾಡಲು ಸಹಕಾರಿ ಜತೆಗೆ ಲಾಭವೂ ಆಗುತ್ತದೆ. ಮಾವು, ಹುಣಸೆ ಕರಿಬೇವು ಹಾಗೂ ಇತರ ಹಣ್ಣಿನ ಐದೈದು ಗಿಡಗಳನ್ನು ಬೆಳೆಸಬೇಕು ಎಂದ ಸಲಹೆ ನೀಡಿದರು.
    ಹೊಲದಲ್ಲಿ ಗಿಡಗಳಿದ್ದರೆ ಮಂಗಗಳಿಂದ ಸ್ವಲ್ವ ಪ್ರಮಾಣದ ಹಾನಿಯಾಗಬಹುದು, ಆದರೆ ಗಿಡಗಳಿಂದ ಸಾಕಷ್ಟು ರೀತಿಯಲ್ಲಿ ಲಾಭವಿದೆ. ಗಿಡಕ್ಕೆ ಬೆಳೆಯುವವರೆಗೆ ಮೂರ್ನಾಲ್ಕು ವರ್ಷ ನೋಡಿದರೆ ಸಾಕು. ಅದು ನೂರು ವರ್ಷ ಲಾಭ ಕೊಡುತ್ತದೆ ಎಂದರು.
    ರೈತ ದಿಲೀಪಗೀರ ಗೋಸಾವಿ ತಾವು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀಗಂಧದ ಮೂಲಕ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ. ಆದ್ದರಿಂದ ಈ ಬೆಳೆಯ ಬಗ್ಗೆ ರೈತರಿಗೆ ಮಾಹಿತಿ ನೀಡುವ ಜತೆಗೆ ಪ್ರೋತ್ಸಾಹಿಸುವ ಕೆಲಸ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ನಡೆಯಬೇಕು ಎಂದು ಮನವಿ ಮಾಡಿದರು. ಉಪ ವಲಯ ಅರಣ್ಯಾಧಿಕಾರಿ ನಿಸಾರ ಮನಿಯಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts