More

    ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ

    ಶಿರಸಿ: ಜೆಡಿಎಸ್ ಪಕ್ಷದ ಯಲ್ಲಾಪುರ ತಾಲೂಕು ಘಟಕದ ಅಧ್ಯಕ್ಷ ರವಿಚಂದ್ರ ನಾಯ್ಕ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳದ ಇಲಾಖೆ ನಡೆ ವಿರೋಧಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಸಿಸಿಎಫ್ ಕಚೇರಿ ಎದುರು ಧರಣಿ ನಡೆಸಲಾಯಿತು.

    ಮನೆಯಲ್ಲಿದ್ದ ವ್ಯಕ್ತಿಗೆ ಮನಬಂದಂತೆ ಥಳಿಸಿ ಬುಜ, ಕುತ್ತಿಗೆ ಮಧ್ಯದ ಎಲುಬನ್ನು ಮುರಿದ ಅರಣ್ಯ ಸಿಬ್ಬಂದಿ, ಆತನ ಮೇಲೆ ಕಟ್ಟಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರ ಸತ್ಯಾಸತ್ಯತೆ ಅರಿಯಲು ರವಿಚಂದ್ರ ಅವರ ಪೋನಿಗೆ ಬಂದ ಕರೆಯ ಮಾಹಿತಿ, ಸ್ಥಳ ಹಾಗೂ ಮನೆ ಎದುರಿನ ಹಿಂದುಳಿದ ವರ್ಗದ ವಸತಿ ನಿಲಯದ ಸಿಸಿಟಿವಿ ದಾಖಲೆ ಪರಿಶೀಲಿಸಬೇಕು. ಜತೆ ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತ್ತಿನಲ್ಲಿರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

    ಮುಖಂಡ ಶಶಿಭೂಷಣ ಹೆಗಡೆ ಮಾತನಾಡಿ, ಹಲ್ಲೆ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ರಾಜಕೀಯ ತಾರತಮ್ಯ ಮಾಡದೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

    ಸೂರಜ ನಾಯ್ಕ ಸೋನಿ ಮಾತನಾಡಿ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೂ ಇಲಾಖೆ ಸ್ಪಂದಿಸಿಲ್ಲ. ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಪ್ರಕರಣ ಇದಾಗಿದೆ ಎಂದು ಆರೋಪಿಸಿದರು.

    ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಮುಖಂಡರಾದ ಆರ್.ಜಿ.ನಾಯ್ಕ, ಎಸ್.ಕೆ.ನಾಯ್ಕ, ಶೇಖರ ಪೂಜಾರಿ, ಇಲಿಯಾಸ್ ಶೇಖ್, ಗಜು ನಾಯ್ಕ ಕುಮಟಾ, ಭಾಸ್ಕರ ಪಟಗಾರ, ಅರುಣ ಗೌಡ, ಜುಬೇರ ಜುಕಾಕೋ, ವಿಶ್ವನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ, ಅಬ್ದುಲ್ ಶುಕೂರ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts