More

    ಅರಣ್ಯೀಕರಣಕ್ಕೆ ಒತ್ತು ನೀಡಿ

    ಹುಕ್ಕೇರಿ: ಮನೆಗೊಂದು ಮರ, ಊರಿಗೊಂದು ವನ ನಿರ್ಮಾಣದ ಅಗತ್ಯವಿದೆ. ನಗರೀಕರಣದ ಬದಲಾಗಿ ಇಂದು ನಾವು ಅರಣ್ಯೀಕರಣದತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

    ಅರಣ್ಯ ಇಲಾಖೆ, ತಾಲೂಕಾಡಳಿತ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬೆಳವಿ ಗ್ರಾಮದ ಕೆರೆ ದಂಡೆ ಮೇಲೆ ಭಾನುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಾಯು ಮಾಲಿನ್ಯದಿಂದ ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಇದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ನಮ್ಮ ಹಿರಿಯರ ದೀರ್ಘಾಯುಷ್ಯಕ್ಕೆ ಆಗಿನ ಪರಿಶುದ್ಧ ವಾತಾವರಣ ಕಾರಣವಾಗಿತ್ತು. ಹೀಗಾಗಿ ವೃಕ್ಷ ಸಂಪತ್ತು ಹೆಚ್ಚಿಸಿ ಪರಿಸರ ಉಳಿಸಬೇಕಾಗಿದೆ. ಪ್ರತಿವರ್ಷ ವನಮಹೋತ್ಸವ ಆಚರಿಸಲಾಗುತ್ತದೆ. ಇದು ಕಾಟಾಚಾರಕ್ಕೆ ಆಚರಣೆ ಆಗಬಾರದು ಎಂದರು.

    ಮತಕ್ಷೇತ್ರದ ವ್ಯಾಪ್ತಿಯ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಮತ್ತು ರಸ್ತೆ ಬದಿ ಸಸಿ ಬೆಳೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಜನರು ಸಸಿಗಳ ಪೋಷಣೆಗೆ ಸಹಕಾರ ನೀಡಬೇಕು ಎಂದರು. ಬಳಿಕ ಶಿರಹಟ್ಟಿ, ಸಾರಾಪುರ, ಬೆಳವಿ, ಶೇಲಾಪುರ, ಯಾದಗೂಡ, ಹಣಜ್ಯಾನಟ್ಟಿ, ಎಲಿಮುನ್ನೋಳಿ, ನೇರಲಿ, ಅಮ್ಮಣಗಿ, ಹಂದಿಗೂಡ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ವೀಕ್ಷಿಸಿದರು.

    ದಿಲೀಪ ವಾಳಿಖಿಂಡಿ, ಬಾಳಾಸಾಹೇಬ ನಾಯಿಕ, ಸತ್ತೆಪ್ಪ ನಾಯಿಕ, ರಮೇಶ ಕುಲಕರ್ಣಿ, ಪ್ರಶಾಂತ ಪಾಟೀಲ, ಶಿವಗೌಡ ಪಾಟೀಲ, ಬಸಗೌಡ ಮಗೆಣ್ಣವರ, ಯಲ್ಲಪ್ಪ ಢಪರಿ, ಬಲರಾಮ ಬೋನಿ, ಬಸಗೌಡ ಪಾಟೀಲ, ರಾಮಣ್ಣ ಗೋಟೂರಿ, ಸತ್ತೆಪ್ಪ ಹಾಲಟ್ಟಿ, ಮಲಗೌಡ ಪಾಟೀಲ, ನ್ಯಾಯವಾದಿ ಡಿ.ಕೆ. ಅವರಗೋಳ, ಗ್ರಾಪಂ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಉಮೇಶ ಸಿದ್ನಾಳ, ರಾಜಶೇಖರ ಪಾಟೀಲ, ಮಹಾಂತೇಶ ಸಜ್ಜನ ಇತರರಿದ್ದರು.

    ಕರೊನಾದಿಂದ ಸಂಕಷ್ಟದಲ್ಲಿರುವ ಬಡವರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ನೀಡುವಂತೆ ತಾಲೂಕಾಡಳಿತಕ್ಕೆ ನಿರ್ದೇಶನ ನೀಡಿದ್ದೇನೆ. ಯೋಜನೆ ಯಡಿ ಜಲಮೂಲಗಳ ಸ್ವಚ್ಛತೆ, ಗುಂಡಿ ತೋಡುವ ಕಾಮಗಾರಿಗಳನ್ನು ಆರಂಭಿಸಲಾಗುವುದು.
    | ಉಮೇಶ ಕತ್ತಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts