More

    ಅಯ್ಯನಕೆರೆ ಅಭಿವೃದ್ಧಿಗೆ ಯೋಜನೆ

    ಚಿಕ್ಕಮಗಳೂರು: ಅಯ್ಯನಕೆರೆಯನ್ನು ಪ್ರವಾಸೋದ್ಯಮ ಮತ್ತು ಜಲ ಸಾಹಸ ಕ್ರೀಡಾ ತರಬೇತಿ ಕೇಂದ್ರವಾಗಿಸಲು ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

    ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಯಲ್ಲಿ ಪ್ರವಾಸೋದ್ಯಮ, ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸುವ ಕುರಿತು ಪೂರ್ವ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.

    ಅಯ್ಯನಕೆರೆಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳದೆ ನಿಸರ್ಗದ ಸೌಂದರ್ಯ ಬಳಸಿ ಕೊಳ್ಳಲಾಗುವುದು. ಈ ಕುರಿತು ರ್ಚಚಿಸಿ ಸಮಗ್ರ ಯೋಜನೆ ರೂಪಿಸಲಾಗುವುದು. ಚಿಕ್ಕಮಗಳೂರೇ ಒಂದು ಸುಂದರ ಪ್ರದೇಶ. ಅದರಲ್ಲಿ ಅಯ್ಯನಕೆರೆ ಇನ್ನಷ್ಟು ಗಮನ ಸೆಳೆಯುತ್ತದೆ ಎಂದರು.

    ಇಲ್ಲಿ ವರ್ಷಪೂರ್ತಿ ನೀರು ಇರುವುದರಿಂದ ಜಲಸಾಹಸ ಕ್ರೀಡಾ ತರಬೇತಿ, ಆಸಕ್ತ ಸಾಹಸಿಗಳಿಗೆ ತರಬೇತಿ, ವಿವಿಧ ರೀತಿಯ ಕ್ರೀಡಾ ಚಟುವಟಿಕೆ, ಸೈಕ್ಲಿಂಗ್, ಟ್ರೆಕ್ಕಿಂಗ್, ಶಕುನಗಿರಿಗೆ ಟ್ರೆಕ್ಕಿಂಗ್ ಮಾಡಬಹುದು. ಐಲ್ಯಾಂಡ್ ಮತ್ತು ಕೆರೆ ಏರಿಗೆ ಜಿಪ್​ಲೈನ್ ಮಾಡುವುದು, ವಾಟರ್ ಕಯಾಕಿಂಗ್, ಬೋಟಿಂಗ್ ಎಲ್ಲದ್ದಕ್ಕೂ ಅವಕಾಶ ಕಲ್ಪಿಸಬಹುದು ಎನ್ನುವ ಸಲಹೆಗಳು ಕೇಳಿ ಬಂದಿದೆ. ಶೀಘ್ರದಲ್ಲಿ ಈ ಕುರಿತು ಯೋಜನೆ ತಯಾರಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts