More

    ಅಮೂಲ್ಯ ವಿರುದ್ಧ ಜಿಲ್ಲಾದ್ಯಂತ ಆಕ್ರೋಶ

    ಯಾದಗಿರಿ: ಕೇಂದ್ರ ಸರ್ಕಾರ, ಜಾರಿಗೆ ತಂದ ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಳ ವಿರುದ್ಧ ಜಿಲ್ಲಾಧ್ಯಂತ ಆಕ್ರೋಶ ವ್ಯಕ್ತವಾಗಿದೆ.

    ಅಮೂಲ್ಯ ವಿರುದ್ಧ ಶಹಾಪುರದಲ್ಲಿ ಶುಕ್ರವಾರ ಶಹಾಪುರ ನಾಗರಿಕರ ವೇದಿಕೆಯಿಂದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸಕರ್ಾರ ಜಾರಿಗೆ ತಂದ ಕಾಯ್ದೆಯನ್ನು ವಿರೋಧಿಸುವ ನೆಪದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗದ ದೇಶದ್ರೋಗಿ ಅಮೂಲ್ಯಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ತಿನ್ನುವುದು ಭಾರತದ ಅನ್ನ ಆದರೆ ಶತ್ರು ರಾಷ್ಟ್ರದ ಪರ ಘೋಷಣೆ ಕೂಗಿದ ಇಂಥ ದೇಶದ್ರೋಹಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದರು.

    ಡಾ.ಚಂದ್ರಶೇಖರ ಸುಬೇದಾರ. ಚಂದ್ರಶೇಖರಗೌಡ ಮಾಗನೂರ, ಸುಧೀರ ಚಿಂಚೋಳಿ, ಅಡಿವೆಪ್ಪ ಜಾಕಾ, ದೇವಿಂದ್ರಪ್ಪ ಕೊನೆರ್, ರಾಜುಗೌಡ ಉಕ್ಕಿನಾಳ, ಗುರು ಕಾಮಾ, ಚಂದ್ರು ಕುಂಬಾರ,ಮಲ್ಲಿಕಾರ್ಜುನ ಚಿಲ್ಲಾಳ, ಅರವಿಂದ ಉಪ್ಪಿನ, ದೇವು ಬೀ.ಗುಡಿ, ಮೌನೇಶ ಹಳಿಸಗರ, ವೆಂಕಟೇಕ ಬೋನೆರ್, ಮಲ್ಲಯ್ಯಸ್ವಾಮಿ ಇಟಗಿ, ರಾಜು ಬಾಣತಿಹಾಳ, ಆರಸು ದೋರನಹಳ್ಳಿ, ಮಲ್ಲು ದೊರಿ, ಮಲ್ಲಿಕಾರ್ಜುನ, ಜಾಕಾ, ಸಿದ್ದು ಆನೆಗುಂದಿ, ಬಸ್ಸು ಯಶ್, ವಂಕಟೇಶ ಕುಲಕರ್ಣಿ, ಅಂಬರೀಶ ಸಗರ ಇದ್ದರು.

    ಜಯ ಕರ್ನಾಟಕ ಸಂಘಟನೆ: ಪಾಕಿಸ್ತಾನ ಜಿಂದಾಬಾದ ಎಂದು ಹೇಳಿ ದೇಶದ್ರೋಹ ಎಸಗಿದ ಅಮೂಲ್ಯ ಲಿಯೋನಿಯನ್ನು ಗಲ್ಲಿಗೇರಿಸಬೇಕು ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

    ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಸಿಎಎ, ಎನ್.ಆರ್.ಸಿ. ವಿರೋಧಿಸುವ ಕಾರ್ಯಕ್ರಮದಲ್ಲಿ ಇಂತಹುದ್ದೊಂದು ಆತಂಕಕಾರಿ ಬೆಳವಣಿಗೆ ನಡೆಯುತ್ತಿದ್ದರೂ ಸರ್ಕಾರಗಳು ಸುಮ್ಮನೇ ಕೂರುವುದು ಸರಿಯಲ್ಲ. ತಕ್ಷಣ ದೇಶದ್ರೋಹಿಗಳಿಗೆ ಸರಿಯಾದ ಪಾಠ ಕಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾದ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts