More

    ಅಮೂಲ್ಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ

    ಸಾಗರ: ಬೆಂಗಳೂರಿನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೊಷಣೆ ಕೂಗಿದ ಅಮೂಲ್ಯಾ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ವಿಎಚ್​ಪಿ, ಬಜರಂಗದಳ ಕಾರ್ಯಕರ್ತರು ಸಾಗರ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಮೂಲ್ಯ ಮತ್ತು ಅಸಾದುದ್ದೀನ್ ಓವೈಸಿ ಭಾವಚಿತ್ರವನ್ನು ದಹಿಸಿದರು.

    ಸಂಘ ಪರಿವಾರದ ಹಿರಿಯ ಅ.ಪು.ನಾರಾಯಣಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿದ್ದುಕೊಂಡು ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಕೆಲವರಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿರುವುದು ಅರಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಪದೇಪದೆ ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ದೇಶದ್ರೋಹ ಕೃತ್ಯ ಎಸಗುತ್ತಿದ್ದಾರೆ ಎಂದು ದೂರಿದರು.

    ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ನ್ಯಾಯಾಲಯ ಹಸಿರು ನಿಶಾನೆ ತೋರಿದ್ದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗ ಸಿಎಎ ಮುಂದಿಟ್ಟುಕೊಂಡು ಭಾರತಕ್ಕೆ ದ್ರೋಹ ಬಗೆಯುವ ತಮ್ಮ ರೂಪವನ್ನು ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಲ್ಲಿನ ಆಹಾರ, ಗಾಳಿ, ನೀರು, ಶಿಕ್ಷಣ ಪಡೆದ ಪದವಿ ವಿದ್ಯಾರ್ಥಿನಿ ಅಮೂಲ್ಯಾ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೊಷಣೆ ಕೂಗುವ ಮೂಲಕ ಭಾರತಕ್ಕೆ ದ್ರೋಹ ಬಗೆದಿದ್ದಾರೆ. ಇಂಥವರಿಗೆ ಕ್ಷಮೆ ಕೊಡಬಾರದು. ಭಾರತದಲ್ಲಿದ್ದುಕೊಂಡು ದೇಶದ್ರೋಹದ ಹೇಳಿಕೆ ನೀಡುತ್ತಿರುವ ಅಸಾದುದ್ದೀನ್ ಓವೈಸಿ ಸಹ ಈ ಸಭೆಯಲ್ಲಿದ್ದು ಪರೋಕ್ಷ ಪ್ರಚೋದನೆ ನೀಡಿದ್ದಾರೆನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

    ವಿಎಚ್​ಪಿ ಅಧ್ಯಕ್ಷ ಐ.ವಿ.ಹೆಗಡೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ಬಜರಂಗದಳ ಸಂಚಾಲಕ ಸಂತೋಷ್ ಶಿವಾಜಿ, ಪ್ರಮುಖರಾದ ಕೆ.ಎಚ್.ಸುದರ್ಶನ್, ನಾರಾಯಣಮೂರ್ತಿ ಕಾನುಗೋಡು, ಕೆ.ಜಿ.ಸಂತೋಷ್, ಮಾಪು ಇಕ್ಕೇರಿ, ಕುಮಾರ್ ಉದಯ, ಕಿರಣ್, ಆಟೋ ಗಣೇಶ್ ಇದ್ದರು.

    ಮಧುಗಿರಿ ಮೋದಿ ಕೂಡಲೆ ಬಂಧಿಸಿ: ದೇಶ ವಿರೋಧಿ ಘೊಷಣೆ ಕೂಗಿರುವ ಅಮೂಲ್ಯಾ ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವ ಮಧುಗಿರಿ ಮೋದಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ಅಂಜುಮನ್ ತಂಜೀಮ್ ಸೋಶಿಯಲ್ ಮೂವ್​ವೆುಂಟ್ ಕಾರ್ಯಕರ್ತರು ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದರು.

    ಫೆ.20ರಂದು ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ನಡೆದ ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ವಿರೋಧಿ ಸಮಾವೇಶದಲ್ಲಿ ಅಮೂಲ್ಯಾ ಪಾಕಿಸ್ತಾನ್ ಜಿಂದಾಬಾದ್ ಘೊಷಣೆ ಕೂಗುವ ಮೂಲಕ ದೇಶದ್ರೋಹ ಕೃತ್ಯ ಎಸಗಿದ್ದಾರೆ. ಇದನ್ನು ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಎಲ್ಲ ಸಂಘಟನೆಗಳೂ ಖಂಡಿಸುತ್ತವೆ ಎಂದರು.

    ಅದೇ ರೀತಿ ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಧುಗಿರಿ ಮೋದಿಯನ್ನು ಕೂಡಲೆ ಬಂಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರಮುಖರಾದ ಸೈಯ್ಯದ್ ತಾಹೀರ್, ಮಹಮ್ಮದ್ ಆರೀಫ್, ಅಬ್ದುಲ್ ತನ್ವೀರ್, ಫಯಾಜ್, ಶಿವಾನಂದ ಕುಗ್ವೆ, ಭಾಷಾ, ಸಾದಿಕ್, ಸುಹೇಬ್, ಸದ್ದಾಂ, ಫೈರೋಜ್ ಚಿಪ್ಳಿ, ಮೋಹನ್ ಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts