More

    ಹಿಂದುಗಳ ಮೇಲಿನ ದೌರ್ಜನ್ಯ ತಡೆಗಟ್ಟಿ

    ಕಳಸ: ಹಿಂದು ಸಮಾಜದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವವರನ್ನು ಶಿಕ್ಷಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಶನಿವಾರ ತಾಲೂಕು ಕಚೇರಿಯಲ್ಲಿ ಶಿರೆಸ್ತೇದಾರ್ ಸುಧಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

    ಸಂವಿಧಾನ ಎಲ್ಲರಿಗೂ ಸಮಾನವಾಗಿ ಬದುಕಲು ಅವಕಾಶ ನೀಡಿರುವಂತೆ ಎಲ್ಲರಿಗೂ ಸುರಕ್ಷತೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷವೆಂಬಂತೆ ವರ್ತಿಸುತ್ತಿದೆ. ಬಹುಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸುಮ್ಮನಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಸಾಲದೆಂಬಂತೆ ಅಲ್ಪಸಂಖ್ಯಾತರನ್ನು ಮತ್ತಷ್ಟು ಓಲೈಸಲು ವಿಹಿಂಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ, ಬಜರಂಗದಳ ಕಾರ್ಯಕರ್ತರಾದ ಶಿವು, ಭರತ್ ಕುಮೇಲ್, ಮಂಗಳೂರಿನ ಜಯಪ್ರಕಾಶ್, ಚಿಕ್ಕಮಗಳೂರು ಜಿಲ್ಲೆಯ ಮಂಜು ತುಡುಕೂರ್ ಮುಂತಾದ ಕಾರ್ಯಕರ್ತರ ಮೇಲೆ ಮೇಲೆ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
    ಬಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕ ಅಜಿಲ್ ಕುಲಾಲ್, ಧರ್ಮಪ್ರಚಾರಕ ಪ್ರಮುಖ್ ಜಗದೀಶ್ ಭಟ್, ಬಜರಂಗದಳದ ಪ್ರಮುಖರಾದ ಸಂತೋಷ್, ಕವಿರಾಜ್, ಕಿರಣ್, ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts