More

    ಅಬ್ಬಿಕೆರೆ ಸ್ವಚ್ಛತೆಗೆ ಪೌರ ಕಾರ್ವಿುಕರ ಪರದಾಟ

    ಮುಳಗುಂದ: ಪಟ್ಟಣದ ಅಬ್ಬಿಕೆರೆ ನೀರು ದುರ್ನಾತ ಬೀರುತ್ತಿದೆ. ಅದರಲ್ಲಿನ ಪಾಚಿ ತೆಗೆಯಲು ಪಪಂ ಪೌರ ಕಾರ್ವಿುಕರು ಹರಸಾಹಸ ಪಡುತ್ತಿದ್ದಾರೆ. ಚಾಲುಕ್ಯರ ಕಾಲದಲ್ಲಿ ನಿರ್ವಣವಾದ ಅಬ್ಬಿಕೆರೆಗೆ ಸುತ್ತಮುತ್ತಲಿನ 3-4 ಕಿಮೀ ವ್ಯಾಪ್ತಿಯ ಹೊಲಗಳಿಂದ ನೀರು ಹರಿದು ಬರುತ್ತದೆ. ಆದರೆ, ಅನೇಕ ವರ್ಷಗಳಿಂದ ಹೂಳೆತ್ತದ ಕಾರಣ ನೀರು ಮಲಿನಗೊಂಡಿದ್ದು, ಪಾಚಿ ಬೆಳೆದು ಗಬ್ಬೆದ್ದು ನಾರುತ್ತಿದೆ.

    ನಾಲ್ಕಾರು ದಿನಗಳಿಂದ ಪಪಂ ಸಿಬ್ಬಂದಿ ಕೆರೆಯಲ್ಲಿನ ಹಸಿರು ಪಾಚಿ ತೆಗೆಯುತ್ತಿದ್ದರೂ ಪೂರ್ಣ ಸ್ವಚ್ಛವಾಗುತ್ತಿಲ್ಲ. ಟ್ಯಾಂಕರ್​ಗಳಲ್ಲಿ ನಿತ್ಯ ಈ ಹೊಲಸನ್ನು ಘನತ್ಯಾಜ್ಯ ಘಟಕಕ್ಕೆ ಸಾಗಿಸಿದರೂ ದುರ್ನಾತ ಕಡಿಮೆಯಾಗಿಲ್ಲ. ಕೆರೆ ಮಲಿನಗೊಂಡು ಗಬ್ಬೆದ್ದು ನಾರುತ್ತಿರುವುದರಿಂದ ಸುತ್ತಮುತ್ತಲಿರುವ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಕುಳಿತು ಊಟ ಮಾಡುವುದೇ ದುಸ್ತರವಾಗಿದೆ. ಕೆರೆ ಸ್ವಚ್ಛಗೊಳಿಸಬೇಕು. ಕೆರೆಗೆ ಸುತ್ತ ಮುತ್ತಲಿನ ಮನೆಗಳ ಶೌಚಗೃಹಗಳ ನೀರು ಸೇರುತ್ತಿದ್ದು, ಇದನ್ನು ತಡೆ ಯಬೇಕು ಎಂದು ಗ್ರಾಮಸ್ಥರು ಪಪಂ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಾರೆ.

    ಕೆರೆ ಸ್ವಚ್ಛತೆ ಕುರಿತು ಸಂಬಂಧಪಟ್ಟ ವೈದ್ಯರೊಂದಿಗೆ ರ್ಚಚಿಸಿ ಟಿಸಿಎಲ್ ಪುಡಿಯನ್ನು ಗಂಟು ಕಟ್ಟಿ ಅಲ್ಲಲ್ಲಿ ಇಡಲಾಗಿದೆ. ಸಕ್ಕಿಂಗ್ ಯಂತ್ರದ ಮೂಲಕ ಕೆರೆಯಲ್ಲಿನ ಪಾಚಿಯನ್ನು ತೆಗೆಸಲಾಗಿದೆ. ಕೆರೆಯನ್ನು ಜನರೇ ರಕ್ಷಣೆ ಮಾಡಿಕೊಳ್ಳಬೇಕು. ಸ್ವಚ್ಛತೆ ಬಗ್ಗೆ ಜನರಿಗೆ ತಿಳಿವಳಿಕೆ ಬರಬೇಕು.

    | ಎಂ.ಎಸ್. ಬೆಂತೂರ ಮುಳಗುಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts