More

    ಅಬ್ದುಲ್ ಸುಭಾನ್​ಗೆ ವರ್ಷದ ವ್ಯಕ್ತಿತ್ವ ಪ್ರಶಸ್ತಿ

    ಬೀದರ್: ಜಿಲ್ಲೆಯ ಅಬ್ದುಲ್ ಸುಭಾನ್ ಸೇಠ್ ಅವರಿಗೆ ದೇಶದ ಮುಂಚೂಣಿ 100 ಪ್ರಭಾವಶಾಲಿ ಬ್ರ್ಯಾಂಡ್ ಕೌನ್ಸಿಲ್ ರೇಟಿಂಗ್​ಗಳ ವರ್ಷದ ವ್ಯಕ್ತಿತ್ವ ಪ್ರಶಸ್ತಿ ದೊರೆತಿದೆ. ಅಂತಾರಾಷ್ಟ್ರೀಯ ರೇಟಿಂಗ್, ಶ್ರೇಯಾಂಕ ಹಾಗೂ ಸಂಶೋಧನೆ ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಂಬೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್​ಸಿಂಗ್ ಕೋಶ್ಯಾರಿ ಹಾಗೂ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪ್ರಶಸ್ತಿ ಪ್ರದಾನ ಮಾಡಿದರು. ಸುಭಾನ್ ಸೇಠ್ ಬೀದರ್ ಕಾಂಗ್ರೆಸ್​ನ ಹಿರಿಯ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಪುತ್ರ. ಫಾಲ್ಕೊನ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾಗಿರುವ ಅವರು, ಬೆಂಗಳೂರಿನಲ್ಲಿ ಅನೇಕ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್​ಗಳ ಕನಸು ನನಸಾಗಿಸಲು ನೆರವಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts