More

    ಅಪಾರ್ಟ್​ವೆುಂಟ್​ನಿಂದ ರಸ್ತೆ ಅತಿಕ್ರಮಣ

    ಧಾರವಾಡ: ನಗರದ ಸಪ್ತಾಪುರ 2ನೇ ಕ್ರಾಸ್​ನಲ್ಲಿರುವ ಅರಿಹಂತ ಏಟ್ರಿಯಾ ಇನ್​ಫ್ರಾ ರಿಯಲ್ಟಿ ಅಪಾರ್ಟ್​ವೆುಂಟ್​ನಿಂದ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾರ್ವಜನಿಕರು ಪಾಲಿಕೆಗೆ ಸಲ್ಲಿಸಿದ ದೂರಿನ ಅನ್ವಯ ಪಾಲಿಕೆ ಹಾಗೂ ನಗರ ಭೂಮಾಪನ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಿ ಅತಿಕ್ರಮಿತ ಪ್ರದೇಶವನ್ನು ಗುರುತಿಸಲಾಯಿತು.

    ಅರಿಹಂತ ಕಂಪನಿಯು ಸಪ್ತಾಪುರ 2ನೇ ಕ್ರಾಸ್​ನಲ್ಲಿ ಬಹುಮಹಡಿ ಅಪಾರ್ಟ್​ವೆುಂಟ್ ನಿರ್ವಿುಸಿದೆ. 2ನೇ ಕ್ರಾಸ್​ಗೆ ಹೊಂದಿಕೊಂಡಿರುವ ರಸ್ತೆಯ ಉದ್ದಕ್ಕೆ ಒಂದೆಡೆ 1 ಅಡಿ 11 ಇಂಚು, ಮತ್ತೊಂದೆಡೆ 5 ಅಡಿ ಸೇರಿ 510 ಚದರ ಅಡಿ ಜಾಗ ಅತಿಕ್ರಮಣ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ಎಚ್.ವಿ. ಪಾಟೀಲ ಎಂಬುವರು ಪಾಲಿಕೆಗೆ ದೂರು ನೀಡಿದ್ದರು. ಅಲ್ಲದೆ, ಅವರು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರ ಮೊರೆ ಹೋಗಿದ್ದರು. ಈ ಕುರಿತು ದಾಖಲೆಗಳನ್ನು ನೀಡಿ ಸಹಾಯ ಕೋರಿದ್ದರು.

    ಎಸ್.ಆರ್. ಹಿರೇಮಠ ಕೋರಿಕೆಯಂತೆ ಗುರುವಾರ ಭೂದಾಖಲೆಗಳ ಸಹಾಯಕ ನಿರ್ದೇಶಕ ಎಂ.ಜಿ. ಖಂಡಾಟೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅತಿಕ್ರಮಣವಾಗಿರುವ ಸ್ಥಳವನ್ನು ಬಿಳಿ ಬಣ್ಣದಿಂದ ಗುರುತು ಮಾಡಿದರು. ಪಾಲಿಕೆ ಇಂಜಿನಿಯರ್ ಸವಿತಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ವರ್ಷದ ಹಿಂದೆಯೇ ಅರಿಹಂತ ಕಂಪನಿಯವರು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ವಣಕ್ಕೆ ಅಡಿಪಾಯ ತೋಡಿದಾಗಲೇ ಪಾಲಿಕೆಗೆ ದೂರು ನೀಡಲಾಗಿತ್ತು. ನೋಟಿಸ್ ನೀಡಿದರೂ ಕಂಪನಿಯವರು ಕಾಂಪೌಂಡ್ ನಿರ್ವಿುಸಿಕೊಂಡರು. ಗುರುವಾರ ಎರಡೂ ಇಲಾಖೆಗಳಿಂದ ಅತಿಕ್ರಮಣ ಗುರುತು ಮಾಡಿದ್ದಾರೆ. ತೆರವು ಕಾರ್ಯಾಚರಣೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ.
    ಎಸ್.ವಿ. ಪಾಟೀಲ, ದೂರುದಾರ

    ದಾಖಲೆಗಳ ಪ್ರಕಾರ ಅರಿಹಂತ ಕಂಪನಿಯಿಂದ ಸುಮಾರು 510 ಚದರ ಅಡಿ ಜಾಗ ಅತಿಕ್ರಮಣವಾಗಿದೆ. ಪಾಲಿಕೆ ಹಾಗೂ ನಗರ ಮಾಪನ ಇಲಾಖೆಯವರು ಮೋಜಣಿ ಮಾಡಿದ್ದು, ಅತಿಕ್ರಮಣ ಪತ್ತೆಯಾಗಿದೆ.
    ಎಸ್.ಆರ್. ಹಿರೇಮಠ, ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ

    ಅರಿಹಂತ ಕಂಪನಿಯಿಂದ ರಸ್ತೆ ಅತಿಕ್ರಮಣ ಮಾಡಿರುವ ಬಗ್ಗೆ ದೂರು ಬಂದಿತ್ತು. ಇಲಾಖೆಯ ಸರ್ವೆ ಕಾರ್ಯ ಸಮಾಧಾನ ತಂದಿಲ್ಲ ಎಂದು ಕಂಪನಿಯವರು ಮೇಲ್ಮನವಿ ಸಲ್ಲಿಸಿದ್ದರು. ಯಾವುದೇ ಕಟ್ಟಡ ನಿರ್ವಿುಸುವ ಮೊದಲು ಪಾಲಿಕೆಯವರು ಸರ್ವೆ ಇಲಾಖೆಯಿಂದ ಗಡಿ ಗುರುತು ಮಾಡಿಸಿ ಅನುಮತಿ ನೀಡಿದರೆ ಇಂಥ ಸಮಸ್ಯೆಗಳು ಎದುರಾಗುವುದಿಲ್ಲ.
    ಎಂ.ಜಿ. ಖಂಡಾಟೆ, ಭೂದಾಖಲೆಗಳ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts