More

    ಅಪಾಯ ಆಹ್ವಾನಿಸುವ ಟಿಸಿ

    ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿ ವಿದ್ಯುತ್ ಪರಿರ್ವತಕ (ಟಿಸಿ) ಹೊತ್ತು ನಿಂತ ಕಂಬಗಳು ಬಾಗಿಕೊಂಡಿದ್ದು, ಅಪಾಯ ಆಹ್ವಾನಿಸುತ್ತಿವೆ.

    ಸತತ ಮಳೆ, ಗಾಳಿಗೆ ಈ ಕಂಬಗಳು ಮತ್ತಷ್ಟು ಬಾಗಿವೆ. ಅಲ್ಲದೆ, ಟಿಸಿ ಸುತ್ತಲೂ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದ್ದರಿಂದ ಜನರು ಜೀವಭಯದಲ್ಲಿಯೇ ಸಂಚರಿಸುವಂತಾಗಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಹಲವಾರು ಬಾರಿ ವಿನಂತಿಸಿದರೂ ಸ್ಪಂದಿಸುತ್ತಿಲ್ಲ. ಅವಘಡ ಸಂಭವಿಸಿದರೆ ಯಾರು ಹೊಣೆ? ಕಂಬಗಳನ್ನು ದುರಸ್ತಿಪಡಿಸಬೇಕು ಹಾಗೂ ಹಳೇ ಟಿಸಿಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ನಿವಾಸಿಗಳಾದ ಬಸವರಾಜ ಪಲ್ಲೇದ, ಯಲ್ಲಪ್ಪ ಶಿರಗುಂಪಿ, ಭೀಮಪ್ಪ ಕಂಬಳಿ, ಯಲ್ಲಪ್ಪ ಹಿರೇಮನಿ, ಶಂಭು ಅವರಡ್ಡಿ, ಸಂಗಪ್ಪ ಕುಂಬಾರ, ರವಿ ಸಿದ್ನೆಕೊಪ್ಪ, ರಾಜು ಅವರಡ್ಡಿ, ವಿಜಯಕುಮಾರ ಇಟಗಿ, ಮಂಜುನಾಥ ಗುಜಮಾಗಡಿ, ಮಂಜುನಾಥ ನಾಯ್ಕರ ಆಗ್ರಹಿಸಿದ್ದಾರೆ.

    ಅಬ್ಬಿಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿನ ಟಿಸಿ ಹೊತ್ತ ಕಂಬಗಳು ವಾಲಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಟಿಸಿ ಬೇರೆಡೆ ಸ್ಥಳಾಂತರಿಸಲು ಅಂದಾಜು ಪತ್ರಿಕೆಯನ್ನು ಮೇಲಧಿಕಾರಿಗಳ ಅನುಮತಿಗೆ ಕಳುಹಿಸಲಾಗಿದೆ. ಆದಷ್ಟು ಬೇಗ ಟೆಂಡರ್ ಕರೆದು ಟಿಸಿ ಸ್ಥಳಾಂತರಿಸಲಾಗುವುದು.

    | ವಿ.ಆರ್. ಸರ್ವಿ, ಹೆಸ್ಕಾಂ ನರೇಗಲ್ಲ ಶಾಖಾಧಿಕಾರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts