More

    ಅಪಾಯದಿಂದ ಪಾರಾದ ಕಾರ್ವಿುಕರು

    ರೋಣ: ತಾಲೂಕಿನ ಹೊನ್ನಾಪುರ ಹಳ್ಳದ ಬದಿಯ ಜಮೀನಿನಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ನಾಲ್ವರು ಕಾರ್ವಿುಕರನ್ನು ಮಂಗಳವಾರ ರಕ್ಷಿಸಲಾಯಿತು. 10 ಗಂಟೆಗೂ ಹೆಚ್ಚು ಕಾಲ ಪ್ರವಾಹದಲ್ಲಿ ಸಿಲುಕಿದ್ದ ಕಾರ್ವಿುಕರು ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ನಂತರ ಸುರಕ್ಷಿತ ಮರಳಿದ್ದು ನಿಟ್ಟುಸಿರು ಬಿಟ್ಟಿದ್ದಾರೆ.
    ಹೊನ್ನಾಪುರ ಗ್ರಾಮದ ಹಿರೇಹಳ್ಳದ ಸುತ್ತಲಿನ ಜಾಲಿಕಂಟಿ ಕಡಿದು ಇದ್ದಿಲು ತಯಾರಿಸಲು ಸ್ಥಳೀಯರೊಬ್ಬರು ಮಹಾರಾಷ್ಟ್ರದ ಲಾತೂರಿನ ದನುಜ, ರಾಮಚಂದ್ರ, ಬಸವರಾಜ, ರಾವಜಿ ಎಂಬುವವರನ್ನು ಕರೆತಂದು ಜಾಲಿ ಕಂಟಿ ತೆರವು ಮಾಡಿಸá-ತ್ತಿದ್ದರು. ಸೋಮವಾರ ತಡರಾತ್ರಿಯವರೆಗೆ ಕೆಲಸ ಮಾಡಿ ಮಲಗಿದ್ದಾಗ ರಾತ್ರಿ ಏಕಾಏಕಿ ಭಾರಿ ನೀರು ಬಂದು ಕಾರ್ವಿುಕರಿದ್ದ ಸ್ಥಳ ನಡುಗಡ್ಡೆಯಂತಾಗಿತ್ತು. ಅಗ್ನಿ ಶಾಮಕದಳದ ಸಿಬ್ಬಂದಿ ಬೋಟ್ ಮೂಲಕ ರಕ್ಷಿಸಿಸಲು ಮುಂದಾದರá-. ಆದರೆ, ಸಾಧ್ಯವಾಗಲಿಲ್ಲ. ಮಂಗಳವಾರ ನೀರಿನ ಹರಿವು ಇಳಿಕೆಯಾದ ನಂತರ ಪಕ್ಕದ ಡ.ಸ. ಹಡಗಲಿ ಗ್ರಾಮಸ್ಥರ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.
    ಏಕಾಏಕಿ ನೀರಿನ ಹರಿವು ಹೆಚ್ಚಳ
    ರೋಣ ತಾಲೂಕಿನ ಬಳಗೋಡ ಗ್ರಾಮದ ಶರಣಪ್ಪ ಗುದ್ನೆಣ್ಣವರ ಹಾಗೂ ಮಹಾಂತಯ್ಯ ಗಣಾಚಾರಿ ಎಂಬುವವರು ತಮ್ಮ ಜಮೀನಿನ ಶೆಡ್​ವೊಂದರಲ್ಲಿ ಮಲಗಿದ್ದರು. ಸೋಮವಾರ ರಾತ್ರಿ ಏಕಾಏಕಿ ಹಳ್ಳದ ಹರಿವು ಹೆಚ್ಚಾಗಿ ಇವರ ಜಮೀನು ನಡುಗಡ್ಡೆಯಂತಾಗಿತ್ತು. ದನ- ಕರುಗಳೊಂದಿಗೆ ಅಲ್ಲಿಯೇ ಸಿಲುಕಿದ್ದ ಅವರು ನೀರಿನ ಹರಿವು ಕಡಿಮೆಯಾದ ನಂತರ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts