More

    ಅಪರೂಪದ ಕಾಯಿಲೆಯ ಮಹಿಳೆಗೆ ಯಶಸ್ವಿ ಚಿಕಿತ್ಸೆ, ಕಿಮ್ಸ್​ ವೈದ್ಯರ ಸಾಧನೆ

    ಹುಬ್ಬಳ್ಳಿ: ಹೃದಯದ ಮೇಲೆ ಗಡ್ಡೆ ಬೆಳೆದು ಉಸಿರಾಟಕ್ಕೆ ತೀವ್ರ ತೊಂದರೆಪಡುತ್ತಿದ್ದ ಮಹಿಳೆಯೊಬ್ಬಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಮರುಜನ್ಮ ನೀಡುವ ಮೂಲಕ ಕಿಮ್್ಸ ವೈದ್ಯರು ಸಾಧನೆ ಮಾಡಿದ್ದಾರೆ.

    ತೀರಾ ಅಪರೂಪ ಎನ್ನಲಾಗುವ ಪೆರಿಕಾರ್ಡಿಯಲ್ ಸಿಸ್ಟ್ ಕಾಯಿಲೆಯಿಂದ ಬಳಲುತ್ತಿದ್ದ ಈ ಮಹಿಳೆ ಬಡತನದಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಇವರಿಗೆ ಕಿಮ್್ಸ ವೈದ್ಯರು ಉಚಿತ ಚಿಕಿತ್ಸೆ ನೀಡಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕಳೆದ ಫೆ. 17ರಂದು ಶಸ್ತ್ರ ಚಿಕಿತ್ಸೆ ನೀಡಿದ ವೈದ್ಯರು ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ನಗುಮೊಗದಿಂದ ಮಹಿಳೆ ಮನೆಗೆ ವಾಪಸಾಗಿದ್ದಾರೆ.

    ಏನಿದು ಕೇಸ್: ಸಾಮಾನ್ಯವಾಗಿ 10 ಲಕ್ಷಕ್ಕೊಬ್ಬರಿಗೆ ಕಾಣಸಿಗುವ ಪೆರಿಕಾರ್ಡಿಯಲ್ ಸಿಸ್ಟ್ ಕಾಯಿಲೆ ಕುಂದಗೋಳ ತಾಲೂಕಿನ ಕುಬಿಹಾಳದ ನೀಲಮ್ಮ ಎಂಬುವವರಲ್ಲಿ ಪತ್ತೆಯಾಗಿತ್ತು. 54 ವರ್ಷದ ಇವರಿಗೆ ಕೆಲವೊಮ್ಮೆ ಉಸಿರಾಟವೇ ನಿಂತು ಹೋಗಿ ತೀವ್ರ ತೊಂದರೆಪಡುತ್ತಿದ್ದರು. ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿಂದ ಇವರು ಬಳಲುತ್ತಿದ್ದರು.

    ನೀಲವ್ವಳ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದರು. ಆದರೆ, ಇವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂಬುದನ್ನು ಕೇಳಿ ಸುಮ್ಮನಾಗಿದ್ದರು. ನಂತರದಲ್ಲಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಿದರು.

    ಮಹಿಳೆಯ ತಪಾಸಣೆ ನಡೆಸಿದ ವೈದ್ಯರು, ಮುಂದಿನ ಕ್ರಮವಾಗಿ ಶಸ್ತ್ರ ಚಿಕಿತ್ಸೆ ಮಾಡಿ, ಹೃದಯದ ಮೇಲೆ ಬೆಳೆದಿದ್ದ ಗಡ್ಡೆಯನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನೀಲವ್ವ ಅವರು ಮೊದಲಿನ ರೀತಿ ಉಸಿರಾಟ ಮಾಡುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

    ಅತ್ಯಂತ ಕಠಿಣವಾದ, ರಕ್ತವು ಹೃದಯಕ್ಕೆ ಪಂಪ್ ಆಗುವುದರಲ್ಲಿಯೇ ಸಮಸ್ಯೆ ಇರುವ ಕಾಯಿಲೆಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ಅಂತಹ ಶಸ್ತ್ರ ಚಿಕಿತ್ಸೆಯನ್ನು ಕಿಮ್ಸ್​ನ ಹೃದ್ರೋಗ ತಜ್ಞ ಹಾಗೂ ಸರ್ಜನ್ ಡಾ. ಕೆ.ಎಂ. ಕಟ್ಟಿಮನಿ ಅವರ ನೇತೃತ್ವದ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಮಂಜುನಾಥ, ಯಲಗೂರಸ್ವಾಮಿ, ಸತೀಶ, ಜ್ಯೋತಿ, ಉಮರ್ ಇತರರು ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts