More

    ಅಪಪ್ರಚಾರ ನಿಲ್ಲಿಸಿ, ಚುನಾವಣೆ ಎದುರಿಸಿ

    ಮಾಲೂರು: ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಅಭ್ಯರ್ಥಿಗಳು ಮತ್ತು ಮುಖಂಡರು ಸೋಲುವ ಭೀತಿಯಿಂದ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ತಾಕತ್​ ಇದ್ದರೆ ಅಪಪ್ರಚಾರ ನಿಲ್ಲಿಸಿ ನ್ಯಾಯಯುತವಾಗಿ ಚುನಾವಣೆ ನಡೆಸಿ ಗೆದ್ದು ಬರಲಿ ಎಂದು ಪೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​ ಸವಾಲು ಹಾಕಿದರು.
    ಪಟ್ಟಣದ ಹಲವು ವಾರ್ಡ್​ಗಳಲ್ಲಿ ಮನೆ ಮನೆ ಪ್ರಚಾರದ ನಂತರ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಜನರ ಒತ್ತಾಸೆಯಂತೆ ಪೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರ ಬಂದಾಗ ಸಚಿವ ಡಾ.ಕೆ.ಸುಧಾಕರ್​ ಕರೆ ಮಾಡಿ ನಾಮಪತ್ರ ವಾಪಸ್​ ಪಡೆದರೆ ಎಂಎಲ್ಸಿ ಮಾಡುವ ಭರವಸೆ ನೀಡಿದರು. ಆದರೆ, ನಾಲ್ಕೆದು ವರ್ಷದಿಂದ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತ ಪ ಸಂಟನೆ ಮಾಡಿದ್ದು, ಜಾತಿ ಕಾರಣಕ್ಕೆ ಟಿಕೆಟ್​ ನಿರಾಕರಣೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ. ಆಗ ಅದಕ್ಕವರು ಶ್ರೀನಿವಾಸಪುರದಲ್ಲಿ ಟಿಕೆಟ್​ ಕೊಡಿಸುತ್ತೇನೆ, ಅಲ್ಲಿ ಸ್ಪರ್ಧಿಸಿ ಎಂದಿದ್ದರು. ಆದರೆ ಇದನ್ನೆಲ್ಲ ತಿರಸ್ಕರಿಸಿದ ನಾನು ಮಾಲೂರು ಬಿಟ್ಟು ಎಲ್ಲೂ ಹೋಗಲ್ಲ ಎಂದು ಹೇಳಿದ್ದೆ. ಇದು ನಮ್ಮ ಕಾರ್ಯಕರ್ತರ ಎದುರಲ್ಲೆ ಲೌಡ್​ಸ್ಪೀಕರ್​ ಇರಿಸಿ ಮಾತನಾಡಿದ್ದು. ಆದರೆ ಅದನ್ನು ರೆಕಾರ್ಡ್​ ಮಾಡಲಾಗಿದ್ದು, ಆ ಆಡಿಯೋವನ್ನು ಕೆಲವರು ತಿರುಚಿ, ನಾನು ಗೆದ್ದು ಬಿಜೆಪಿಗೆ ಬರುತ್ತೇನೆ ಎಂದು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್​, ಜೆಡಿಎಸ್​ನವರ ಪಾತ್ರವೂ ಇದೆ ಎಂದು ಆರೋಪಿಸಿದರು. ಈ ಅಪಪ್ರಚಾರದ ಉದ್ದೇಶ ನನ್ನ ಬೆಂಬಲಕ್ಕೆ ನಿಂತಿರುವ ಮುಸ್ಲಿಂ, ಪರಿಶಿಷ್ಟ ಸಮುದಾಯದ ಮತಗಳನ್ನು ತಪ್ಪಿಸುವುದಾಗಿದೆ. ಆದರೆ ಗೆದ್ದ ಮೇಲೆ ನಾನು ಯಾವ ಪಕ್ಕೂ ಸೇರುವುದಿಲ್ಲ. ಬಿಜೆಪಿ ಕೈಬಿಟ್ಟರೂ ಜನ ನನ್ನ ಕೈ ಬಿಡಲಿಲ್ಲ. ಹೀಗಾಗಿ ಜನರೇ ನನಗೆ ಹೈಕಮಾಂಡ್​. ಚುನಾವಣೆಯಲ್ಲಿ ಸೋಲು ಮತ್ತು ಗೆಲವು ಸಹಜ, ಯಾವ ಫಲಿತಾಂಶ ಬಂದರೂ ಸಮವಾಗಿ ಸ್ವೀಕರಿಸುತ್ತೇನೆ ಎಂದರು. 4 ವರ್ಷ ಬಿಜೆಪಿ ಸಂಟನೆ ಮಾಡಿ ಸರ್ಕಾರ, ಪದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರಿಗೆ ತಲುಪಿಸಿದ್ದೇನೆ. ಎಲ್ಲೂ ಯಾವ ಸಂದರ್ಭದಲ್ಲೂ ದರ್ಪ, ದೌರ್ಜನ್ಯದ ಮಾತುಗಳನ್ನು ಆಡಿಲ್ಲ. ಹೀಗಾಗಿ ಮತದಾರರು ಗೆಲ್ಲಿಸಿದರೆ ತಾಲೂಕಿನ ಚಿತ್ರಣವನ್ನು ಬದಲಿಸಿ ತೋರಿಸುತ್ತೇನೆ. ಬೆಂಗಳೂರಿಗೆ ಸಮನಾಗಿ ಮಾಲೂರನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ಜನ ಈ ಬಾರಿ ಬದಲಾವಣೆ ಬಯಸಿದ್ದು, ಫಲಿತಾಂಶದಲ್ಲಿ ನನ್ನ ಗುರುತು ಆಟೋ ಮುಂದಿರಲಿದೆ, ಯಾರ ಬಂಡವಾಳ ಏನೆಂಬುದು ಬಹಿರಂಗವಾಗಲಿದೆ. ಜನ ನನ್ನ ಸಭೆಗಳಿಗೆ ಭಾಗವಹಿಸುತ್ತಿರುವುದನ್ನು ನೋಡಿ ಮೂರೂ ಪದ ಅಭ್ಯರ್ಥಿಗಳಿಗೆ ನಡುಕ ಪ್ರಾರಂಭವಾಗಿದೆ ಎಂದರು.
    ಮುಖಂಡರಾದ ಆರ್​.ಪ್ರಭಾಕರ್​, ಹನುಮಪ್ಪ, ನೂಟುವೆ ವೆಂಕಟೇಶ್​ಗೌಡ, ಹರೀಶ್​ಗೌಡ ಇದ್ದರು.

    ಬಿಜೆಪಿ ಹಿರಿಯ ನಾಯಕ ಅಮಿತ್​ ಷಾ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಎಲ್ಲ ಸರ್ವೇ ರಿರ್ಪೊರ್ಟ್​ಗಳು ನನಗೆ ಟಿಕೆಟ್​ ಕೊಟ್ಟರೆ ಗೆಲ್ಲುತ್ತೇನೆಂದು ತಿಳಿಸಿದ್ದವು. ಆದರೆ ಜಾತಿ ಲೆಕ್ಕಾಚಾರದಲ್ಲಿ ಕೆಲವು ಜಿಲ್ಲಾ ಮತ್ತು ರಾಜ್ಯ ನಾಯಕರು ಟಿಕೆಟ್​ ತಪ್ಪಿಸಿದರು. ಹೂಡಿ ವಿಜಯಕುಮಾರ್ಪೇತರ ಅಭ್ಯರ್ಥಿ, ಮಾಲೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts