More

    ಅನ್ನಭಾಗ್ಯ ಯೋಜನೆಯ ಅಕ್ಕಿ ವಶ

    ಧಾರವಾಡ: ಅಕ್ರಮವಾಗಿ ಸಾಗಿಸುತ್ತಿದ್ದ 220 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ನಗರದ ಹೊರವಲಯದ ನರೇಂದ್ರ ಕ್ರಾಸ್ ಬಳಿ ಸೋಮವಾರ ಸಂಜೆ ವಶಪಡಿಸಿಕೊಳ್ಳಲಾಗಿದೆ.

    ಹುಬ್ಬಳ್ಳಿ ಅಮರಗೋಳ ಎಪಿಎಂಸಿಯಿಂದ 220 ಕ್ವಿಂಟಾಲ್ ಅಕ್ಕಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಹಾಗೂ ಗ್ರಾಮೀಣ ಠಾಣೆ ಪೊಲೀಸರು ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

    ಲಾರಿ, ಚಾಲಕ ಹಾಗೂ ಕ್ಲೀನರ್​ನನ್ನು ವಶಕ್ಕೆ ಪಡೆಯಲಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ತುಂಬಿ ಲಾರಿಗೆ ಹೇರಿ ತಾಡಪಾಲ ಮುಚ್ಚಲಾಗಿತ್ತು. ತಾಡಪಾಲ ತೆಗೆಸಿ ಪರಿಶೀಲಿಸಿದಾಗ ಅನ್ನಭಾಗ್ಯ ಅಕ್ಕಿ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಎಸಿ ಮಹ್ಮದ್ ಜುಬೇರ್ ತಿಳಿಸಿದ್ದಾರೆ. ಚಾಲಕನ ಬಳಿ ಅಮರಗೋಳ ಎಪಿಎಂಸಿ ಮಾರುಕಟ್ಟೆಯ ಶ್ರೀ ಬಾಲಾಜಿ ಟ್ರೇಡಿಂಗ್ ಕಂಪನಿಯ ರಸೀದಿ ಪತ್ತೆಯಾಗಿದೆ. ಕ್ವಿಂಟಾಲ್​ಗೆ 2110 ರೂ. ದರದಲ್ಲಿ ಒಟ್ಟು 4,64,200 ರೂ. ಬೆಲೆಯ 220 ಕ್ವಿಂಟಾಲ್ ಅಕ್ಕಿಯನ್ನು ಮಹಾರಾಷ್ಟ್ರ ರಾಜ್ಯದ ಕಪೋಲಿಯ ಜಯ್ ಆನಂದ ಫುಡ್ ಇಂಡಸ್ಟ್ರೀಸ್​ಗೆ ಕೆಎ 27, ಎ 2049 ಲಾರಿಯಲ್ಲಿ ಕಳುಹಿಸುತ್ತಿರುವುದಾಗಿ ರಸೀದಿಯಲ್ಲಿ ನಮೂದಾಗಿರುವುದು ಕಂಡುಬಂದಿದೆ. ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಆಹಾರ ಇಲಾಖೆ ನಿರ್ಲಕ್ಷ್ಯ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಇದೇ ಮೊದಲ ಪ್ರಕರಣವೇನಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಿಗಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದರಿಂದಾಗಿ ದೊಡ್ಡ ದೊಡ್ಡ ಕುಳಗಳು, ಅನ್ನಭಾಗ್ಯ ಮತ್ತು ಇತರ ಜನಪ್ರಿಯ ಯೋಜನೆಗಳಡಿ ಹಂಚಿಕೆ ಮಾಡಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಗೋವಾ, ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಿಗೆ ಸಾಗಿಸಿ ದುಂಡಗಾಗುತ್ತಿವೆ. ಒಮ್ಮೆ ರಾಜ್ಯದ ಗಡಿ ದಾಟಿದರೆ ಈ ಲಾರಿಯನ್ನು ಯಾರೂ ತಡೆಯುವುದಿಲ್ಲ. ತಡೆದರೂ ರಸೀದಿ ಇರುವುದರಿಂದ ಇದು ಅನ್ನಭಾಗ್ಯ ಯೋಜನೆ ಅಕ್ಕಿ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಅಕ್ರಮ ಸಾಗಾಟ ಕುರಿತು ಮಾಹಿತಿ ನೀಡಿದರೂ ಇಲಾಖೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೇ ಕಾರಣಕ್ಕಾಗಿ, ನ್ಯಾಯದ ಪರ ಇರುವ ಯಾರೋ ಅಪರಿಚಿತ ವ್ಯಕ್ತಿಗಳು ನೇರವಾಗಿ ಉಪ ವಿಭಾಗಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣ ಸರಿಯಾದ ತನಿಖೆಯಾದಲ್ಲಿ ಅಕ್ರಮ ಜಾಲದ ಹೂರಣ ಹೊರಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts