More

    ಅನಾರೋಗ್ಯಕ್ಕೆ ವಾಹನ ದಟ್ಟಣೆ ಕೂಡ ಕಾರಣ,ಆರ್‌ಟಿಒ

    ಚಿತ್ರದುರ್ಗ: ವಾಯು ಮಾಲಿನ್ಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳಸಿಂ ಗ್ ಹೇಳಿದರು. ಸಾರಿಗೆ ಇಲಾಖೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎನ್‌ಎಸ್‌ಎಸ್ ಘಟಕ ಆಶ್ರಯದೊಂದಿಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಶ್ವಾಸಕೋಶ ಸ್ವಚ್ಛವಾಗಿರಬೇಕಾದರೆ ಉತ್ತಮ ವಾತಾವರಣ, ಪರಿಸರ ಸ್ವಚ್ಛತೆ ತುಂಬಾ ಅಗತ್ಯ. ವಾಹನದಟ್ಟಣೆಯಿಂದ ಅನಾರೋಗ್ಯ ಸ ಮಸ್ಯೆ ಉಲ್ಬಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ತಕ್ಷಣ ಪ್ರಭಾವ ಉಂಟಾಗಿ ನೆಗಡಿ, ಕೆಮ್ಮಿನಂತ ಕಾಯಿಲೆಗಳಿಗೆ ಕಾರ ಣವಾಗುತ್ತದೆ.
    ವಾಯುಮಾಲಿನ್ಯ ನಿಯಂತ್ರಣದೆಡೆ ನಾವೆಲ್ಲರೂ ಗಮನಹರಿಸಬೇಕಿದೆ.

    ಗಿಡಮರಗಳು ವಾಯುಮಾಲಿನ್ಯದ ಅಡ್ಡ ಪರಿಣಾಮಗಳನ್ನು ನಿಯಂತ್ರಿಸಲು ಸಹಕಾರಿಯಾಗಿವೆ ಎಂದ ಅವರು, ರಸ್ತೆ ಸುರಕ್ಷತೆಯಡೆ ಜಾಗೃತಿ ಅಗತ್ಯವಿದೆ ಎಂದರು. ಸಾರಿಗೆ ಇಲಾಖೆ ಕಚೇರಿ ಅಧೀಕ್ಷಕ ಹೇಮಂತ್‌ಕುಮಾರ್ ಮಾತನಾಡಿ, ಪ್ರತಿ ವರ್ಷ ನವೆಂಬರ್‌ನಲ್ಲಿ ಇಲಾಖೆ ವಾಯು ಮಾಲಿನ್ಯ ಮಾಸಾಚರಣೆ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.
    ಸಮೂಹ ಸಾರಿಗೆ ಬಳಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನ ಬಳಸ ಬೇಕು. ಎಲೆಕ್ಟ್ರಾನಿಕ್ ವಾಹನ ಬಳಕೆ ಯಿಂದ ಶಬ್ಧ, ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು. ಮೋಟಾರು ವಾಹನಗಳ ನಿರೀಕ್ಷಕ ಟಿ.ಎಂ.ಪ್ರಕಾಶ್, ಪರಿ ಸರ ಅಧಿಕಾರಿ ಇ.ಪ್ರಕಾಶ್, ಸರ್ಕಾರಿ ಪಾಲಿಟೆಕ್ನಿಕ್‌ನ ಎಂ.ಸುಧಾ, ನಾಗೇಶ್, ಎನ್‌ಎಸ್‌ಎಸ್ ಅಧಿಕಾರಿ ಕೆ.ಜಗದೀಶ್, ಉಪನ್ಯಾಸಕಿ ಸೌಮ್ಯ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts