More

    ಅನಾಥಾಶ್ರಮಕ್ಕೆ ಮರು ಬಳಕೆ ವಸ್ತುಗಳ ಹಸ್ತಾಂತರ

    ಬೇಲೂರು: ‘ನನ್ನ ಜೀವನ ನಮ್ಮ ಸ್ವಚ್ಛ ನಗರ’ ಅಭಿಯಾನದಡಿ ಪಟ್ಟಣದ ನಾಗರಿಕರಿಂದ ಸಂಗ್ರಹಿಸಿದ್ದ ಮರು ಬಳಕೆ ವಸ್ತುಗಳನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಸ್ನೇಹ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ಅನಾಥಾಶ್ರಮದ ಮಕ್ಕಳಿಗೆ ನೀಡುತ್ತಿದ್ದೇವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ತಿಳಿಸಿದರು.

    ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿರುವ ಮರುಬಳಕೆ ವಸ್ತುಗಳ ಸಂಗ್ರಹ ಕೇಂದ್ರದಲ್ಲಿ ಅನಾಥಾಶ್ರಮದ ಸಿಬ್ಬಂದಿಗೆ ಮಂಗಳವಾರ ವಿವಿಧ ವಸ್ತುಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲೂ ನನ್ನ ಜೀವನ ನಮ್ಮಜ ಸ್ವಚ್ಛ ನಗರ ಅಭಿಯಾನದಡಿ ಮರು ಬಳಕೆ ವಸ್ತುಗಳಾದ ಬಟ್ಟೆ, ಎಲೆಕ್ಟ್ರಿಕ್ ವಸ್ತುಗಳು, ಹಳೆಯ ಪುಸ್ತಕಗಳು, ದಿನಪತ್ರಿಕೆ ಸೇರಿದಂತೆ ಇತರ ವಸ್ತುಗಳನ್ನು ನಾಗರಿಕರಿಂದ ಪ್ರತಿನಿತ್ಯ ಸಂಗ್ರಹಿಸಿಡಲಾಗಿತ್ತು, ಅದನ್ನು ಮತ್ತೆ ಬಳಕೆಯಾಗ ಬೇಕಾದರೆ ಯಾವುದಾದರೂ ಅನಾಥಾಶ್ರಮ ಅಥವಾ ನಿರ್ಗತಿಕರಿಗೆ ನೀಡಿದರೆ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ಅನಾಥಾಶ್ರಮಗಳನ್ನು ನಡೆಸುತ್ತಿರುವ ಸ್ನೇಹ ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಿಬ್ಬಂದಿಗೆ 280 ಕೆ.ಜಿ.ಗೂ ಹೆಚ್ಚು ವಸ್ತುಗಳನ್ನು ವಿತರಿಸುತಿದ್ದೇವೆ. ಆದರೆ ಈ ವಸ್ತುಗಳು ಎಲ್ಲೂ ದುರೂಪಯೋಗವಾಗದಂತೆ ತಿಳಿಸಿದ್ದೇವೆ ಎಂದರು.

    ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯೆ ರತ್ನ, ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಜ್ಯೋತಿ, ಪುರಸಭೆ ಸಿಬ್ಬಂದಿ ಮೋಹನೇಶ್, ಸ್ಥಳೀಯ ನಿವಾಸಿ ವೆಂಕಟೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts