More

    ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ


    ಗಜೇಂದ್ರಗಡ: ಸಮಾಜದ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ನೀಡಿದ ಸಮಯಾವಕಾಶ ಹೊರತುಪಡಿಸಿ ಇನ್ನಿತರ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸಿಪಿಐ ಸುನೀಲ ಸವದಿ ಹೇಳಿದರು.

    ಪಟ್ಟಣದ ವಿವಿಧ ವೃತ್ತ ಹಾಗೂ ರಸ್ತೆಗಳಲ್ಲಿ ಬಂದೋಬಸ್ತ್ ಹಾಗೂ ಪುರಸಭೆಯಿಂದ ಕಲ್ಪಿಸಿರುವ ಕಿರಾಣಿ ಅಂಗಡಿ ಮತ್ತು ತರಕಾರಿ ವ್ಯವಸ್ಥೆಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

    ಕರೊನಾ ಹರಡದಂತೆ ಈಗಾಗಲೇ ಜಿಲ್ಲಾಡಳಿತ ಎಲ್ಲ ಅಗತ್ಯ ಹಾಗೂ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಅಲ್ಲದೆ ಸಾರ್ವಜನಿಕರ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ತರಕಾರಿ, ಕಿರಾಣಿ ಹಾಗೂ ಕಾಯಿಪಲ್ಲೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಾರ್ವಜನಿಕರು ಅನಗತ್ಯವಾಗಿ ಹಾಗೂ ಸಕಾರಣವಿಲ್ಲದೆ ಅಲ್ಲಲ್ಲಿ ಗುಂಪು-ಗುಂಪಾಗಿ ಕುಳಿತುಕೊಳ್ಳುವುದು, ಬೈಕ್​ನಲ್ಲಿ ಸಂಚರಿಸುತ್ತಿದ್ದಾರೆ ಎನ್ನುವ ದೂರುಗಳಿವೆ. ಹೀಗಾಗಿ ನಿಮ್ಮ ಹಾಗೂ ನಿಮ್ಮವರ ಆರೋಗ್ಯದ ದೃಷ್ಟಿಯಿಂದ ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಸಾರ್ವಜನಿಕರು ಅಧಿಕಾರಿಗಳು ಹಾಗೂ ಇಲಾಖೆಯೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts