More

    ಅನಧಿಕೃತ ಲೇಔಟ್ ವಿರುದ್ಧ ಕಾರ್ಯಾಚರಣೆ

    ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಅಕ್ರಮ, ಅನಧಿಕೃತ ಲೇಔಟ್​ಗಳ ವಿರುದ್ಧ ಇನ್ನೊಂದು ವಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ನಾಗೇಶ ಕಲಬುರ್ಗಿ ಎಚ್ಚರಿಕೆ ನೀಡಿದ್ದಾರೆ.

    ಹುಡಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 30 ಹಾಗೂ ಧಾರವಾಡದಲ್ಲಿ 27 ಸೇರಿ ಒಟ್ಟು 57 ಅನಧಿಕೃತ ಲೇಔಟ್​ಗಳನ್ನು ಪ್ರಾಧಿಕಾರ ಗುರುತಿಸಿದೆ. ಈಗಾಗಲೇ ಅವುಗಳ ಮಾಲೀಕರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಸೂಕ್ತ ಉತ್ತರ ನೀಡದಿದ್ದರೆ ವಾರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು.

    ಒಂದೆರಡು ಎಕರೆ ಜಾಗದಲ್ಲಿ ಬರೀ ಕಲ್ಲು ನೆಟ್ಟು ನಿವೇಶನ ಮಾಡಿ 50-100 ರೂ. ಬಾಂಡ್ ಮೇಲೆ ಬರೆದು ಕೊಟ್ಟರೆ ಸಾಲದು. ಕಾನೂನು ಬದ್ಧವಾಗಿ ಎನ್​ಎ (ಕೃಷಿಯೇತರ) ಮಾಡಿ ಹುಡಾದಿಂದ ಪರವಾನಗಿ ಪಡೆದು ಲೇಔಟ್ ಮಾಡಬೇಕು. ಇಲ್ಲದಿದ್ದರೆ ಅಂತಹ ಲೇಔಟ್​ಗಳಲ್ಲಿನ ಕಲ್ಲುಗಳನ್ನು ಯಂತ್ರಗಳ ಮೂಲಕ ತೆರವು ಮಾಡಲಾಗುವುದು ಎಂದರು.

    50:50 ಒಪ್ಪಂದ: ರೈತರ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ವಸತಿ ವಿನ್ಯಾಸ ರಚಿಸಲು ಹುಡಾ ಈಗಾಗಲೇ ಉಣಕಲ್ಲ, ತಡಸಿನಕೊಪ್ಪ ಇತರೆಡೆ ಜಮೀನು ಗುರುತಿಸಿದ್ದು, ರೈತರು ದಾಖಲೆ ಹಾಜರುಪಡಿಸಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಬೇಡಿಕೆ ಸಮೀಕ್ಷೆ ಮಾಡಲಾಗುವುದು, ಅಂದಾಜು ಸಾವಿರ ಎಕರೆ ಭೂಮಿ ಪಡೆದು ವಸತಿ ವಿನ್ಯಾಸ ರಚಿಸುವ ಉದ್ದೇಶ ಹೊಂದಲಾಗಿದೆ ಎಂದು ಉತ್ತರಿಸಿದರು. ಭೈರಿದೇವರಕೊಪ್ಪದಲ್ಲಿ 2 ಎಕರೆ, ಧಾರವಾಡದ ದೊಡ್ಡನಾಯಕನ ಕೊಪ್ಪದಲ್ಲಿ 10 ಎಕರೆ ನಿವೇಶನ ಮಾಡಲು ಸದ್ಯಕ್ಕೆ ಜಮೀನು ಸಿದ್ಧವಿದ್ದು, ಶೀಘ್ರ ಅರ್ಜಿ ಕರೆದು ಅರ್ಹರಿಗೆ ಹಂಚಿಕೆ ಮಾಡಲಾಗುವುದು.

    ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ರಾಜಶೇಖರ್, ನಗರಯೋಜನಾ ಸದಸ್ಯ ವಿವೇಕ ಕಾರೇಕರ ಗೋಷ್ಠಿಯಲ್ಲಿದ್ದರು.

    ನಿವೇಶನ ಹರಾಜು: ಹುಡಾ ಬಳಿ ಬಾಕಿ ಉಳಿದಿರುವ 843 ಮೂಲೆ ಹಾಗೂ ಬಿಡಿ ನಿವೇಶನಗಳ ಇ- ಹರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 126 ಮೂಲೆ ನಿವೇಶನಗಳಿಗೆ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಲಕಮನಹಳ್ಳಿಯ ಲೇಔಟ್​ನಲ್ಲಿ 62 ನಿವೇಶನಗಳಿಗೆ 328 ಅರ್ಜಿ ಸ್ವೀಕೃತವಾಗಿವೆ. ಅದೇ ರೀತಿ ತಡಸಿನಕೊಪ್ಪದಲ್ಲಿ 275 ನಿವೇಶನಗಳಿದ್ದು, 3178 ಅರ್ಜಿಗಳು ಬಂದಿವೆ. ಅಮರಗೋಳದಲ್ಲಿ 300ಕ್ಕೂ ಹೆಚ್ಚು ನಿವೇಶನ ಬಾಕಿ ಇದ್ದು, ಎಲ್ಲವನ್ನೂ ಶೀಘ್ರ ಹಂಚಿಕೆ ಮಾಡಲಾಗುವುದು. ಮೂಲೆ ನಿವೇಶನಗಳ ಮಾರಾಟದಿಂದ ಸುಮಾರು 10 ಕೋಟಿ ರೂ.ಗೂ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ ಎಂದರು. ಧಾರವಾಡದ ಗಾಂಧಿನಗರ, ತಡಸಿನಕೊಪ್ಪದಲ್ಲಿ ಮೂರು ಕಡೆಗಳಲ್ಲಿ ಗುಂಪು ವಸತಿ ಯೋಜನೆಯಡಿ 22.95 ಕೋಟಿ ರೂ. ಅನುದಾನದಲ್ಲಿ 160 ಮನೆ ನಿರ್ವಿುಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಕೆಲಗೇರಿ, ಕೋಳಿಕೆರೆ ಹಾಗೂ ಸಾಧನಕೇರಿ ಕೆರೆ ಅಭಿವೃದ್ಧಿಗೆ 8 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

    ಸಂಘ-ಸಂಸ್ಥೆಗಳಿಗೆ ಸಿಎ ಸೈಟ್: ಅವಳಿನಗರದ ಬಡ ಸಂಘ-ಸಂಸ್ಥೆಗಳಿಗೆ ಸಿಎ ಸೈಟ್​ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 34 ನಾಗರಿಕ ಸೌಲಭ್ಯ ನಿವೇಶನಗಳಿದ್ದು, ಶೀಘ್ರ ವಿತರಣೆ ಮಾಡಲಾಗುವುದು. ನಗರದ ಕೆರೆಗಳ ಅಭಿವೃದ್ಧಿಗೆ ವಿಸõತ ಯೋಜನೆ ರೂಪಿಸಲಾಗಿದೆ. ಧಾರವಾಡ ಸಪ್ತಾಪುರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ವಿುಸಿದ್ದು, ಶೀಘ್ರ ಉದ್ಘಾಟನೆ ಮಾಡಿ ಮಳಿಗೆ ಹಂಚಿಕೆ ಮಾಡಲಾಗುವುದು. ದೊಡ್ಡ ನಾಯಕನಕೊಪ್ಪದಲ್ಲಿ ವಾಣಿಜ್ಯ ಸಂಕೀರ್ಣ ನಿರ್ವಿುಸಲಾಗುತ್ತಿದೆ ಎಂದು ನಾಗೇಶ ಕಲಬುರ್ಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts