More

    ಅಧ್ಯಾತ್ಮ ಚಿಂತನೆಗಳಿಂದ ಬದುಕು ಸಮೃದ್ಧ

    ಬಾಳೆಹೊನ್ನೂರು: ಒಳಿತಿನತ್ತ ಹೆಜ್ಜೆಹಾಕುವ ಗುರಿ ಎಲ್ಲ್ಲದಾಗಬೇಕು. ಬದುಕು ಎಷ್ಟೇ ಸಂಕಷ್ಟದಿಂದ ಕೂಡಿದ್ದರೂ ಬದುಕಿನ ಬೆಲೆ ಬಲು ದೊಡ್ಡದು. ಅಧ್ಯಾತ್ಮ ಚಿಂತನೆಗಳಿಂದ ಬದುಕು ಸಮೃದ್ಧಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರಾವಣ ತಪೋನುಷ್ಠಾನ ಅಂಗವಾಗಿ ರಂಭಾಪುರಿ ಪೀಠದಲ್ಲಿ ಶುಕ್ರವಾರ 31ನೇ ವರ್ಷದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಶ್ರಾವಣ ಮಾಸ ಶಿವ ಭಕ್ತರಿಗೆ ಪವಿತ್ರವಾದ ಮಾಸ. ಪೀಠದ ಮಠಗಳಲ್ಲಿ ಮತ್ತು ಧಾರ್ವಿುಕ ಕೇಂದ್ರಗಳಲ್ಲಿ ಶಿವನ ಪೂಜಾರಾಧನೆ ನಡೆಂ ುುತ್ತ ಬರುತ್ತಿದೆ. ಶಿವನೆಂದರೆ ಮಂಗಲದಾಯಕ. ಸುಖ, ಶಾಂತಿಯ ಬದುಕಿಗೆ ಶಿವನ ಪೂಜೆ, ಆರಾಧನೆ ಬಹಳ ಮುಖ್ಯ. ವೀರಶೈವ ಧರ್ಮ ಮೌಲ್ಯಯುತ ತತ್ವಗಳ ಅನುಸಂಧಾನದಿಂದಾಗಿ ಪ್ರಸಿದ್ಧಿ ಪಡೆದಿದೆ ಎಂದರು. ಜೀವನ ವಿಕಾಸಕ್ಕೆ ಸಂಸ್ಕಾರ ಬಲು ಮುಖ್ಯ. ನಿನ್ನೆ ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖ ಇರುವುದೆಂದು ವಿಜ್ಞಾನ ಹ ೇಳುತ್ತದೆ. ಸತ್ಯ ಮತ್ತು ಪ್ರಾಮಾಣಿಕ ಬದುಕಿನ ಆಚರಣೆಯಿಂದ ನಿತ್ಯ ಸುಖವಿದೆ ಎಂದು ಅಧ್ಯಾತ್ಮ ಸಾರುತ್ತದೆ. ಸಮಾಜದಲ್ಲಿ ಎಷ್ಟಾದರೂ ಸಂಘಟನೆಗಳಿರಲಿ. ಆದರೆ ಸಂಘರ್ಷಗಳು ಉಂಟಾಗಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ವಿಶ್ವ ಬಂಧುತ್ವದ ವಿಚಾರಧಾರೆಗಳಿವೆ. ಅವರ ಧಾರ್ವಿುಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳ ಮೂಲ ಸೆಲೆ ಎಂದು ಅಭಿಪ್ರಾಯಪಟ್ಟರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಗಂವ್ಹಾರ ಹಿರೇಮಠದ ವಿರೂಪಾಕ್ಷ ದೇವರು ಮತ್ತು ಅಕ್ಕಲಕೋಟಿ ತಾಲೂಕಿನ ಬಬಲಾದ ಹಿರೇಮಠದ ದಾನಯ್ಯ ದೇವರು ಶ್ರೀ ಜಗದ್ಗುರು ರೇಣುಕ ವಿಜಯ ಕುರಿತು ಪ್ರವಚನ ನೀಡಿದರು. ರವುಡಕುಂದ ಶ್ರೀಗಳು, ಹಲವಾರು ಗುರುಕುಲ ಸಾಧಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts